ನಗರದಲ್ಲಿ ಟ್ರಾಫಿಕ್ ಸಮಸ್ಯೆ: ಪರಿಶೀಲನೆಗೆ ಅಧಿಕಾರಿಗಳಿಂದ ನೈಟ್ ರೌಂಡ್ಸ್!

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರಗಳನ್ನು ಹೊರತರಲು ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಟಿಸಿ, ಬೆಂಗಳೂರು ಪೊಲೀಸರು ಮತ್ತು ಇತರ ಏಜೆನ್ಸಿಗಳ ಮುಖ್ಯಸ್ಥರು ಮಂಗಳವಾರ ರಾತ್ರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಪಾವಧಿ ಮತ್ತು ದೀರ್ಘಾವಧಿ ಪರಿಹಾರಗಳನ್ನು ಹೊರತರಲು ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಟಿಸಿ, ಬೆಂಗಳೂರು ಪೊಲೀಸರು ಮತ್ತು ಇತರ ಏಜೆನ್ಸಿಗಳ ಮುಖ್ಯಸ್ಥರು ಮಂಗಳವಾರ ರಾತ್ರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆಗೆ ಕ್ರಮಗಳ ಕೈಗೊಳ್ಳುವಂತೆ ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚನೆ ನೀಡಿದ್ದರು. 

ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರೆ ಅಧಿಕಾರಿಗಳು ಕಳೆದ ರಾತ್ರಿ ನಗರದಲ್ಲಿ ಸಂಚರಿಸಿ, ಪರಿಶೀಲನೆ ನಡೆಸಿದರು.

10 ಪ್ರದೇಶಗಳ ಪೈಕಿ 6 ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಇರುವುದನ್ನು ಪತ್ತೆ ಮಾಡಲಾಗಿದೆ. ಗೊರಗುಂಟೆಪಾಳ್ಯ ಜಂಕ್ಷನ್, ಹೆಬ್ಬಾಳ, ಕೆಆರ್ ಪುರಂ, ಇಬ್ಲೂರು ಜಂಕ್ಷನ್, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಸಾರಕ್ಕಿಗೆ ತಂಡಗಳು ಭೇಟಿ ನೀಡಿದೆ ಅಲ್ಪಾವಧಿಯ ಪರಿಹಾರವಾಗಿ ಸ್ಕೈವಾಕ್‌ಗಳನ್ನು ನಿರ್ಮಿಸಲು, ಬಸ್ ನಿಲ್ದಾಣಗಳನ್ನು ಬದಲಾಯಿಸಲು ಮತ್ತು ಸುಧಾರಿತ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕ್ರಮದಿಂದ ಶೇ.15ರಷ್ಟು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಗೊರಗುಂಟೆಪಾಳ್ಯದಲ್ಲಿ ಪ್ರತಿ ಗಂಟೆಗೆ ಸುಮಾರು 150 ಬಸ್‌ಗಳು ಜಂಕ್ಷನ್ ಮೂಲಕ ಹಾದುಹೋಗುವುದನ್ನು ನಾವು ಗಮನಿಸಿದ್ದೇವೆ. ಬಹುತೇಕ ಬಸ್‌ಗಳು ಇಲ್ಲಿ ನಿಲ್ಲುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತದೆ.

ಈ ವಿಸ್ತರಣೆಯು 20 ಜಿಲ್ಲೆಗಳನ್ನು ನಗರದೊಂದಿಗೆ ಸಂಪರ್ಕಿಸುತ್ತದೆ. ಪೀಣ್ಯ ಟರ್ಮಿನಲ್‌ನಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗಿರಿನಾಥ್ ಅವರು ಹೇಳಿದರು.
 
ನಗರದಲ್ಲಿ ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಅಲ್ಪಾವಧಿ ಟೆಂಡಲ್ ಮಾಡಲಾಗಿದೆ. ದರ ಹೊಂದಾಣಿಕೆ ಸಮಸ್ಯೆಯಿಂದಾಗಿ ಗುತ್ತಿಗೆ ನೀಡುವುದು ಸ್ವಲ್ಪ ವಿಳಂವಾಗಿದೆ. 1 ಚ.ಮೀ ರಸ್ತೆ ಗುಂಡಿ ಮುಚ್ಚಲು ರೂ.598 ದರ ನಿಗದಿಪಡಿಸಿ ಪೈಥಾನ್ ಯಂತ್ರಕ್ಕೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಕಾರ್ಯಾದೇಶ ನೀಡಲಾಗುತ್ತದೆ. 

ಪೈಧಾನ ಯಂತ್ರದಿಂದ ಪ್ರತಿ 10 ನಿಮಿಷದಲ್ಲಿ 1 ಚ.ಮೀ ಗುಂಡಿ ಮುಚ್ಚಬಹುದು. ನಗರದಲ್ಲಿ ಒಂದು ಗುಂಡಿಯ ಸರಾಸರಿ ಅಳತೆ 2.5 ಚ.ಮೀ ಇದೆ ಎಂದು ಅಂದಾಜಿಸಲಾಗಿದೆ. ಇನ್ನು ಮಾನವ ತಂಡಗಳಿಂದ 1 ಚ.ಮೀ ರಸ್ತೆ ಗುಂಡಿ ಮುಚ್ಚರು ರೂ.560 ಖರ್ಚಾಗುತ್ತಿದ್ದು, ವಿಳಂಬವಾಗುತ್ತದೆ. ಹೀಗಾಗಿ ಪೈಥಾನ್ ಯಂತ್ರದಿಂದ ಗುಂಡಿ ಮುಚ್ಚಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. 

ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಿರಂತರವಾಗಿ ಸಾಗಿದೆ. ಈ ವರೆಗೆ ಅಂದಾಜು ರೂ.16 ಸಾವಿರಕ್ಕೂ ಅಧಿಕ ಗುಂಡಿಗಳನ್ನು ಮುಚ್ಚಲಾಗಿದೆ. ಆದರೂ, ಸಾರ್ವಜನಿಕರ ನಿರೀಕ್ಷೆಯಂತೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಎಲ್ಲಾ ವಲಯಗಳಿಂದ ರಸ್ತೆ ಗುಂಡಿ ಮುಚ್ಚಿರುವ ದತ್ತಾಂಶವನ್ನು ಪಡೆದು, ಇಂದು ನಡೆಯುವ ವಿಚಾರಣೆ ವೇಳೆ ಪೂರ್ಣ ವಿವರ ಸಲ್ಲಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com