ರಾಜ್ಯ

ಆರ್ಸೆಲರ್ ಮಿತ್ತಲ್ ಗೆ ಹಂಚಿಕೆಯಾದ 5 ಸಾವಿರ ಎಕರೆ ಭೂಮಿ ವಾಪಸ್: ಸಿಎಂ ಬೊಮ್ಮಾಯಿ

ಆರ್ಸೆಲರ್ ಮಿತ್ತಲ್ ಗೆ ಹಂಚಿಕೆಯಾದ 5 ಸಾವಿರ ಎಕರೆ ಭೂಮಿ ವಾಪಸ್: ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Published On :

ಬೆಳಗಾವಿ: ಒಂದು ದಶಕದ ಹಿಂದೆ ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಕ್ಕು ಉತ್ಪಾದಕ ಆರ್ಸೆಲರ್ ಮಿತ್ತಲ್‌ಗೆ ಕೆಐಎಡಿಬಿಯಿಂದ ಹಂಚಿಕೆ ಮಾಡಿದ್ದ ಸುಮಾರು 5,000 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.

ಇಂದು ವಿಧಾನಸಭೆಯಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತಮಾಡಿದ ಸಿಎಂ, ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದು, ಆ ವೇಳೆ ಭೂಮಿ ವಿಚಾರ ಪ್ರಸ್ತಾಪಿಸಿದೆ ಮತ್ತು ಭೂಮಿ ಸದ್ಬಳಕೆ ಮಾಡಿಕೊಳ್ಳಿ ಇಲ್ಲವೆ ವಾಪಸ್ ನೀಡಿ ಎಂದು ಅವರಿಗೆ ಹೇಳಿದೆ ಎಂದರು.

ಆದರೆ ಅವರು ಪರ್ಯಾಯ ಯೋಜನೆ ರೂಪಿಸುವುದಾಗಿ ಹೇಳಿದರು. ಹೀಗಾಗಿ ಅವರಿಗೆ ನೋಟಿಸ್ ನೀಡಿದ್ದೇವೆ. ಮಿತ್ತಲ್ ಗೆ ಹಂಚಿಕೆಯಾದ 5,000 ಎಕರೆ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

2010 ರಲ್ಲಿ, ಬಳ್ಳಾರಿಯ ಕುಡಿತಿನಿ ಮತ್ತು ಹರಗಿನದೋಣಿ ಗ್ರಾಮಗಳಲ್ಲಿ ಸ್ಟೀಲ್ ಪ್ಲಾಂಟ್‌ಗಾಗಿ ರಾಜ್ಯ ಸರ್ಕಾರ ಸುಮಾರು 5,000 ಎಕರೆ ಭೂಮಿ ಹಂಚಿಕೆ ಮಾಡಿತ್ತು. ಈ ಜಾಗದಲ್ಲಿ ಆರ್ಸೆಲರ್ ಮಿತ್ತಲ್ 30,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.