
ಸಾಂದರ್ಭಿಕ ಚಿತ್ರ
ಬೀದರ್: ಟ್ರಕ್ ಹಾಗೂ ಆಟೋ ನಡುವೆ ಸಂಭಿಸಿದ ಭೀಕರ ಅಪಘಾತದಲ್ಲಿ ಐವರು ಮಹಿಳೆಯರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಬಳಿ ನಡೆದಿದೆ.
ಮೃತರನ್ನು 40 ವರ್ಷದ ಯಾದಮ್ಮ, 32 ವರ್ಷದ ಜಕ್ಕಮ್ಮ, 36 ವರ್ಷದ ಪ್ರಭಾವತಿ, 60 ವರ್ಷದ ರುಕ್ಮಿಣಿ ಹಾಗೂ 52 ವರ್ಷದ ಗುಂಡಮ್ಮ ಎಂದು ಗುರುತಿಸಲಾಗಿದೆ.
ಆಟೋದಲ್ಲಿ ಇನ್ನೂ 6 ಮಂದಿಗೆ ಗಾಯಗಳಾಗಿದ್ದು ಅವರನ್ನು ಬೀದರ್, ಮನ್ನಾಖೇಳಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ನಿನ್ನನ್ನು ಕೊಚ್ಚಿ, ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ: ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ!
ಮೃತರು ಮತ್ತು ಗಾಯಾಳುಗಳು ಉಡಮನಳ್ಳಿ ಗ್ರಾಮಸ್ಥರು ಎನ್ನಲಾಗುತ್ತಿದೆ. ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.