ಬೆಂಗಳೂರು: ನವೆಂಬರ್ 1 ರಿಂದ 3 ರವರೆಗೆ ಮಹಿಳಾ ಅಭ್ಯರ್ಥಿಗಳಿಗೆ ಅಗ್ನಿಪಥ್ ನೇಮಕಾತಿ

ಮಿಲಿಟರಿ ಪೊಲೀಸ್ ಪಡೆಯಲ್ಲಿ ಸಾಮಾನ್ಯ ಕರ್ತವ್ಯ ವಿಭಾಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ ಅಗ್ನಿಪಥ್ ನೇಮಕಾತಿ ರ್ಯಾಲಿಯು ಬೆಂಗಳೂರಿನ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನವೆಂಬರ್ 1 ರಿಂದ 3 ರವರೆಗೆ ನಡೆಯಲಿದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ರೈಲುಗಳಿಗೆ ಬೆಂಕಿ ಹಚ್ಚಿರುವುದು
ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ರೈಲುಗಳಿಗೆ ಬೆಂಕಿ ಹಚ್ಚಿರುವುದು
Updated on

ಬೆಂಗಳೂರು: ಮಿಲಿಟರಿ ಪೊಲೀಸ್ ಪಡೆಯಲ್ಲಿ ಸಾಮಾನ್ಯ ಕರ್ತವ್ಯ ವಿಭಾಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿಗಾಗಿ ಅಗ್ನಿಪಥ್ ನೇಮಕಾತಿ ರ್ಯಾಲಿಯು ಬೆಂಗಳೂರಿನ ಮಾಣೆಕ್ಷಾ ಪರೇಡ್ ಮೈದಾನದಲ್ಲಿ ನವೆಂಬರ್ 1 ರಿಂದ 3 ರವರೆಗೆ ನಡೆಯಲಿದೆ.

ಕರ್ನಾಟಕ, ಮಾಹೆ, ಕೇರಳ ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದಿಂದ ಸ್ವಯಂಸೇವಕ ಮಹಿಳಾ ಅಭ್ಯರ್ಥಿಗಳಿಗಾಗಿ ಹೆಚ್‌ಕ್ಯು ನೇಮಕಾತಿ ವಲಯ ಬೆಂಗಳೂರು ಆಶ್ರಯದಲ್ಲಿ ನೇಮಕಾತಿ ಕಚೇರಿ (ಹೆಚ್‌ಕ್ಯೂ) ಬೆಂಗಳೂರು ಈ ನೇಮಕಾತಿ ರ್ಯಾಲಿಯನ್ನು ನಡೆಸುತ್ತದೆ.

ಭಾರತೀಯ ಸೇನೆಯಲ್ಲಿ ಸೇನಾ ಪೊಲೀಸ್ ಕಾರ್ಪ್ಸ್‌ನಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ (ಮಹಿಳೆಯರು) ನೋಂದಣಿಗಾಗಿ ರ್ಯಾಲಿಯನ್ನು ನಡೆಸಲಾಗುತ್ತಿದೆ. ವಯಸ್ಸು, ಶಿಕ್ಷಣ ಅರ್ಹತೆ ಮತ್ತು ದಾಖಲಾತಿಗಾಗಿ ಇತರ ಮಾನದಂಡಗಳ ವಿವರಗಳನ್ನು 7 ಆಗಸ್ಟ್ 2022 ರಂದು ಪ್ರಧಾನ ಕಛೇರಿ ನೇಮಕಾತಿ ವಲಯ, ಬೆಂಗಳೂರು ಪ್ರಕಟಿಸಿದ ಅಧಿಸೂಚನೆಯಲ್ಲಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆನ್‌ಲೈನ್ ನೋಂದಣಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 7 ರವರೆಗೆ ತೆರೆದಿರುತ್ತದೆ. joinindianarmy.nic.in ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ. ಯಶಸ್ವಿಯಾಗಿ ನೋಂದಾಯಿಸಿದ ಅಭ್ಯರ್ಥಿಗಳ ಪ್ರವೇಶ ಕಾರ್ಡ್‌ಗಳನ್ನು ಅವರ ನೋಂದಾಯಿತ ಇಮೇಲ್‌ಗೆ ಅಕ್ಟೋಬರ್ 12 ಮತ್ತು 31 ರ ನಡುವೆ ಕಳುಹಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com