ಮತ್ತೆ ಡೆಂಗ್ಯೂ ಹಾವಳಿ; ಕರ್ನಾಟಕದಲ್ಲಿ 530 ಪ್ರಕರಣ ವರದಿ!

ಸತತ ಮಳೆಯ ನಡುವೆಯೇ ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿಯ ಆರ್ಭಟ ಶುರುವಾಗಿದ್ದು, ರಾಜ್ಯಾದ್ಯಂತ 530 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸತತ ಮಳೆಯ ನಡುವೆಯೇ ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿಯ ಆರ್ಭಟ ಶುರುವಾಗಿದ್ದು, ರಾಜ್ಯಾದ್ಯಂತ 530 ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ಈ ತಿಂಗಳು ಬಿಬಿಎಂಪಿ ವ್ಯಾಪ್ತಿಯಲ್ಲಿನ 503 ಪ್ರಕರಣಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ 530 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ರಾಜ್ಯ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮೂಲಗಳ ಪ್ರಕಾರ, ಜುಲೈನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷದ 341 ಪ್ರಕರಣಗಳಿಗೆ ಹೋಲಿಸಿದರೆ ಹಾಲಿ ವರ್ಷದ ಸಂಖ್ಯೆ ಹೆಚ್ಚಾಗಿದೆ. ಆದರೆ, ರಾಜ್ಯದಲ್ಲಿ ಈ ವರ್ಷ ಡೆಂಗ್ಯೂಯಿಂದ ಯಾವುದೇ ಸಾವು ಸಂಭವಿಸಿಲ್ಲ ಎನ್ನಲಾಗಿದೆ.

ರಾಜ್ಯಾದ್ಯಂತ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಣ್ಗಾವಲು ಮತ್ತು ಲಾರ್ವಾ ನಿಯಂತ್ರಣ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿದೆ. ಮನೆ ಮನೆ ಸಮೀಕ್ಷೆ, ನೀರು ನಿಲ್ಲದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ತಿಳಿಸಿದ್ದಾರೆ. 

ಮಲ್ಲೇಶ್ವರಂನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್-ಇಂಟರ್ನಲ್ ಮೆಡಿಸಿನ್ ಡಾ.ಬಸವರಾಜ ಕುಂಟೋಜಿ ಅವರು ಈ ಬಗ್ಗೆ ಮಾತನಾಡಿ, "ಒಪಿಡಿಯಲ್ಲಿ ನಾವು ದಿನಕ್ಕೆ 5 ರಿಂದ 8 ಶಂಕಿತ ಡೆಂಗ್ಯೂ ಪ್ರಕರಣಗಳನ್ನು ನೋಡುತ್ತಿದ್ದೇವೆ ಮತ್ತು ಮೂರರಿಂದ ಐದು ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ ಮತ್ತು ಒಂದರಿಂದ ಇಬ್ಬರಿಗೆ ಐಸಿಯು ದಾಖಲಾತಿ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಂತೆಯೇ ನಾರಾಯಣ ಹೆಲ್ತ್ ಸಿಟಿಯ ಆಂತರಿಕ ವೈದ್ಯಕೀಯ ಸಲಹೆಗಾರ ಡಾ.ಮಹೇಶ್ ಕುಮಾರ್ ಮಾತನಾಡಿ, ‘ನಾವು ಪ್ರತಿದಿನ 25-30 ಶಂಕಿತ ಡೆಂಗ್ಯೂ ಪ್ರಕರಣಗಳನ್ನು ನೋಡುತ್ತಿದ್ದು, ಅದರಲ್ಲಿ ಐದರಿಂದ ಆರು ತೀವ್ರತರವಾದ ಪ್ರಕರಣವಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆ ಎಂದಿದ್ದಾರೆ. ಇತ್ತ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ವಿನಯ್ ಡಿ ಮಾತನಾಡಿ, ಕಳೆದ ತಿಂಗಳಿನಿಂದ ನಮ್ಮ ಘಟಕವೊಂದರಲ್ಲೇ 50 ಡೆಂಗ್ಯೂ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ. ಸಂಭವನೀಯ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದೃಢಪಟ್ಟ ಪ್ರಕರಣಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಎಂದು ಹೇಳಿದ್ದಾರೆ.

ಇನ್ನು, 'ಹೆಚ್ಚಿನವರು ಜ್ವರ, ತಲೆನೋವು, ಸುಸ್ತು, ಕಣ್ಣಿನ ನೋವು, ಸಾಮಾನ್ಯವಾಗಿ ಕಣ್ಣುಗಳ ಹಿಂದೆ ನೋವು, ಹಸಿವಿನ ಕೊರತೆಯಂತಹ ರೋಗಲಕ್ಷಣಗಳನ್ನು ತೋರಿಸುತ್ತಾರೆ. ರೋಗಿಗಳು ಮತ್ತು ವೈದ್ಯರು ಹೊಟ್ಟೆ ನೋವು, ವಾಂತಿ, ತುರಿಕೆ ಅಲ್ಲದ ದದ್ದುಗಳು ಮತ್ತು ಪ್ಲೇಟ್ಲೆಟ್ ಎಣಿಕೆ ಕಡಿಮೆಯಾಗುವುದು ಸೇರಿದಂತೆ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರಬೇಕು. ಇವು ಡೆಂಗ್ಯೂನ ತೊಡಕುಗಳನ್ನು ಸೂಚಿಸಬಹುದು ಎಂದು ಅವರು ಹೇಳಿದರು. 

20 ರಿಂದ 50 ವರ್ಷ ವಯಸ್ಸಿನ ಮಕ್ಕಳು ಮತ್ತು ಮಧ್ಯವಯಸ್ಕರಲ್ಲಿ ಕ್ರಮವಾಗಿ ಶಾಲೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸೊಳ್ಳೆ ಕಡಿತಕ್ಕೆ ಒಳಗಾಗುವ ಪ್ರಕರಣಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com