ಸಿಸಿಬಿ ಭರ್ಜರಿ ಕಾರ್ಯಾಚರಣೆ, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ವಶಕ್ಕೆ, ಇಬ್ಬರ ಬಂಧನ

ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಮೊಬೈಲ್ ಕಳ್ಳತನ ಜಾಲವನ್ನು ಬಯಲಿಗೆಳೆದಿದ್ದು, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಖದೀಮರಿಂದ ವಶಕ್ಕೆ ಪಡೆದ ಮೊಬೈಲ್ ಗಳು
ಖದೀಮರಿಂದ ವಶಕ್ಕೆ ಪಡೆದ ಮೊಬೈಲ್ ಗಳು

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ಬೃಹತ್ ಮೊಬೈಲ್ ಕಳ್ಳತನ ಜಾಲವನ್ನು ಬಯಲಿಗೆಳೆದಿದ್ದು, 78 ಲಕ್ಷ ರೂ ಮೌಲ್ಯದ 515 ಮೊಬೈಲ್ ಗಳನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು.. ಬೆಂಗಳೂರಿನಲ್ಲಿ ಮೊಬೈಲ್ ಗಳನ್ನು ಕದ್ದು ತೆಲಂಗಾಣದ ಹೈದರಾಬಾದ್ ನಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಮೊಬೈಲ್ ಕಳ್ಳತನ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬೇದಿಸಿದ್ದಾರೆ. ಪಿಕ್ ಪಾಕೆಟ್, ಸುಲಿಗೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಬರೊಬ್ಬರಿ 515 ಮೊಬೈಲ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮೊಬೈಲ್ ಗಳ ಮೌಲ್ಯ ಸುಮಾರು 78 ಲಕ್ಷ ರೂಗೂ ಅಧಿಕ ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳನ್ನು ಅಫ್ಜಲ್ ಪಾಶಾ, ಇಜ್ಹಾರ್  ಎಂದು ಗುರುತಿಸಲಾಗಿದ್ದು, ಆರೋಪಿಗಳು ಬೆಂಗಳೂರಿನ ವಿವಿಧೆಡೆಗಳಲ್ಲಿ ಮೊಬೈಲ್ ಗಳನ್ನು ಕದ್ದು ಹೈದರಾಬಾದ್, ಮುಂಬೈ ಮತ್ತು ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com