ಬೆಂಗಳೂರು: ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ರೌಡಿಶೀಟರ್‌ನಿಂದ ಚಾಕು ಇರಿತ, ಬೆನ್ನಟ್ಟಿ ಹಿಡಿದ ಪೊಲೀಸರು
ಬೆಂಗಳೂರು: ಮಹಿಳಾ ಕಾನ್ಸ್ಟೇಬಲ್ಗೆ ರೌಡಿಶೀಟರ್ ಓರ್ವ ಚಾಕು ಇರಿದು ಪರಾರಿಯಾಗಲು ಯತ್ನಿಸಿರುವ ಘಟನೆ ನಗರ ಹೆಎಎಲ್ ಠಾಣಾ ವ್ಯಾಪ್ತಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ಚಾಕು ಇರಿತಕ್ಕೊಳಗಾದ ಹೆಡ್ ಕಾನ್ಸ್ಟೇಬಲ್ ರನ್ನು ವಿನುತಾ ಎಂದು ಗುರುತಿಸಲಾಗಿದ್ದು, ರೌಡಿಶೀಟರ್ ಶೇಖ್ ಷರೀಫ್ ಈ ಕೃತ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ ಇದೇ ಆಗಸ್ಟ್ 5 ರಂದು ಆರೋಪಿಯನ್ನು ಬಂಧಿಸಲು ವಿನುತಾ ಹೋಗಿದ್ದರು. ಈ ವೇಳೆ ಕಾನ್ಸ್ಟೇಬಲ್ಗೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ.
ಇತ್ತೀಚೆಗಷ್ಟೇ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದನು. ಅಲ್ಲದೇ ಮತ್ತೆ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತ ಹಿನ್ನೆಲೆ ಪೊಲೀಸರು ಆತನನ್ನು ಠಾಣೆಗೆ ಕರೆತರಲು ಆಗಸ್ಟ್ 5 ರಂದು ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಹಾಗೂ ತಂಡ ಹೋಗಿತ್ತು.
ಆರೋಪಿ ಜ್ಯೋತಿನಗರದಿಂದ ರೆಡ್ಡಿ ಪಾಳ್ಯಕ್ಕೆ ತೆರಳುತ್ತಿರುವ ಬಗ್ಗೆ ಮಾಹಿತಿ ದೊರೆತ ಪೊಲೀಸರು, ಮಾಹಿತಿ ಆಧಾರದ ಮೇಲೆ ರಾತ್ರಿ 9.30ಕ್ಕೆ ಆತನನ್ನು ಕರೆದುಕೊಂಡು ಹೋಗಲು ತಂಡ ಮುಂದಾಗಿದೆ. ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದನು. ಆದರೆ ಸ್ಥಳೀಯರ ಸಹಾಯದಿಂದ ಆತನ್ನನ್ನು ಹಿಡಿದು ಠಾಣೆಗೆ ಕರೆತರಲಾಯಿತು. ಘಟನೆ ನಂತರ ಚಿಕಿತ್ಸೆ ಪಡೆದು ಇದೀಗ ಚೇರಿಸಿಕೊಂಡಿರುವ ಕಾನ್ಸ್ಟೇಬಲ್, ಆರೋಪಿ ವಿರುದ್ಧ ಐಪಿಸಿ 307, 353, 354 ಅಡಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ