ಬೆಂಗಳೂರು: ಅಕ್ರಮ ಬ್ಯಾನರ್‌ಗಳ ತೆರವುಗೊಳಿಸಿದ ಬಿಬಿಎಂಪಿ

ನಗರದ ಹಲವು ರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಅಕ್ರಮ ಬ್ಯಾನಕ್ ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಹಲವು ರಸ್ತೆಗಳಲ್ಲಿ ರಾರಾಜಿಸುತ್ತಿದ್ದ ಅಕ್ರಮ ಬ್ಯಾನಕ್ ಗಳನ್ನು ಬಿಬಿಎಂಪಿ ತೆರವುಗೊಳಿಸಿದೆ.

ಅಕ್ರಮ ಬ್ಯಾನರ್ ಗಳ ಪತ್ತೆಯೆ ಜಿಪಿಎಸ್ ಕ್ಯಾಮೆರಾಗಳನ್ನು ಬಳಕೆ ಮಾಡಲಾಗಿದ್ದು, ಜಂಟಿ ಆಯುಕ್ತರ ನೇತೃತ್ವದಲ್ಲಿ ಎಂಟು ವಲಯಗಳಲ್ಲಿ 200 ಸಿಬ್ಬಂದಿಗಳ ತಂಡ ವಿಶೇಷ ಅಭಿಯಾನ ನಡೆಸಿ 5 ಸಾವಿರಕ್ಕೂ ಹೆಚ್ಚು ಬ್ಯಾನರ್ ಗಳನ್ನು ತೆರವುಗೊಳಿಸಿದೆ.

ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ದೀಪಕ್ ಆರ್‌ಎಲ್ ಅವರು ಮಾತನಾಡಿ, “ಅಂತರರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಅಕ್ರಮ ಬ್ಯಾನರ್‌ಗಳ ಕುರಿತು ನಮಗೆ ಸಾಕಷ್ಟು ದೂರುಗಳು ಬಂದಿದ್ದವು. ಸಿಎಂ ಬೊಮ್ಮಾಯಿ ನಿವಾಸದ ಎದುರಿನ ಕನಕದಾಸ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕೆಲ ಸಂಘಟಕರು ಬ್ಯಾನರ್'ಗಳನ್ನು ಹಾಕಿದ್ದರು. ಹೀಗಾಗಿ ಎಲ್ಲಾವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿ ಜಿಪಿಎಸ್ ಕ್ಯಾಮೆರಾಗಳನ್ನು ಬಳಸಿ ಅಕ್ರಮ ಬ್ಯಾನರ್ ಗಳನ್ನು ತೆರವುಗೊಳಿಸಿದೆವು. ನಾಲ್ಕು ಗಂಟೆಗಳಲ್ಲಿ ಈ ಕಾರ್ಯಾಚರಣೆಯನ್ನು ಮಾಡಲಾಯಿತು ಎಂದು ಹೇಳಿದರು.

ಹೈಕೋರ್ಟ್ ಆದೇಶದ ಹೊರತಾಗಿಯು ನಗರದಲ್ಲಿ ಅಕ್ರಮ ಫ್ಲೆಕ್ಸ್ ಹಾಗೂ ಬ್ಯಾನರ್ ಗಳು ನಾಯಿಕೊಡೆಗಳಂತೆ ಹೆಚ್ಚಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರಾಜಕೀಯ ಮುಖಂಡರನ್ನು ಸ್ವಾಗತಿಸುವ ಬ್ಯಾನರ್‌ಗಳನ್ನು ಹಾಕುವವರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಯೋಗ ಸಂಘಟಕ ರಾಘವೇಂದ್ರಗೌಡ ಮಾತನಾಡಿ, ಹೆಬ್ಬಾಳ ಕ್ಷೇತ್ರದಲ್ಲಿ ಬ್ಯಾನರ್ ಹಾಕಲು ಬಿಬಿಎಂಪಿಗೆ ರೂ.3,500 ಹಣ ನೀಡಲಾಗಿತ್ತು. ಹಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಬ್ಯಾನರ್ ತೆಗೆದಿದ್ದು ಆಘಾತವನ್ನುಂಟು ಮಾಡಿದೆ. ಇನ್ನು ಬಳ್ಳಾರಿ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ಸಾವಿರಾರು ಬ್ಯಾನರ್‌ಗಳನ್ನು ನೋಡಿದ್ದೇನೆ. ಅವರ ವಿರುದ್ಧವೇಕೆ ಬಿಬಿಎಂಪಿ ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com