2023ಕ್ಕೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ರಾಯಭಾರಿ ಕಚೇರಿ ಆರಂಭ

ಆಸ್ಟ್ರೇಲಿಯಾ ತನ್ನ ರಾಯಭಾರ ಕಚೇರಿಯನ್ನು 2023 ರಲ್ಲಿ ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ.
ತಂತ್ರಜ್ಞಾನ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಟಿ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ವಿಷನ್ ಗ್ರೂಪ್ ಐಟಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಇನ್ ಮೊಬಿ ಸಂಸ್ಥಾಪಕ ನವೀನ್ ತಿವಾರಿ ಇರುವುದು.
ತಂತ್ರಜ್ಞಾನ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಟಿ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ವಿಷನ್ ಗ್ರೂಪ್ ಐಟಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಇನ್ ಮೊಬಿ ಸಂಸ್ಥಾಪಕ ನವೀನ್ ತಿವಾರಿ ಇರುವುದು.

ಬೆಂಗಳೂರು: ಆಸ್ಟ್ರೇಲಿಯಾ ತನ್ನ ರಾಯಭಾರ ಕಚೇರಿಯನ್ನು 2023 ರಲ್ಲಿ ಬೆಂಗಳೂರಿನಲ್ಲಿ ತೆರೆಯಲು ನಿರ್ಧರಿಸಿದೆ.

ಬುಧವಾರ ನಡೆದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಈ ಕುರಿತ ನಿರ್ಧಾರವನ್ನು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವಾಟ್ಸ್ ಅವರು ಪ್ರಕಟಿಸಿದ್ದಾರೆ. ಅಲ್ಲದೆ, ಹೊಸ ರಾಯಭಾರಿ ಕಚೇರಿಯು ಭಾರತದಲ್ಲಿ ಐದನೇ ರಾಜತಾಂತ್ರಿಕ ಕಚೇರಿಯಾಗಲಿದೆ ಎಂದು ಹೇಳಿದರು.

“ನಿರ್ಣಾಯಕ ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಭಾರತಕ್ಕಿಂತ ಆಸ್ಟ್ರೇಲಿಯಾಕ್ಕೆ ಯಾವುದೇ ಪಾಲುದಾರರು ಮುಖ್ಯವಾಗುವುದಿಲ್ಲ. ಅದಕ್ಕಾಗಿಯೇ ನಾವು ಬೆಂಗಳೂರಿನಲ್ಲಿಯೇ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನ ನೀತಿಗಾಗಿ ನಮ್ಮ ಹೊಸ ಜಂಟಿ ಆಸ್ಟ್ರೇಲಿಯಾ-ಭಾರತ ಶ್ರೇಷ್ಠತೆಯ ಕೇಂದ್ರವನ್ನು ತೆರೆಯಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ವಿಶಾಲ-ಆಧಾರಿತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಸಂದರ್ಭದಲ್ಲಿ ಭಾರತದೊಂದಿಗೆ ತನ್ನ ತಂತ್ರಜ್ಞಾನ ಪಾಲುದಾರಿಕೆಯನ್ನು ಮುಂದುವರಿಸಲು ಆಸ್ಟ್ರೇಲಿಯಾ ಬದ್ಧವಾಗಿದೆ" ನವೆಂಬರ್‌ನಲ್ಲಿ ಪ್ರಾರಂಭವಾದಾಗಿನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ಹೊಸ ನೇರ ವಿಮಾನವು ಪೂರ್ಣವಾಗಿ ಸಂಚಾರ ಆರಂಭಿಸಿದೆ. "ಆಸ್ಟ್ರೇಲಿಯಾ-ಭಾರತ ತಂತ್ರಜ್ಞಾನ ಸಂಬಂಧವು ಪ್ರಮುಖ ಹಂತಕ್ಕೆ ತಲುಪಿದೆ ಎಂದರು.

ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವರು ಮಾತನಾಡಿ, “ಭಾರತವು ತನ್ನ ಸಂಸ್ಥೆಗಳಿಗೆ ನೀಡುವ ಅಪಾರ ಮೌಲ್ಯವನ್ನು ಆಸ್ಟ್ರೇಲಿಯಾ ಗುರುತಿಸುತ್ತದೆ. ಸಂಪರ್ಕಗಳನ್ನು ಬೆಂಬಲಿಸುವುದು ಮತ್ತು ಬೆಳವಣಿಗೆಯ ಅವಕಾಶಗಳನ್ನು ಅನ್ವೇಷಿಸುವುದು ನಮ್ಮ ಗುರಿಯಾಗಿದೆ. ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಉಭಯ ದೇಶಗಳ ಮುಂದೆ ಅನೇಕ ಸವಾಲುಗಳಿವೆ. ಈ ಸವಾಲುಗಳನ್ನು ನಿಭಾಯಿಸಲು ಆಸ್ಟ್ರೇಲಿಯಾ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com