ಬೆಂಗಳೂರು: ಊಟ ಬಡಿಸದೆ ಮಲಗಿದ್ದಕ್ಕೆ ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ ಕಿರಾತಕ ಪತಿ!

ರಾತ್ರಿ ಮನೆಗೆ ಬಂದಾಗ ಬಾಗಿಲು ತೆಗೆಯಲು ತಡ ಮಾಡಿದ್ದಕ್ಕೆ ಹಾಗೂ ಊಟ ಬಡಿಸದ ಕಾರಣಕ್ಕಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವ ಘಟನೆ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾತ್ರಿ ಮನೆಗೆ ಬಂದಾಗ ಬಾಗಿಲು ತೆಗೆಯಲು ತಡ ಮಾಡಿದ್ದಕ್ಕೆ ಹಾಗೂ ಊಟ ಬಡಿಸದ ಕಾರಣಕ್ಕಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ತನ್ನ ಪತ್ನಿಯನ್ನು ಕೊಂದಿರುವ ಘಟನೆ ನಗರದಲ್ಲಿ ನಡೆದಿದೆ.

ಪತ್ನಿಯನ್ನು ಕೊಂದ ನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಶವವನ್ನು ಸೂಟ್ ಕೇಸ್ ಗೆ ತುಂಬಿ ಕ್ವಾರಿ ಹೊಂಡದಲ್ಲಿ ಎಸೆದು ಪರಾರಿಯಾಗಿದ್ದ. ಕಾಮಾಕ್ಷಿಪಾಳ್ಯದ ಮನೆಯಿಂದ ಮೃತ ಮಂಜುಳಾ ಶವವನ್ನು ದ್ವಿ ಚಕ್ರ ವಾಹನದಲ್ಲಿರಿಸಿಕೊಂಡು ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿರುವ ದಾಬಸ್ ಪೇಟೆ ಬಳಿ ಸೂಟ್ ಕೇಸ್ ಬಿಸಾಕಿ ಚೆನ್ನೈಗೆ ಪರಾರಿಯಾಗಿದ್ದ.

ಹೊನ್ನೇನಹಳ್ಳಿ ಬಳಿ ಆಕೆಯ ಪೋಷಕರ ನಿವಾಸದ ಸಮೀಪವೇ ಹಳ್ಳವಿದ್ದ ಕಾರಣ ಪೊಲೀಸರು ಹುಡುಕಾಟ ನಡೆಸಿದಾಗ ಶವವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರಕ್ಕೆ ವಾಪಸಾದ ನಂತರ ಬಾರ್‌ಗೆ ಹೋಗಿ ಮೊಬೈಲ್ ಸ್ವಿಚ್ ಆನ್ ಮಾಡಿದ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನ ಟವರ್ ಸ್ಥಳದ ಆಧಾರದ ಮೇಲೆ ಆತನನ್ನು ಬಂಧಿಸಲಾಯಿತು.

ಮಂಜುಳಾ ಮೊದಲ ಪತಿ ವಿರೂಪಾಕ್ಷ ಅವರನ್ನು ತೊರೆದು ತಮ್ಮ ಇಬ್ಬರು ಮಕ್ಕಳೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಹೋದ ನಂತರ ಮಂಜುಳಾ ಒಂಟಿಯಾಗಿದ್ದರು. ಮಂಜುಳಾ ರಾಮುನನ್ನು ಪೀಣ್ಯದಲ್ಲಿರುವ ತಾನು ಕೆಲಸ ಮಾಡುವ ಸ್ಥಳದಲ್ಲಿ ಭೇಟಿಯಾಗಿದ್ದಳು.

ಮಂಜುಳಾ ತನ್ನ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂಬ ಕಾರಣಕ್ಕೆ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜೂನ್ 11 ರಂದು, ಆರೋಪಿ ಸಿನಿಮಾ ವೀಕ್ಷಿಸಿ ತಡವಾಗಿ ಮನೆಗೆ ಮರಳಿದ್ದ. ಈ ವೇಳೆ ಮಂಜುಳಾ ಬಾಗಿಲು ತೆರೆಯಲು ಸ್ವಲ್ಪ ಸಮಯ ತೆಗೆದುಕೊಂಡಳು ಮತ್ತು ಏನೂ ಅಡುಗೆ ಮಾಡದೆ ಮಲಗಿದ್ದಳು. ಇದರಿಂದ ಕುಪಿತಗೊಂಡ ಆತ ಅಕೆಯ ತಲೆಗೆ ಬಲವಾದ ಆಯುಧದಿಂದ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಹಾವೇರಿ ಮೂಲದ ತನ್ನ ಸ್ನೇಹಿತ ಬಸವ ಗೌಡ ಎಂಬಾತನಿಗೆ ಕರೆ ಮಾಡಿದ್ದಾನೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಇಬ್ಬರು ಬೈಕ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗಿ ಕ್ವಾರಿ ಹೊಂಡದಲ್ಲಿ ಎಸೆದಿದ್ದಾರೆ. ನಂತರ ಬಸವೇ ಗೌಡ ತಮ್ಮ ಊರಿಗೆ ತೆರಳಿದ್ದ. ಜೂನ್ 14 ರಂದು ಪೊಲೀಸರಿಗೆ ಸೂಟ್‌ಕೇಸ್‌ನಲ್ಲಿ ಕೊಳೆತ ಶವ ಪತ್ತೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com