ಶೀಘ್ರದಲ್ಲಿಯೇ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಮೂರನೇ ಚುಚ್ಚುಮದ್ದು!

ಆರೋಗ್ಯ ಕಾರ್ಯಕರ್ತರಿಗೆ ಬಹು ನಿರೀಕ್ಷಿತ ಕೋವಿಡ್-19 ಮೂರನೇ ಚುಚ್ಚುಮದ್ದಿಗೆ ಮುಂದಿನ ವಾರದೊಳಗೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆರೋಗ್ಯ ಕಾರ್ಯಕರ್ತರಿಗೆ ಬಹು ನಿರೀಕ್ಷಿತ ಕೋವಿಡ್-19 ಮೂರನೇ ಚುಚ್ಚುಮದ್ದಿಗೆ ಮುಂದಿನ ವಾರದೊಳಗೆ ಅನುಮೋದನೆಯಾಗುವ ಸಾಧ್ಯತೆಯಿದೆ. ಕೋವಿಡ್-19 ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬರುವ ಆರೋಗ್ಯ ಕಾರ್ಯಕರ್ತರಿಂದ ಈ ಲಸಿಕೆಗೆ ಹೆಚ್ಚಿನ ಬೇಡಿಕೆಯಿರುವುದಾಗಿ ಮೂಲಗಳು ಖಚಿತಪಡಿಸಿವೆ.

ನಮ್ಮ ಅನೇಕ ಆರೋಗ್ಯ ಕಾರ್ಯಕರ್ತರು ಮರು ಸೋಂಕಿಗೆ ಒಳಗಾಗುವುದು ಮಾತ್ರವಲ್ಲ, ಅವರ ಪ್ರತಿಕಾಯಗಳು ಸಹ ಕ್ಷೀಣಿಸುತ್ತಿವೆ. ಕೋವಿಡ್-19 ಮೂರನೇ ಲಸಿಕೆಗೆ ಈಗಾಗಲೇ  ಪ್ರಸ್ತಾವನೆ ಸಲ್ಲಿಸಿದ್ದೇವೆ, ಮುಂಬರುವ ವಾರದಲ್ಲಿ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್‌ನ (PHANA) ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ. 

ಈ ಮಧ್ಯೆ ಎರಡನೇ ಡೋಸ್ ತೆಗೆದುಕೊಂಡು ಐದಾರು ತಿಂಗಳು ಆಗಿದ್ದು, ಪ್ರತಿಕಾಯಗಳು ಕ್ಷೀಣಿಸುತ್ತಿರುವ ಬಗ್ಗೆ ಅನೇಕ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಸಂಭಾವ್ಯ ಮೂರನೇ ಅಲೆ, ಡೆಲ್ಟಾ ರೂಪಾಂತರ ಮತ್ತು ಧೀರ್ಘ ಕೋವಿಡ್ ನ್ನು ಪರಿಗಣಿಸಿ ಮೂರನೇ ಚುಚ್ಚುಮದ್ದು ಗೆ ಆದ್ಯತೆ ನೀಡಲಾಗುತ್ತಿದೆ. ಪೂರೈಕೆ ಸಮಸ್ಯೆ ಹೆಚ್ಚಾಗಿಲ್ಲ, ಶೀಘ್ರದಲ್ಲಿಯೇ ಅನುಮೋದನೆ ದೊರೆಯುವ ಸಾಧ್ಯತೆಯಿರುವುದಾಗಿ ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ. 

ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಕೋವಿಡ್-19 ಚುಚ್ಚುಮದ್ದು ನೀಡುವುದನ್ನು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ಹೆಸರಾಂತ ವೈರಾಲಜಿಸ್ಟ್ ಡಾ ಟಿ ಜೇಕಬ್ ಜಾನ್ ಸಮ್ಮತಿಸಿದ್ದಾರೆ.  

ಕೆಲವು ಕೋವಿಡ್-ಸೋಂಕಿತ ಜನರಲ್ಲಿ ಪ್ರತಿಕಾಯದ ಮಟ್ಟವು 30,000 ದಿಂದ 40,000 ರಷ್ಟಿದ್ದರೂ, ಗಮನಾರ್ಹ ಸಂಖ್ಯೆಯ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಇದು 50 ಕ್ಕಿಂತ ಕಡಿಮೆ ಇದೆ. ಪ್ರತಿಕಾಯದ ಮಟ್ಟವು 60 ರಿಂದ 100 ಆಗಿದ್ದರೆ, ವ್ಯಕ್ತಿಯು ಪ್ರತಿಕಾಯ ಧನಾತ್ಮಕ ಎಂದು ನಾವು ಹೇಳಬಹುದು. ಅಂತಹ ಜನರಿಗೆ ಖಂಡಿತವಾಗಿಯೂ ಮೂರನೇ ಡೋಸ್ ನೀಡಬಹುದು ಎಂದು ಕರ್ನಾಟಕದ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ. 

ಸರ್ಕಾರ ಲಸಿಕೆ ಅಂತರವನ್ನು 60 ದಿನಗಳಿಗಿಂತ ಕಡಿಮೆ ಮಾಡುವ ಸಾಧ್ಯತೆಯಿದೆ. ಮುಂದಿನ ವಾರ ಇದು ಘೋಷಣೆಯಾಗುವ ನಿರೀಕ್ಷೆಯಿರುವುದಾಗಿ ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com