ಬೆಂಗಳೂರು: ಸದಾಶಿವನಗರದಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ಅವರ ಮನೆಯಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಅವರ ಸಿಬ್ಬಂದಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಒಡಿಶಾ ಮೂಲದ 35 ವರ್ಷದ ಜಯಂತ್ ಕುಮಾರ್ ಎಂದು ಗುರುತಿಸಲಾಗಿದೆ.
ಆರೋಪಿಯು ಮಾಜಿ ಸಚಿವರ ಮನೆಯಲ್ಲಿ ಲಾಂಡ್ರಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಕಳೆದ ಮೂರು ತಿಂಗಳಿನಿಂದ ಕಳ್ಳತನದ ಕೃತ್ಯದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.
ಮಾಜಿ ಸಚಿವರ ಅಡುಗೆ ಭಟ್ಟರಾದ ಸಿಧು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 381 ರ ಅಡಿಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಜುಲೈ 4 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಪ್ರಕರಣ ದಾಖಲಾಗಿತ್ತು.
ಮನೆಯಲ್ಲಿ ಆರು ಮಂದಿ ಕೆಲಸಗಾರರು ಇದ್ದಾರೆ. ಅವರಲ್ಲೊಬ್ಬರು 6 ವಾಚ್‌ಗಳು, 70 ಸಾವಿರ ಮೌಲ್ಯದ ನಗದು ಮತ್ತು ಮೊಬೈಲ್ ಫೋನ್ ಕದ್ದಿದ್ದಾರೆ ಎಂದು ಸಿಧು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಸಿಧು ಶಂಕಿತನನ್ನು ಗುರುತಿಸಲು ಪ್ರಯತ್ನಿಸಿದ್ದರು. ಆದರೆ, ಎಲ್ಲಾ ಕೆಲಸಗಾರರು ತಾವು ಮುಗ್ಧರು ಎಂದಿದ್ದರು. ಬಳಿಕ ಸಿಧು ಪೊಲೀಸರಿಗೆ ದೂರು ನೀಡಿದ್ದರು. ಜುಲೈ 1 ರ ಮರುದಿನದಿಂದ ಜಯಂತ್ ಕುಮಾರ್ ಎಂಬಾತ ಕೆಲಸಕ್ಕೆ ಗೈರುಹಾಜರಾಗಿದ್ದರಿಂದ, ಆತನ ಮೇಲೆ ಶಂಕೆ ಉಂಟಾಗಿತ್ತು.
ನಂತರ ಜಯಂತ್‌ನನ್ನು ಪೊಲೀಸರು ಆತನ ಹುಟ್ಟೂರಾದ ಒಡಿಶಾದಲ್ಲಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ಸೋಮವಾರ ಬೆಂಗಳೂರಿನ ಸ್ಥಳೀಯ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಡಿಸಿಪಿ (ಕೇಂದ್ರ) ಆರ್ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
Advertisement