ಆದಾಯದಲ್ಲಿ ಇಳಿಕೆ: ಬಜೆಟ್ ಗಾತ್ರ ಕಡಿತಗೊಳಿಸಲು ಬಿಬಿಎಂಪಿ ಚಿಂತನೆ

ಆದಾಯದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ 2023-24 ಸಾಲಿನ ಬಜೆಟ್‌ನ ಗಾತ್ರವನ್ನು ಕಡಿಮೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಆದಾಯದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ 2023-24 ಸಾಲಿನ ಬಜೆಟ್‌ನ ಗಾತ್ರವನ್ನು ಕಡಿಮೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿಯ ಹಲವು ಯೋಜನಗಳ ಅನುಷ್ಠಾನಕ್ಕೆ ರೂ.9,000 ಬಜೆಟ್ ಅಂದಾಜಿಸಲಾಗಿತ್ತು. ಆದರೆ, ಆದಾಯ ರೂ.4,000 ಕೋಟಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಇದನ್ನು ಅರಿತ ಬಿಬಿಎಂಪಿ, ಈ ಬಾರಿಯ ಬಜೆಟ್ ಗಾತ್ರವನ್ನು ಕಡಿಮೆ ಮಾಡಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

15 ದಿನಗಳಲ್ಲಿ ಎಲ್ಲ ಇಲಾಖೆಗಳ ಆದಾಯದ ಒಳಹರಿವು ಸಿದ್ಧವಾಗಲಿದ್ದು, ಸಾರ್ವಜನಿಕರ ಅಭಿಪ್ರಾಯ ಸ್ವೀಕರಿಸಿದ 15 ದಿನಗಳ ಬಳಿಕ ‘ವಾಸ್ತವ ಬಜೆಟ್‌’ ಸಿದ್ಧಪಡಿಸಿ ಮಂಡಿಸಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಹೇಳಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳು, ಶಿಕ್ಷಣ ಸಂಸ್ಥೆಗಳು ಮತ್ತು ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆಯತ್ತ ಗಮನ ಹರಿಸಲಾಗುವುದು ಎಂದು ತಿಳಿಸಿದ್ದಾರೆ.

“ಹೆಚ್ಚಿನ ಹಣದ ಅಗತ್ಯವಿರುವ ದೊಡ್ಡ ಯೋಜನೆಗಳು ಮತ್ತು ಇತರ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಯು ಅವುಗಳ ನಿರ್ವಹಣೆಯ ಹೊಣೆಯನ್ನು ಮಾತ್ರ ಹೊಂದಿರುತ್ತದೆ. ಬಿಬಿಎಂಪಿಯು ಅದರ ಸಂಪನ್ಮೂಲಗಳನ್ನು ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು, ಕಲ್ಯಾಣ ಕಾರ್ಯಕ್ರಮಗಳೊಂದಿಗೆ ನಗರ ಬಡವರ ಮೇಲೆ ಹೆಚ್ಚು ಗಮನಹರಿಸಬಹುದು ಮತ್ತು ಅದರ ಘನ ತ್ಯಾಜ್ಯ ನಿರ್ವಹಣೆಗೆ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.

ನಗರ ತಜ್ಞರೊಬ್ಬರು ಮಾತನಾಡಿ, ಪಾಲಿಕೆ ಬಜೆಟ್ ಕಸರತ್ತನ್ನು ‘ಸ್ಟಂಟ್’ ಎಂದು ಬಣ್ಣಿಸಿದ್ದಾರೆ. ‘ಕಂದಾಯ ರಸೀದಿಗಳು ಅಪ್ ಡೇಟ್ ಆಗಿಲ್ಲ, ಎಂದಿಗೂ ಪ್ರಾಮಾಣಿಕವಾಗಿಲ್ಲ. ಪಾಲಿಕೆಗೆ ಸೇರಿದ ಸುಮಾರು 25 ಲಕ್ಷ ಆಸ್ತಿಗಳಿದ್ದು, ಭೂಮಿಯನ್ನು ಸರಿಯಾಗಿ ಪರಿಶೀಲಿಸಿದರೆ, ಮಾಲೀಕತ್ವದ, ಬಾಡಿಗೆ ಮತ್ತು ವಾಣಿಜ್ಯದಂತಹ ಆಸ್ತಿಗಳು ಹಗರಣದ ಅಡಿಯಲ್ಲಿ ಬರುತ್ತವೆ. ಇವುಗಳ ರೂ.8,000 ಕೋಟಿ  ಆದಾಯ ಸಂಗ್ರಹದಿಂದ ಪಾಲಿಕೆ ಸ್ವಾವಲಂಬಿಯಾಗಬಹುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಕೆಟ್ಟ ಆಡಳಿತಕ್ಕೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಬ್ಬರೂ ಕಾರಣ ಎಂದು ಆರೋಪಿಸಿದರು.

"ಪಾಲಿಕೆಯು ಮೊದಲು ಪೂರ್ವ-ಆಡಿಟ್‌ಗೆ ಹೋಗಬೇಕು, ಪ್ರಮುಖ ಯೋಜನೆಗಳ ಪರಿಶೀಲನಾಪಟ್ಟಿಯನ್ನು ಸಿದ್ಧಪಡಿಸಬೇಕು. ನಂತರ ಬಜೆಟ್‌ ಮಂಡಿಸಬೇಕೆಂದು ಒತ್ತಾಯಿಸಿದ್ದಾರೆ.

ನಗರ ತಜ್ಞ ವಿ.ರವಿಚಂದರ್ ಮಾತನಾಡಿ, ಕೇವಲ ಜನಪ್ರಿಯತೆಗಾಗಿ ಮಾತ್ರವೇ ಬಿಬಿಎಂಪಿ ಬಜೆಟ್ ಮಂಡಿಸಲಿದೆ. ಬಿಬಿಎಂಪಿಯು ಬಜೆಟ್ ಅನ್ನು ಅತಿಯಾಗಿ ಹೇಳುವ ಪ್ರವೃತ್ತಿಯನ್ನು ಹೊಂದಿದೆ, ಆದರೆ ವಾಸ್ತವದಲ್ಲಿ ಅದರಲ್ಲಿ ಏನೂ ಇರುವುದಿಲ್ಲ. ನಿಜವಾದ ಬಜೆಟ್ ಘೋಷಿಸಲು ಮತ್ತು ಜಾರಿಗೆ ತರಲು ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ದೃಢತೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com