ಚರಂಡಿ ನೀರಿನಿಂದ ಕೋವಿಡ್ ವೈರಲ್ ಲೋಡ್ ಪತ್ತೆ ಹಚ್ಚಲು ಬಿಬಿಎಂಪಿ ಮುಂದು!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚರಂಡಿ ನೀರಿನಿಂದ ಕೋವಿಡ್ ವೈರಲ್ ಲೋಡ್ ಪತ್ತೆ ಹಚ್ಚಲು ಬಿಬಿಎಂಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಕೋವಿಡ್ -19 ನ ವೈರಲ್ ಲೋಡ್ ಅನ್ನು ಪತ್ತೆಹಚ್ಚಲು ನಿರ್ದಿಷ್ಟ ಪ್ರದೇಶದಿಂದ ಒಳಚರಂಡಿ ಮಾದರಿಗಳನ್ನು ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಅವರು ಹೇಳಿದ್ದಾರೆ.
ಕಳೆದ ವರ್ಷ ನಡೆಸಿದ ಪರೀಕ್ಷೆಯಲ್ಲಿ ಮಹದೇವಪುರ ವಲಯದಿಂದ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದವು.
"ಕೊಳಚೆನೀರಿನ ಮಾದರಿಗಳು ವೈರಲ್ ಲೋಡ್ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಇದರಿಂದ ಸೋಂಕು ಹರಡುವುದನ್ನು ತಡೆಯಲು ಹಾಗೂ ಯೋಜನೆಗಳ ರೂಪಿಸಲು ಸುಲಭವಾಗುತ್ತದೆ.
ಈ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಸೋಂಕಿತರು ತ್ಯಾಜ್ಯ ನೀರಿನ ಮೂಲಕ ವೈರಸ್ ಅನ್ನು ಹರಡಬಹುದು. ಹೀಗಾಗಿ ಈ ಸಮೀಕ್ಷೆಯು ಕೋವಿಡ್ ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅದಿಕಾರಿಗಳು ಹೇಳಿದ್ದಾರೆ.
ಸಮೀಕ್ಷೆಯು ಕೇವಲ ಒಂದು ಅಂಶಕ್ಕೆ ಮಾತ್ರವೇ ಸೀಮಿತವಾಗಿಲ್ಲ, ಅಂದರೆ ಕೋವಿಡ್'ಗೆ ಮಾತ್ರವೇ ಸೀಮಿತವಾಗಿಲ್ಲ, ಡೆಂಗ್ಯೂ, ನೀರಿನಿಂದ ಹರಡುವ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳು ಹಾಗೂ ಇತರ ಸೋಂಕುಗಳಿಗೂ ಸಂಬಂಧಿಸಿದ್ದಾಗಿದೆ. ಒಕ್ಕೂಟದೊಂದಿಗೆ ಸಮೀಕ್ಷೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ