ಬೀದರ್ ನಲ್ಲಿ ಟ್ರಕ್-ಆಟೋ ಮುಖಾಮುಖಿ ಡಿಕ್ಕಿ: ಮೃತರ ಸಂಖ್ಯೆ 7ಕ್ಕೆ ಏರಿಕೆ, 11 ಮಂದಿಗೆ ಗಾಯ

ಕ್‌ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಬಳಿ ನಿನ್ನೆ ರಾತ್ರಿ ದುರ್ಘಟನೆ ಸಂಭವಿಸಿದ್ದು
ಅಪಘಾತದ ನಂತರದ ದೃಶ್ಯ
ಅಪಘಾತದ ನಂತರದ ದೃಶ್ಯ
Updated on: 

ಬೀದರ್: ಜಿಲ್ಲೆಯ ಚಿತ್ತಗುಪ್ಪಾ ತಾಲೂಕಿನ ಗ್ರಾಮದಲ್ಲಿ ಕಳೆದ ತಡರಾತ್ರಿ ಆಟೋ ರಿಕ್ಷಾ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಏಳು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಈ ಮಹಿಳೆಯರು ಕೂಲಿ ಕಾರ್ಮಿಕರಾಗಿದ್ದು, ಆಟೋ ರಿಕ್ಷಾದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೇಮಳಖೇಡ ಸರಕಾರಿ ಶಾಲೆಯ ಬಳಿ ಲಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಮೃತರನ್ನು ಪಾರ್ವತಿ (40 ವ), ಪ್ರಭಾವತಿ (36 ವ), ಗುಂಡಮ್ಮ (60 ವ ), ಯಾದಮ್ಮ (40 ವ ), ಜಗ್ಗಮ್ಮ (34 ವ ) ಈಶ್ವರಮ್ಮ (55 ವ) ಮತ್ತು ರುಕ್ಮಿಣಿ ಬಾಯಿ (60 ವ) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ವಾಹನಗಳ ಚಾಲಕರು ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮತ್ತು ಗಾಯಾಳುಗಳು ಉಡಮನಳ್ಳಿ ಗ್ರಾಮಸ್ಥರಾಗಿದ್ದಾರೆ. ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com