ಕೋವಿಡ್ -19: ಹಾಸಿಗೆಗಳ ಲಭ್ಯತೆ ಕ್ರೋಢೀಕರಿಸಲು, ಹಾಸಿಗೆಗಳ ಲಭ್ಯತೆ ಹಂಚಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ಸೂಚನೆ

ದೇಶಾದ್ಯಂತ ಕೋವಿಡ್ ರೂಪಾಂತರಿ ತಳಿ BF.7 ಭೀತಿ ಆವರಿಸಿರುವಂತೆಯೇ ಇತ್ತ ಕೋವಿಡ್ ಸೋಂಕು ನಿರ್ವಹಣೆಗೆ ಸಕಲ ಸಿದ್ಧತೆ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಸಿಗೆಗಳ ಲಭ್ಯತೆ ಕ್ರೋಢೀಕರಿಸಲು, ಹಾಸಿಗೆಗಳ ಲಭ್ಯತೆ ಹಂಚಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆ
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಕೋವಿಡ್ ನಿರ್ವಹಣಾ ಸಭೆ

ಬೆಂಗಳೂರು: ದೇಶಾದ್ಯಂತ ಕೋವಿಡ್ ರೂಪಾಂತರಿ ತಳಿ BF.7 ಭೀತಿ ಆವರಿಸಿರುವಂತೆಯೇ ಇತ್ತ ಕೋವಿಡ್ ಸೋಂಕು ನಿರ್ವಹಣೆಗೆ ಸಕಲ ಸಿದ್ಧತೆ ನಡೆಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಸಿಗೆಗಳ ಲಭ್ಯತೆ ಕ್ರೋಢೀಕರಿಸಲು, ಹಾಸಿಗೆಗಳ ಲಭ್ಯತೆ ಹಂಚಿಕೊಳ್ಳುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಾಸಿಗೆಗಳ ಲಭ್ಯತೆಯನ್ನು ಕ್ರೋಢೀಕರಿಸಲು ತಮ್ಮ ಹಾಸಿಗೆಗಳ ದಾಸ್ತಾನು ಹಂಚಿಕೊಳ್ಳಲು ಖಾಸಗಿ ಆಸ್ಪತ್ರೆಗಳನ್ನು ಕೇಳಿದೆ. ಬಿಬಿಎಂಪಿ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 30 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ 419 ಖಾಸಗಿ ಆಸ್ಪತ್ರೆಗಳಿವೆ. ಆದರೆ ಕೋವಿಡ್ -19 ಪರಿಸ್ಥಿತಿಯು ಸರಾಗವಾದ ನಂತರ, ಇವುಗಳಲ್ಲಿ ಎಷ್ಟು ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಆರೋಗ್ಯ ಇಲಾಖೆ ದೈನಂದಿನ ನವೀಕರಣಗಳನ್ನು ಪಡೆಯುವುದನ್ನು ನಿಲ್ಲಿಸಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು, "ನಾವು ಖಾಸಗಿ ಸಂಸ್ಥೆಗಳಲ್ಲಿನ ಆಮ್ಲಜನಕ ಹಾಸಿಗೆಗಳು, ಐಸಿಯು, ವೆಂಟಿಲೇಟರ್‌ಗಳು, ಪೈಪ್‌ಲೈನ್‌ಗಳ ಕಾರ್ಯನಿರ್ವಹಣೆಯನ್ನು ನಿರ್ಣಯಿಸಬೇಕಾಗಿದೆ. ಆದ್ದರಿಂದ, ಹಾಸಿಗೆಗಳ ದಾಸ್ತಾನು ಸಲ್ಲಿಸಲು ನಾವು ಅವರನ್ನು ಕೇಳಿದ್ದೇವೆ. ಇದು ನಮಗೆ ನಗರದ ಹಾಸಿಗೆಯ ಪರಿಸ್ಥಿತಿಯ ಕುರಿತು ನ್ಯಾಯೋಚಿತ ಕಲ್ಪನೆಯನ್ನು ನೀಡುತ್ತದೆ. ನಾನು ಆಸ್ಪತ್ರೆಗಳಲ್ಲಿ ಎಷ್ಟು ಆಕ್ಸಿಜನ್ ಬೆಡ್‌ಗಳು ಇದೆ, ಐಸಿಯುಗಳು ಎಷ್ಟಿದೆ, ವೆಂಟಿಲೇಟರ್ ಎಷ್ಟಿದೆ, ಹೇಗೆ ಕಾರ್ಯನಿರ್ವಹಣೆ ಮಾಡುತ್ತಿದೆ, ಪೈಪ್‌ಲೈನ್ ವ್ಯವಸ್ಥೆ ಹೇಗಿದೆ ಎಂದು ಪರಿಶೀಲನೆ ಮಾಡಬೇಕಾಗಿದೆ. ಬೆಡ್‌ಗಳ ಮಾಹಿತಿ ನೀಡುವಂತೆ ನಾವು ಈಗಾಗಲೇ ಸೂಚಿಸಿದ್ದೇವೆ. ಇದರಿಂದಾಗಿ ನಮಗೆ ಸಂಪೂರ್ಣವಾದ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಅಂತೆಯೇ ವಿಷಮ ಪರಿಸ್ಥಿತಿ ಉಂಟಾದಾಗ, ಹಾಸಿಗೆಗಳನ್ನು ಕಾಯ್ದಿರಿಸಲು ಮತ್ತು ರೋಗಿಗಳ ಒಳಹರಿವನ್ನು ನಿರ್ವಹಿಸಲು ಪಾಲಿಕೆಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗುವುದು. ರೋಗಿಗಳನ್ನು ಪ್ರತ್ಯೇಕಿಸಲು ಖಾಸಗಿ ಆಸ್ಪತ್ರೆಗಳನ್ನು ಗೊತ್ತುಪಡಿಸುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು  ಎಂದು ಹೇಳಿದರು.

ಬಳಿಕ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ್ ಚಂದ್ರ ಮಾತನಾಡಿ, ಖಾಸಗಿ ಆಸ್ಪತ್ರೆಗಳು ವಿವರಗಳನ್ನು ಸಲ್ಲಿಸುವುದರ ಜೊತೆಗೆ ಪಾಲಿಕೆ ಅಧಿಕಾರಿಗಳ ಮೀಸಲಾದ ತಂಡವು ತಪಾಸಣೆಗಾಗಿ ಎಲ್ಲಾ ಆರೋಗ್ಯ ಸೌಲಭ್ಯಗಳಿಗೆ ಭೇಟಿ ನೀಡಲಿದೆ. ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ನಿಭಾಯಿಸಲು ಈ ಹಿಂದೆ ಸ್ಥಾಪಿಸಲಾದ ಆಮ್ಲಜನಕ ಸ್ಥಾವರಗಳನ್ನು ಪರಿಶೀಲಿಸುವುದರ ಜೊತೆಗೆ ಖಾಸಗಿ ಮತ್ತು ಸರ್ಕಾರಿ ಸೌಲಭ್ಯಗಳಲ್ಲಿ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಕಾರ್ಯವನ್ನು ಬಿಬಿಎಂಪಿ ಪರಿಶೀಲಿಸುತ್ತದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com