‘ಸಿಎಫ್‌ಐ ಸೇರಿ' ಗೋಡೆಬರಹ ಒಂದೆರಡು ತಿಂಗಳ ಹಳೆಯದು: ಪೊಲೀಸರ ಮಾಹಿತಿ

ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ಪತ್ತೆಯಾದ ‘ಸಿಎಫ್‌ಐ ಸೇರಿ ಗೋಡೆಬರಹ’ ಒಂದೆರಡು ತಿಂಗಳ ಹಳೆಯದು ಎಂದು ಶಿವಮೊಗ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.
ಗೋಡೆ ಬರಹ ಅಳಿಸುತ್ತಿರುವ ಪೊಲೀಸರು.
ಗೋಡೆ ಬರಹ ಅಳಿಸುತ್ತಿರುವ ಪೊಲೀಸರು.
Updated on

ಶಿವಮೊಗ್ಗ: ಶಿರಾಳಕೊಪ್ಪ ಪಟ್ಟಣದ ವಿವಿಧೆಡೆ ಪತ್ತೆಯಾದ ‘ಸಿಎಫ್‌ಐ ಸೇರಿ ಗೋಡೆಬರಹ’ ಒಂದೆರಡು ತಿಂಗಳ ಹಳೆಯದು ಎಂದು ಶಿವಮೊಗ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಸೆಪ್ಟೆಂಬರ್ 4 ರಂದೇ ಈ ಗೋಡೆಬರಹಗಳ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಐದು ವರ್ಷಗಳ ಹಿಂದೆಯೇ ಸಿಎಫ್ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ )ಮೇಲೆ ನಿಷೇಧವನ್ನು ಹೇರಿತ್ತು.

ನ.28ರಂದು ಶಿರಾಳಕೊಪ್ಪದಲ್ಲಿ ಹಲವೆಡೆ ಗೋಡೆಗಳ ಮೇಲೆ ಸಿಎಫ್ಐ ಸೇರಿ ಎಂಬ ಬರಹಗಳು ಪತ್ತೆಯಾಗಿದ್ದವು. ಈ ಸಂಬಂಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆ ವೇಳೆ ಗಣೇಶ ಮೂರ್ತಿ ಮೆರವಣಿಗೆಯ ಹಳೆಯ ವಿಡಿಯೋಗಳನ್ನು ಪರಿಶೀಲಿಸಿದಾಗ ಸೆಪ್ಟೆಂಬರ್‌ಗೂ ಮುನ್ನವೇ ಈ ಗೋಡೆಬರಹಗಳ ಬರೆದಿರುವುದು ಕಂಡು ಬಂದಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಗುಪ್ತಚರ ವಿಭಾಗದ ಸಿಬ್ಬಂದಿಯೊಬ್ಬರು ಈ ಗೋಡೆಬರಹಗಳನ್ನು ಗಮನಿಸಿದ್ದರು. ನಂತರ ಅವರ ದೂರಿನ ಆಧಾರದ ಮೇಲೆ ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಶಿರಾಳಕೊಪ್ಪದಲ್ಲಿ ಸಾಮರಸ್ಯ ಕದಡುವುದು ಗೋಡೆಬರಹದ ಉದ್ದೇಶ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ, ಘಟನೆಯ ಸೂಕ್ಷ್ಮತೆಯನ್ನು ಅರಿತ ಪೊಲೀಸರು ಗೋಡೆಬರಹಗಳನ್ನು ಅಳಿಸಿಹಾಕಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕುರಿತು ಸಿಎಂ ಬೊಮ್ಮಾಯಿ ಭರವಸೆ
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಗೋಡೆ ಬರಹಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪಿಎಫ್‌ಐ ಮತ್ತು ಸಿಎಫ್‌ಐ ನಿಷೇಧಿಸಿದ ಬಳಿಕ ಹತಾಶಗೊಂಡು ಇಂತಹ ಕೃತ್ಯ ಎಸಗಲಾಗುತ್ತಿದೆ ಎಂದು ಹೇಳಿದ್ದಾರೆ.

ಇದಕ್ಕೆ ಕಾರಣರಾದವರ ವಿರುದ್ಧ ಶಿವಮೊಗ್ಗ ಪೊಲೀಸರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಇದನ್ನು ತೀವ್ರತವಾಗಿ ಖಂಡಿಸುತ್ತೇವೆ.ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಈ ರೀತಿ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com