ತಡವಾಗಿ ಆಸ್ಪತ್ರೆಗೆ ದಾಖಲು, 2ನೇ ಡೋಸ್ ಲಸಿಕೆ ಪರಿಣಾಮದ ಕ್ಷೀಣಿಸುವಿಕೆ ಕೋವಿಡ್ ಸಾವು ಹೆಚ್ಚಳಕ್ಕೆ ಕಾರಣ; ರಾಜ್ಯ ಆರೋಗ್ಯ ಇಲಾಖೆ

ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಮತ್ತು 2ನೇ ಡೋಸ್ ಲಸಿಕೆ ಪರಿಣಾಮದ ಕ್ಷೀಣಿಸುವಿಕೆ ಕೋವಿಡ್ ಸಾವು ಹೆಚ್ಚಳಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೋವಿಡ್-19 ಸಾಂದರ್ಭಿಕ ಚಿತ್ರ
ಕೋವಿಡ್-19 ಸಾಂದರ್ಭಿಕ ಚಿತ್ರ

ಬೆಂಗಳೂರು: ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಮತ್ತು 2ನೇ ಡೋಸ್ ಲಸಿಕೆ ಪರಿಣಾಮದ ಕ್ಷೀಣಿಸುವಿಕೆ ಕೋವಿಡ್ ಸಾವು ಹೆಚ್ಚಳಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಆಯುಕ್ತ ರಂದೀಪ್  ಅವರು, 'ಕೋವಿಡ್ ಸಾವುಗಳ ಹೆಚ್ಚಳಕ್ಕೆ ಸೋಂಕಿತರ ತಡವಾಗಿ ಆಸ್ಪತ್ರೆಗೆ ದಾಖಲಾತಿ ಮತ್ತು 2ನೇ ಡೋಸ್ ಲಸಿಕೆ ಪರಿಣಾಮದ ಕ್ಷೀಣಿಸುವಿಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಲಕ್ಷಣಗಳಿದ್ದರೂ ಪರೀಕ್ಷೆಗೊಳಪಡದೇ ಸಾಮಾನ್ಯ ಚಿಕಿತ್ಸೆ ಪಡೆದು ಪರಿಸ್ಥಿತಿ ಗಂಭೀರವಾದಾಗ ಆಸ್ಪತ್ರೆಗೆ ದಾಖಲಾಗುತ್ತಿರುವ ಬೆಳವಣಿಗೆಗಳು ಕಾಣುತ್ತಿವೆ. ಅಂತೆಯೇ ಬೂಸ್ಟರ್ ಡೋಸ್ ತೆಗೆದುಕೊಳ್ಳದವರಲ್ಲಿ ವ್ಯಾಕ್ಸಿನೇಷನ್ ಪರಿಣಾಮ ಕ್ಷೀಣಿಸುತ್ತಿದ್ದು, ಇದೂ ಕೂಡ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣ ಎಂದು ರಂದೀಪ್ ಹೇಳಿದರು. 

ಇಲ್ಲಿಯವರೆಗೆ ಎರಡನೇ ಡೋಸ್ ತೆಗೆದುಕೊಂಡವರಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 8.34% ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ 44.79% ಮಾತ್ರ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಏಪ್ರಿಲ್‌ನಲ್ಲಿ ಐದು ಕೋವಿಡ್ -19 ಸಾವುಗಳು ವರದಿಯಾಗಿದ್ದರೆ, ಮೇನಲ್ಲಿ ಆರು, ಜೂನ್‌ನಲ್ಲಿ 10, ಜುಲೈನಲ್ಲಿ 29 ಮತ್ತು ಆಗಸ್ಟ್‌ನಲ್ಲಿ ಇದುವರೆಗೆ 58 ಸಾವುಗಳು ವರದಿಯಾಗಿದೆ, ಇದರಲ್ಲಿ 19 ಹೆಣ್ಣು ಮತ್ತು ಒಂಬತ್ತು ತಿಂಗಳ ಹೆಣ್ಣು ಶಿಶು ಸೇರಿವೆ. ಈ ತಿಂಗಳೊಂದರಲ್ಲೇ, ಸತ್ತವರಲ್ಲಿ, ಹತ್ತು ಮಂದಿ ಯಾವುದೇ ಕೊಮೊರ್ಬಿಡಿಟಿ(ಇತರೆ ಆರೋಗ್ಯ ಸಮಸ್ಯೆ)ಗಳನ್ನು ಹೊಂದಿರಲಿಲ್ಲ ಮತ್ತು 14 ಮಂದಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 60 ವರ್ಷ ಮೇಲ್ಪಟ್ಟವರು ಮತ್ತು ಕೋವಿಡ್ -19 ಸೋಂಕಿಗೆ ತುತ್ತಾಗಿರುವ ಕೊಮೊರ್ಬಿಡಿಟಿ ಹೊಂದಿರುವವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ರಂದೀಪ್ ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಮಾತನಾಡಿ, ಸಾವನ್ನಪ್ಪಿದವರಲ್ಲಿ ಕೋವಿಡ್ -19 ಇತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಆಕಸ್ಮಿಕವಾಗಿ ಪತ್ತೆಯಾಗಿದೆ. ಏಕೆಂದರೆ ಐಸಿಯುಗೆ ದಾಖಲಾಗುವ ಮೊದಲು ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೂ ಬೆಂಗಳೂರಿನಲ್ಲಿ ಪ್ರಕರಣದ ಸಾವಿನ ಪ್ರಮಾಣವು ಇನ್ನೂ 0.03% ರಷ್ಟಿದೆ ಎಂದು ಅವರು ಹೇಳಿದರು. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಈ ತಿಂಗಳು ಧಾರವಾಡದಲ್ಲಿ ಅತಿ ಹೆಚ್ಚು (ಒಂಬತ್ತು) ಸಾವುಗಳು ವರದಿಯಾಗಿವೆ. ಬೆಂಗಳೂರು ನಗರ ಆರು ಸಾವುಗಳನ್ನು ವರದಿ ಮಾಡಿದ್ದು, ಬಳ್ಳಾರಿಯಲ್ಲಿ ಐದು ಸಾವುಗಳು ಮತ್ತು ತಲಾ ನಾಲ್ಕು ಕೊಪ್ಪಳ ಮತ್ತು ದಕ್ಷಿಣ ಕನ್ನಡದಿಂದ ವರದಿಯಾಗಿದೆ.

ಶುಕ್ರವಾರ, ಬೆಂಗಳೂರಿನಲ್ಲಿ 935 ಪ್ರಕರಣಗಳು ಸೇರಿದಂತೆ 1,573 ಕೋವಿಡ್ -19 ಪಾಸಿಟಿವ್ ಪ್ರಕರಣಗಳಿವೆ ಮತ್ತು ರಾಜ್ಯದಲ್ಲಿ ಮೂರು ಸಾವುಗಳು ವರದಿಯಾಗಿವೆ ಮತ್ತು ಮೂವರಲ್ಲಿ ಕೊಮೊರ್ಬಿಡಿಟಿಗಳಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com