ನಂದಿ ಬೆಟ್ಟಕ್ಕೆ ಹೊಸ ರೂಪ ನೀಡಿ ಪ್ರವಾಸಿಗರ ಸೆಳೆಯಲು ಪ್ರವಾಸೋದ್ಯಮ ಇಲಾಖೆ ಮುಂದು!

ದೇವಹಳ್ಳಿಯಲ್ಲಿ ಜಿ-20 ಶೃಂಗಸಭೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ನಗರದ ಪ್ರಮುಖ ಗಿರಿಧಾಮ ನಂದಿ ಬೆಟ್ಟಕ್ಕೆ ಹೊಸ ರೂಪ ನೀಡಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯರು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಂದಾಗಿದೆ.
ನಂದಿ ಬೆಟ್ಟ
ನಂದಿ ಬೆಟ್ಟ

ಬೆಂಗಳೂರು: ದೇವಹಳ್ಳಿಯಲ್ಲಿ ಜಿ-20 ಶೃಂಗಸಭೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ನಗರದ ಪ್ರಮುಖ ಗಿರಿಧಾಮ ನಂದಿ ಬೆಟ್ಟಕ್ಕೆ ಹೊಸ ರೂಪ ನೀಡಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯರು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಂದಾಗಿದೆ.

ನಂದಿ ಬೆಟ್ಟದಲ್ಲಿರುವ ಗೋಡೆಗಳನ್ನು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗುತ್ತಿದ್ದು, ಅರಣ್ಯ ನಡಿಗೆಯನ್ನು ನವೀಕರಿಸಲಾಗುತ್ತದೆ ಮತ್ತು ಗುಡ್ಡದ ಸುತ್ತಮುತ್ತಲಿನ ರಸ್ತೆಗಳನ್ನು ಕೂಡ ದುರಸ್ತಿ ಮಾಡಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ನಂದಿ ಬೆಟ್ಟವನ್ನು ಅಲಂಕರಿಸಲಾಗುತ್ತಿದೆ, ಆದರೆ ಈ ಕ್ರಮವು ಪ್ರವಾಸಿಗರಿಗೂ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಇಲ್ಲಿನ ವಸತಿ ಮತ್ತು ರೆಸ್ಟೋರೆಂಟ್‌ಗಳನ್ನು ಸುಧಾರಿಸಲಾಗಿದೆ. ನಂದಿ ಬೆಟ್ಟದ ಮೇಲಿರುವ ವೀಕ್ಷಣಾ ಸ್ಥಳಗಳೊಂದಿಗೆ ವನತಾ ಮಂಟಪ್ಪ ಮತ್ತು ಭೋಗ ನಂದೀಶ್ವರ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದೆ. ಎಎಸ್‌ಐ ನೆರವಿನೊಂದಿಗೆ ಹಂಪಿಯಲ್ಲಿರುವ ಭೋಗ ನಂದೀಶ್ವರ ದೇವಸ್ಥಾನ ಮತ್ತು ನಿವೇಶನಗಳನ್ನು ಪುನರ್‌ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಹಂಪಿಗೆ ತೆರಳುವ ಪ್ರವಾಸಿಗರಿಗೆ ರಾತ್ರಿ ಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಭೋಗ ನಂದೀಶ್ವರ ದೇವಸ್ಥಾನದ ಹೊರಗಿನ ಜಾಗವನ್ನು ಪ್ರತಿನಿಧಿಗಳಿಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಮತ್ತು ಮುಂದೆ ವಿಶೇಷ ಸಂದರ್ಭಗಳಲ್ಲಿ ಬಳಸುವ ಕುರಿತು ಎಎಸ್‌ಐ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ಬುಕ್ಕಿಂಗ್ ಇಲ್ಲದೆಯೂ ರಾತ್ರಿ ಸಮಯದಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುರಕ್ಷತೆ ಕಾರಣಗಳಿಂದ ಅದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com