ವಿಧಾನಸಭೆ ಅಧಿವೇಶನ ಆರಂಭ; ಅಗಲಿದ ರಾಜಕೀಯ ನಾಯಕರಿಗೆ ಸಂತಾಪ ಸೂಚನೆ..!

ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ. ಈಗಾಗಲೇ ಕಲಾಪ ಆರಂಭವಾಗಿದ್ದು, ಇಹಲೋಕ ತ್ಯಜಿಸಿದ ರಾಜಕೀಯ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
Updated on

ಬೆಳಗಾವಿ: ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ. ಈಗಾಗಲೇ ಕಲಾಪ ಆರಂಭವಾಗಿದ್ದು, ಇಹಲೋಕ ತ್ಯಜಿಸಿದ ರಾಜಕೀಯ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭೆಯ ಹಾಲ್ ನಲ್ಲಿ ಮೊದಲು ಸ್ವಾಮಿ ವಿವೇಕಾನಂದ, ಬಸವಣ್ಣ, ಮಹಾತ್ಮಾ ಗಾಂಧಿಜಿ, ವೀರ ಸಾವರ್ಕರ್, ಡಾ.ಬಿ.ಆರ್ ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಭಾವಚಿತ್ರಗಳನ್ನು ಸಿಎಂ ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅನಾವರಣ ಮಾಡಿದರು.

ಬಳಿಕ ವಿಧಾನಸಭೆ ಕಲಾಪ ಆರಂಭವಾಗಿದ್ದು, ಕಲಾಪದಲ್ಲಿ ಮೊದಲಿಗೆ ಅಗಲಿದ ಗಣ್ಯರಾದ ಆನಂದ್ ಮಹಾಮನಿ, ಮುಲಾಯಂ ಸಿಂಗ್ ಯಾದವ್, ಕುಂಬಳೆ ಸುಂದರ್ ರಾವ್, ಶ್ರೀಶೈಲಪ್ಪ ಬಿದರೂರು, ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಡಿಸಿದ ಸಂತಾಪ ಸೂಚನೆ ನಿರ್ಣಯಕ್ಕೆ‌ ಬೆಂಬಲ ಸೂಚಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಉಪ ಸ್ಪೀಕರ್ ಆನಂದ್ ಮಾಮನಿ ಹಾಗೂ ನಮ್ಮ ಕುಟುಂಬದ ನಡುವೆ ಹಲವು ವರ್ಷಗಳ ಸಂಬಂಧ ಹಾಗೂ ಒಡನಾಟ ಇದೆ. ನಾನು‌ ಹಾಗೂ ಮಾಮನಿ ಜೊತೆಗೆ ಬಿಜೆಪಿ ಸೇರ್ಪಡೆ ಆಗಿದ್ದೆವು. ಶಾಸಕರಾಗಿ ಎರಡು ಮೂರು ತಿಂಗಳಲ್ಲಿ‌ ಸರ್ಕಾರದ ವ್ಯವಸ್ಥೆಯನ್ನು ತಿಳಿದುಕೊಂಡಿದ್ದರು. ಅವರು ಮಾದರಿ ಶಾಸಕಾಗಿದ್ದರು ಎಂದು ನಾನೇ ಶ್ಲಾಘನೆ ಮಾಡಿದ್ದೆ ಎಂದು ಹೇಳಿದರು.

ನೀರಾವರಿಗೆ ಸಾಕಷ್ಟು ಒತ್ತು ಕೊಟ್ಟಿದ್ದರು. ಅವರಿಗೆ ಅನಾರೋಗ್ಯ ಇದ್ದಾಗಲೂ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಸೂಕ್ತ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು ಎಂದು ತಿಳಿಸಿದರು.

ಇನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮಲಾಯಂ ಸಿಂಗ್ ಯಾದವ್ ಕರ್ನಾಟಕದಲ್ಲೂ ಸಮಾಜವಾದಿ ಪಕ್ಷ ಕಟ್ಟುವ ಪ್ರಯತ್ನ ನಡೆಸಿದ್ದರು. ಬಂಗಾರಪ್ಪ ಅವರ ಮೂಲಕ ಈ ಪ್ರಯತ್ನ ನಡೆದಿತ್ತು. ತಮ್ಮ ವಿರೋಧಿ ಸಿದ್ಧಾಂತದವರನ್ನು‌ ಗೌರವದದಿಂದ‌ ಕಾಣುತ್ತಿದ್ದರು ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಜನಪರ ಹಾಗೂ ರೈತರ ಪರ ಕಾಳಜಿ ಹೊಂದಿದ್ದರು. ಅವರ ಅಕಾಲಿಕ ಮರಣ ನೋವು ತಂದಿದೆ ಎಂದು ಹೇಳಿದರು.

ಮುಲಾಯಂ ಸಿಂಗ್ ಯಾದವ್, ದೀರ್ಘ ಕಾಲ ರಾಜಕಾರಣ ಮಾಡಿದ ಕೆಲವೇ ಕೆಲವು ರಾಜಕಾರಣಿಗಳ ಪೈಕಿ ಮುಲಾಯಂ ಸಿಂಗ್ ಯಾದವ್ ಒಬ್ಬರು. ಉತ್ತರ ಪ್ರದೇಶದಲ್ಲಿ ಜನಪ್ರಿಯ ರಾಜಕಾರಣಿಯಾಗಿದ್ದರು. ಸಾಮಾಜಿಕ ನ್ಯಾಯದ ಪರವಾಗಿದ್ದರು. ಮೀಸಲಾತಿಯ ಪರವಾಗಿದ್ದರು ಎಂದು ಸ್ಮರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com