ಡಿಸೆಂಬರ್ ಮಧ್ಯಂತರದಲ್ಲಿ ರಾಜ್ಯದಲ್ಲಿ 'ನಮ್ಮ ಕ್ಲಿನಿಕ್' ಆರಂಭ

2022ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡ 'ನಮ್ಮ ಕ್ಲಿನಿಕ್' ಡಿಸೆಂಬರ್ ಮಧ್ಯಂತರದಲ್ಲಿ ಎರಡು ಹಂತಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2022ರಲ್ಲಿ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡ 'ನಮ್ಮ ಕ್ಲಿನಿಕ್' ಡಿಸೆಂಬರ್ ಮಧ್ಯಂತರದಲ್ಲಿ ಎರಡು ಹಂತಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್‌ ಯೋಜನೆ ಕುರಿತ ಪ್ರಗತಿ ಪರಿಶೀಲನೆಗಾಗಿ ಆಯುಕ್ತರು ಸೋಮವಾರ ಸಭೆ ನಡೆಸಿದರು.

ಬಳಿಕ ಮಾತನಾಡಿದ ತ್ರಿಲೋಕ್ ಚಂದ್ರ ಅವರು, ನಮ್ಮ ಕ್ಲಿನಿಕ್ ಸ್ಥಾಪನೆಗೆ ಪ್ರತಿ ಕ್ರಿನಿಕ್'ಗೆ ಸುಮಾರು ರೂ.3 ಲಕ್ಷ ವೆಚ್ಚವಾಗಲಿದೆ. ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ಸುಮಾರು ರೂ.7.3 ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿ 108 ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುವುದು ಮತ್ತು ಉಳಿದ 153 ಕ್ಲಿನಿಕ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಭಾಗಿಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್.ಬಾಲಸುಂದರ್ ಮಾತನಾಡಿ, ನಮ್ಮ ಕ್ಲಿನಿಕ್'ನ ನಾಗರೀಕ ಕಾಮಗಾರಿ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಎಲ್ಲಾ 243 ಕ್ಲಿನಿಕ್‌ಗಳಿಗೆ ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಮತ್ತು ಗ್ರೂಪ್ ಡಿ ನೌಕರರ ನೇಮಕಾತಿಯೂ ಪೂರ್ಣಗೊಂಡಿದೆ, 150 ಕ್ಲಿನಿಕ್‌ಗಳನ್ನು ಸರ್ಕಾರಿ ಕಟ್ಟಡಗಳಲ್ಲಿ ಸ್ಥಾಪಿಸಲಾಗಿದ್ದು, ಉಳಿದವುಗಳನ್ನು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಮ್ಮ ಕ್ಲಿನಿಕ್ ಗಳ ಗುಣಮಟ್ಟ ಕಳಪೆಮಟ್ಟದ್ದಾಗಿದೆ ಎಂಬ ದೂರುಗಳು ಕೇಳಿಬಂದಿರುವ ಕುರಿತು ಮಾತನಾಡಿ, ನಮ್ಮ ಕ್ಲಿನಿಕ್ ಉಪಕೇಂದ್ರ ಮಟ್ಟದ ಆರೋಗ್ಯ ಚಿಕಿತ್ಸಾಲಯಗಳಾಗಿದ್ದು, ಮೂಲಭೂತ ಪ್ರಾಥಮಿಕ ಆರೈಕೆಯನ್ನು ಒದಗಿಸುತ್ತವೆ ಎಂದು ಸ್ಪಷ್ಟಪಡಿಸಿದರು.

ಮಧುಮೇಹ, ಮಾನಸಿಕ ಅಸ್ವಸ್ಥತೆ, ಅಧಿಕ ರಕ್ತದೊತ್ತಡ ಅಥವಾ ಇತರ ಸಾಂಕ್ರಾಮಿಕ ಅಥವಾ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಕ್ಲಿನಿಕ್‌ಗಳು ಪ್ರಾಥಮಿಕ ಆರೈಕೆ ಅಥವಾ ಸಲಹೆಯನ್ನು ನೀಡುತ್ತವೆ ಎಂದು ಹೇಳಿದರು.

ಆರೋಗ್ಯ ಇಲಾಖೆಯು ಬಡ ಜನರಿಗೆ ಮೂಲಭೂತ ಆರೋಗ್ಯ ಸೇವೆಯನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಬಿಬಿಎಂಪಿ ಗಡುವುಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ನಮ್ಮ ಕ್ಲಿನಿಕ್ ಗಳ ಪ್ರಾರಂಭಿಸಲು ಆರೋಗ್ಯ ಇಲಾಖೆಯ ಆದೇಶಕ್ಕಾಗಿ ಕಾಯುತ್ತಿದ್ದೇವೆಂದು ತಿಳಿಸಿದರು.

ಶೀಘ್ರದಲ್ಲೇ ಆಯುಷ್ಮಾನ್ ಕಾರ್ಡ್ ಗಳ ವಿತರಣೆ
ರಾಜ್ಯ ಆರೋಗ್ಯ ಇಲಾಖೆಯು ಡಿಸೆಂಬರ್ 8 ರಿಂದ 5.09 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ವಿತರಣೆಯನ್ನು ಪ್ರಾರಂಭಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com