ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ: ಸರ್ಕಾರದ ಅಧಿಕೃತ ಆದೇಶಕ್ಕೆ ಕಾದು ಕುಳಿತ ಪೋಷಕರ ಸಂಘ

2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಪೋಷಕರ ಸಂಘ ಕಾದು ಕುಳಿತಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಪೋಷಕರ ಸಂಘ ಕಾದು ಕುಳಿತಿದೆ ಎಂದು ತಿಳಿದುಬಂದಿದೆ. 

ಹೈಕೋರ್ಟ್ ಆದೇಶ ಕುರಿತು ವಾಯ್ಸ್ ಆಫ್ ಪೇರೆಂಟ್ಸ್ ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. 

ಕಳೆದ ಸಾಲಿನಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.30 ಕಡಿತಗೊಳಿಸಿ ಸರ್ಕಾರ 2021ರ ಜ.29ರಂದು ಆದೇಶಿಸಿತ್ತು. ಜತೆಗೆ, ಶೇ.70 ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿತ್ತು. ಇದೀಗ ಹೈಕೋರ್ಟ್ 2020-21ನೇ ಸಾಲಿನ ಶುಲ್ಕದಲ್ಲಿ ಶೇ 15 ರಿಯಾಯಿತಿ ನೀಡಿ, ಬಾಕಿ ಶುಲ್ಕ ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದೆ. ಈ ಆದೇಶ ಕುರಿತು ನಿಮ್ಮಿಂದ ಯಾವುದೇ ಒಂದು ಅಧಿಕೃತ ಆದೇಶಗಳನ್ನೂ ನಾವು ನೋಡಿಲ್ಲ. ಈ ಕುರಿತು ಒಂದು ಟ್ವೀಟ್ ಕೂಡ ನೀವು ಮಾಡಿಲ್ಲ. ಹೀಗಾಗಿ ಈ ಕುರಿತು ಸ್ಪಷ್ಟ ಆದೇಶಗಳನ್ನು ಹೊರಡಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ. ಅಲ್ಲದೆ, ಶುಲ್ಕ ನಿರ್ಧರಿಸುವ ಕುರಿತು ಸಮಿತಿ ರಚನೆ ಮಾಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com