ಹೊಸವರ್ಷಕ್ಕೆ ಕ್ಷಣಗಣನೆ ಆರಂಭ: ನಗರದ ರಸ್ತೆಗಳಲ್ಲಿ ದೀಪಗಳ ಬೆಳಗಿಸಿ, ಖಾಸಗಿ ಸಿಬ್ಬಂದಿಗಳ ನಿಯೋಜಿಸಿ ಪೊಲೀಸರಿಗೆ ನೆರವಾಗುತ್ತಿರುವ ಅಂಗಡಿ ಮಾಲೀಕರು

ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು-ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎರಡು ವರ್ಷಗಳ ಬಳಿಕ ಅತ್ಯಂತ ವಿಜೃಂಭಣೆ, ಮೋಜು-ಮಸ್ತಿಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಸಜ್ಜಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ 2021 ಹಾಗೂ 2020ರ ಹೊಸ ವರ್ಷ ಸ್ವಾಗತ ಸಂಭ್ರಮಾಚರಣೆಗೆ ಪೂರ್ಣ ನಿರ್ಬಂಧ ಇತ್ತು. ಈ ಬಾರಿ ಮುಂಜಾಗ್ರತಾ ಕ್ರಮಗಳೊಂದಿಗೆ ಹೊಸವರ್ಷ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಶನಿವಾರ ಮಧ್ಯರಾತ್ರಿ 12ಕ್ಕೆ ಹೊಸ ವರ್ಷವನ್ನು ಸ್ವಾಗತಿಸಲು ಜನರು ತಮ್ಮ ಅಭಿರುಚಿಗೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಹೊಸವರ್ಷ ಆಚರಣೆಯ ಕೇಂದ್ರ ಬಿಂದುವಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್'ಗೆ ಸಾರ್ವಜನಿಕರಿಗೆ ಕಳೆದೆರಡು ವರ್ಷಗಳ್ಲಿ ಡಿ.31 ಮಧ್ಯರಾತ್ರಿ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಅನುಮತಿ ನೀಡಲಾಗಿದ್ದು, ಯಾರಿ ಜೋರಾಗಿದೆ. ಈ ರಸ್ತೆಗಳ ಪ್ರತಿ ಅಂಗಡಿಗಳ ಮಾಲೀಕರು ಪೊಲೀಸರಿಗೆ ನೆರವಾಗಲು ಮುಂದಾಗಿದ್ದು, ದೀಪಗಳ ಬೆಳಗಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತಮ್ಮದೇ ಖಾಸಗಿ ಸಿಬ್ಬಂದಿಗಳನ್ನು ನಿಯೋಜಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿರುವ ಬ್ರಿಗೇಡ್ ಶಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ ಅಸೋಸಿಯೇಷನ್ ​​ಮತ್ತು ಕಮರ್ಷಿಯಲ್ ಸ್ಟ್ರೀಟ್ ಅಸೋಸಿಯೇಷನ್‌ನಂತಹ ವರ್ತಕರ ಸಂಘಗಳು ಪೊಲೀಸರಿಗೆ ನೆರವಾಗಲು ಮುಂದಾಗಿದ್ದಾರೆ.

ಬ್ರಿಗೇಡ್‌ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸುಹೇಲ್‌ ಯೂಸುಫ್‌ ಮಾತನಾಡಿ, ಹೊಸ ವರ್ಷಕ್ಕೆ ಬ್ರಿಗೇಡ್‌ ರಸ್ತೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಈಗಾಗಲೇ ಪೊಲೀಸ್‌ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. "ಪೊಲೀಸರಿಗೆ ಉತ್ತಮ ಗೋಚರತೆಯನ್ನು ಒದಗಿಸಲು ಬ್ರಿಗೇಡ್ ರಸ್ತೆಯಲ್ಲಿ ದೀಪಗಳ ಬೆಳಕಿಸಲು ನಾವು 13 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ" ಎಂದು ಹೇಳಿದ್ದಾರೆ.

ಚರ್ಚ್ ಸ್ಟ್ರೀಟ್ ನಿವಾಸಿಗಳ ಸಂಘದ ಅಧ್ಯಕ್ಷ ದೀಪಕ್ ಬಟಾವಿಯಾ ಮಾತನಾಡಿ, "ಚರ್ಚ್ ಸ್ಟ್ರೀಟ್‌ನಲ್ಲಿ, ಉತ್ತಮ ಗೋಚರತೆಗಾಗಿ 85 ಕಟ್ಟಡಗಳಲ್ಲಿ ದೀಪಗಳ ಬೆಳಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಮರ್ಷಿಯಲ್ ಸ್ಟ್ರೀಟ್ ಅಸೋಸಿಯೇಷನ್ ​​ಕಾರ್ಯದರ್ಶಿ ಮಾಯಾಂಕ್ ರೋಹಟಗಿ ಮಾತನಾಡಿ, 60 ಅಂಗಡಿ ಮಾಲೀಕರನ್ನು ಸದಸ್ಯರನ್ನಾಗಿ ಹೊಂದಿರುವ ಸಂಘವು ಈಗಾಗಲೇ ಎಂಟು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ನಾವು 15 ದಿನಗಳ ಹಿಂದೆ ತಯಾರಿಯನ್ನು ಪ್ರಾರಂಭಿಸಿದ್ದೇವೆ ಮತ್ತು ಗ್ರಾಹಕರಿಗೆ ಲಕ್ಕಿ ಡ್ರಾಗಳನ್ನು ನೀಡಲಿದ್ದೇವೆ. ಪ್ರತಿ ವಾರಾಂತ್ಯದಲ್ಲಿ ಜನವರಿ 15ರವರೆಗೆ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಉಡುಗೊರೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com