30ಕ್ಕಿಂತ ಹೆಚ್ಚು ಆಸನವಿರುವ 'ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ ಕಡ್ಡಾಯ: ಬಿಬಿಎಂಪಿ ಆದೇಶಕ್ಕೆ ಮಾಲೀಕರ ವಿರೋಧ

ಸಿಲಿಕಾನ್‌ ಸಿಟಿಯ 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ ಮಾಡುವಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದ್ದು, ಇದು ಹೊಟೆಲ್ ಮಾಲೀಕರ ವಿರೋಧಕ್ಕೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಸಿಲಿಕಾನ್‌ ಸಿಟಿಯ 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ ಮಾಡುವಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದ್ದು, ಇದು ಹೊಟೆಲ್ ಮಾಲೀಕರ ವಿರೋಧಕ್ಕೆ ಕಾರಣವಾಗಿದೆ.

ಧೂಮಪಾನ ಮತ್ತು ಮಧ್ಯಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ ಸಹ ಇಂದಿನ ಯುವಜನತೆ ಇದರ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನ ನಿಯಂತ್ರಣಕ್ಕಾಗಿ ಇದೀಗ ಬಿಬಿಎಂಪಿ ಹೊಸ ಪ್ಲ್ಯಾನ್‌ ಮಾಡಿದ್ದು, ಇನ್ಮುಂದೆ ಬೆಂಗಳೂರಿನ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ (Smoking Zone)ಕಡ್ಡಾಯ ಮಾಡಬೇಕೆಂದು ಆದೇಶ ನೀಡಿದೆ. ಹೋಟೆಲ್‌ ಗೆ ಎಂಟ್ರಿ ಕೊಡುವವರು ಇನ್ಮುಂದೆ ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲಿ ಸ್ಕೂಕ್‌ ಮಾಡುವಂತಿಲ್ಲ. ಇದನ್ನು ಕಡಿವಾಣ ಹಾಕುವ ಉದ್ದೇಶದಿಂದ ಹೋಟೆಲ್‌ನವರಿಗೆ ಹೇಳೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಬೆಂಗಳೂರಿನ ಹೋಟೆಲ್‌ಗಳಿಗೆ ಈ ನೋಟಿಸ್‌ ನೀಡಿದ್ದು, ಹೊಸ ನಿಯಮವನ್ನು ಜಾರಿಗೆ ತಂದಿದೆ.

ಬೆಂಗಳೂರು ಬಿಬಿಎಂಪಿ ಆದೇಶದಲ್ಲಿರುವಂತೆ, 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್​​ಗಳಲ್ಲಿ ಸ್ಮೋಕಿಂಗ್​ ಝೋನ್​ ಕಡ್ಡಾಯವಾಗಿದೆ. COTPA 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್​ ಝೋನ್​ ಮಾಡುವುದು ಕಡ್ಡಾಯ ಮತ್ತು ಬಾರ್​, ರೆಸ್ಟೋರೆಂಟ್​​, ಕಾಫಿ ಡೇಗಳಲ್ಲಿ ಕೂಡ ಸ್ಮೋಕಿಂಗ್​ ಝೋನ್​ ಮಾಡಬೇಕು ಎಂದು  ಹೇಳಲಾಗಿದೆ. ಅಂತೆಯೇ ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ. ಸ್ಮೋಕಿಂಗ್​ ಝೋನ್​ ಮಾಡದೇ ಉದ್ಯಮ ನಡೆಸುತ್ತಿರುವುದು ಕಾನೂನಿನ ಉಲ್ಲಂಘನೆಯಾಗಲಿದೆ. ಶ್ರೀಘ್ರದಲ್ಲಿ ಸ್ಮೋಕಿಂಗ್​ ಝೋನ್ ಮಾಡಬೇಕು ತಪ್ಪಿದ್ರೆ ಲೈಸೆನ್ಸ್​ ರದ್ದು ಮಾಡಲಾಗುತ್ತೆ ಎಂದು ಬಿಬಿಎಂಪಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಅವೈಜ್ಞಾನಿಕ ಆದೇಶ ಎಂದ ಮಾಲೀಕರು
ಬಿಬಿಎಂಪಿ ನೋಟಿಸ್‌ ಬೆನ್ನಲ್ಲೆ ಇದೀಗ ಕೆಲ ಹೋಟೆಲ್‌ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿರೋ ಹಳೆಯ ಹೊಟೇಲ್‌ಗಳಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸಲು ಜಾಗವಿಲ್ಲ. ಹೊಸ ಹೊಟೇಲ್‌ಗಳಲ್ಲಾದ್ರೂ ಇದನ್ನು ಚಾಲ್ತಿಗೆ ತರಬಹುದಾಗಿದೆ. ಚಾಲ್ತಿಗೆ ತಂದ್ರೂ ಮಹಿಳಾ ಹಾಗೂ ಮಕ್ಕಳು ಹೊಟೇಲ್‌ಗೆ ಬರೋದು ಕಡಿಮೆಯಾಗುತ್ತೆ. ಮತ್ತೊಂದೆಡೆ, ಬಿಬಿಎಂಪಿ ನೀಡಿರೋ ಈ ನೋಟಿಸ್ ಅವೈಜ್ಞಾನಿಕವಾಗಿದೆ.

ಸಿಗರೇಟ್ ಸೇದೋದೇ ಆರೋಗ್ಯಕ್ಕೆ ಹಾನಿಕಾರಕ, ಹೀಗಿರುವಾಗ ಸ್ಮೋಕಿಂಗ್ ಝೋನ್ ಮಾಡಿ ಅದನ್ನು ಉತ್ತೇಜಿಸಿದಂತಾಗುತ್ತೆ ಅನ್ನೋದು ಹೊಟೇಲ್ ಮಾಲೀಕರ ವಾದ. ಒಟ್ಟಾರೆ, ಬಿಬಿಎಂಪಿ ಸ್ಮೋಕಿಂಗ್ ಝೋನ್ ಆದೇಶ, ಹೋಟೆಲ್ ಮಾಲೀಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಸದ್ಯದಲ್ಲೇ ಬಿಬಿಎಂಪಿ ಆಯುಕ್ತರನ್ನ ಭೇಟಿ ಮಾಡಿ, ಆದೇಶ ವಾಪಾಸ್ ಪಡೆಯಲು ಮನವಿ ಮಾಡ್ತೀವಿ ಅಂತ ಹೋಟೆಲ್ ಅಸೋಸಿಯೇಷನ್ ಹೇಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com