ಬೆಂಗಳೂರು: ಮ್ಯಾನ್ಹೋಲ್ ಕವರ್ ಮೇಲೆ ದ್ವಿಚಕ್ರ ವಾಹನ ಚಾಲನೆ; ಕೂದಲೆಳೆ ಅಂತರದಲ್ಲಿ ಅಪಾಯದಿಂದ ಕುಟುಂಬ ಪಾರು!

ಮ್ಯಾನ್ ಹೋಲ್ ಬಳಿ ಇಡಲಾಗಿದ್ದ ಕಬ್ಬಿಣದ ಫಲಕಗಳ ಮೇಲೆ ದ್ವಿಚಕ್ರವಾಹನ ಚಾಲನೆ ಮಾಡಿದ ಕುಟುಂಬವೊಂದು ಅಪಾಯದಿಂದ ಕೂದಲೆಳೆಯಲ್ಲಿ ಪಾರಾಗಿರುವ ಘಟನೆ ಬಸವನಗುಡಿ ಸಂಚಾರಿ ಪೊಲೀಸ್ ವ್ಯಾಪ್ತಿಯ ಟಾಗೂರ್ ವೃತ್ತ ಅಂಡರ್ ಪಾಸ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮ್ಯಾನ್ ಹೋಲ್ ಬಳಿ ಇಡಲಾಗಿದ್ದ ಕಬ್ಬಿಣದ ಫಲಕಗಳ ಮೇಲೆ ದ್ವಿಚಕ್ರವಾಹನ ಚಾಲನೆ ಮಾಡಿದ ಕುಟುಂಬವೊಂದು ಅಪಾಯದಿಂದ ಕೂದಲೆಳೆಯಲ್ಲಿ ಪಾರಾಗಿರುವ ಘಟನೆ ಬಸವನಗುಡಿ ಸಂಚಾರಿ ಪೊಲೀಸ್ ವ್ಯಾಪ್ತಿಯ ಟಾಗೂರ್ ವೃತ್ತ ಅಂಡರ್ ಪಾಸ್ ನಲ್ಲಿ ನಡೆದಿದೆ.
 
ದಂಪತಿ ಹಾಗೂ 5 ವರ್ಷದ ಮಗು ಅಪಾಯದಿಂದ ಪಾರಾಗಿದ್ದಾರೆ. ಸುರೇಶ್ ಹಾಗೂ ಕುಟುಂಬ ಸದಸ್ಯರು ಸಮಾರಂಭವೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದರು. ಟಾಗೂರ್ ವೃತ್ತದ ಬಳಿ ಮ್ಯಾನ್ ಹೋಲ್ ಬಳಿ ಇಡಲಾಗಿದ್ದ ಕಬ್ಬಿಣದ ಫಲಕಗಳ ಮೇಲೆ ದ್ವಿಚಕ್ರವಾಹನ ಚಾಲನೆ ಮಾಡಿದ್ದರಿಂದ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ; ಮತ್ತೆ ಗಡುವು ವಿಸ್ತರಣೆ
 
ಮ್ಯಾನ್ ಹೋಲ್ ಪ್ಲೇಟ್ ಗಳನ್ನು ದುರಸ್ತಿ ಮಾಡುವುದಕ್ಕಾಗಿ ರಸ್ತೆಯನ್ನು ಅಗೆದಿರುವುದನ್ನು ಗಮನಿಸದೇ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಮುಂಭಾಗದ ಚಕ್ರ ಸ್ಕಿಡ್ ಆಗಿದೆ.
 
ದ್ವಿಚಕ್ರವಾಹನ ಸಂಪೂರ್ಣ ಹಾನಿಗೊಳಗಾಗಿದ್ದು, ಪತ್ನಿ ಹಾಗೂ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮ್ಯಾನ್ ಹೋಲ್ ಬಳಿ ಯಾವುದೇ ಸೂಚನಾ ಫಲಕವೂ ಇರಲಿಲ್ಲ ಎಂದು ಸಂತ್ರಸ್ತ ಸುರೇಶ್ ಆರೋಪಿಸಿದ್ದಾರೆ. ಬಸವನಗುಡಿ ಪೊಲೀಸರು ಯಾವುದೇ ಪ್ರಕರಣವನ್ನೂ ದಾಖಲಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com