'ನಮ್ಮ ರಿಷಿ ಸುನಕ' ಬೆಂಗಳೂರಿಗೆ ಭೇಟಿ ನೀಡಿದ್ದನ್ನು ನಗರಿಗರು ನೆನಪಿಸಿಕೊಳ್ಳುವುದು ಹೀಗೆ...

ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು ರಿಷಿ ಸುನಕ್. ಭಾರತವನ್ನು 200 ವರ್ಷಗಳ ಕಾಲ ಆಳಿದ ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಅಳಿಯ' ಎಂದು ಕರೆಯಲ್ಪಡುವ ರಿಷಿ ಸುನಕ್ ಹಠಾತ್ ಬ್ರಿಟನ್ ಪ್ರಧಾನ ಮಂತ್ರಿಯಾದ ನಂತರ ಅವರು ಬೆಂಗಳೂರು ಜೊತೆ ಹೊಂದಿರುವ ನಂಟು, ಅವರು ಇಲ್ಲಿಗೆ ಬಂದು ಹೋಗಿರುವ
ರಿಷಿ ಸುನಕ್
ರಿಷಿ ಸುನಕ್

ಬೆಂಗಳೂರು: ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು ರಿಷಿ ಸುನಕ್. ಭಾರತವನ್ನು 200 ವರ್ಷಗಳ ಕಾಲ ಆಳಿದ ಇಂಗ್ಲೆಂಡಿನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಅಳಿಯ' ಎಂದು ಕರೆಯಲ್ಪಡುವ ರಿಷಿ ಸುನಕ್ ಹಠಾತ್ ಬ್ರಿಟನ್ ಪ್ರಧಾನ ಮಂತ್ರಿಯಾದ ನಂತರ ಅವರು ಬೆಂಗಳೂರು ಜೊತೆ ಹೊಂದಿರುವ ನಂಟು, ಅವರು ಇಲ್ಲಿಗೆ ಬಂದು ಹೋಗಿರುವ ಬಗ್ಗೆ ಚರ್ಚೆಯಾಗುತ್ತಿದೆ.

ಭಾರತೀಯ ಮೂಲದ ಕುಟುಂಬದಲ್ಲಿ ಜನಿಸುವುದರ ಹೊರತಾಗಿ, ಸುನಕ್ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಪತಿ ಎಂಬುದು ಮತ್ತೊಂದು ಗಮನಾರ್ಹ ಸಂಗತಿ. ಇಬ್ಬರೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿರುವಾಗ ಭೇಟಿಯಾಗಿ ಪರಿಚಯವಾಗಿ ಪರಸ್ಪರ ಪ್ರೀತಿಸಿ 2009 ರಲ್ಲಿ ಬೆಂಗಳೂರಿನ ಲೀಲಾ ಪ್ಯಾಲೇಸ್‌ ಹೊಟೇಲ್ ನಲ್ಲಿ  ಸರಳ ಸಮಾರಂಭದಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದರು. 

ರಿಷಿ ಸುನಕ್ ಅವರ ಭೇಟಿ ಮತ್ತು ಅವರ ಜೊತೆ ನಡೆಸಿದ ಮಾತುಕತೆ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಮತ್ತು ಮಣಿಪಾಲ ವಿಶ್ವವಿದ್ಯಾನಲಯದ ಪ್ರಸ್ತುತ ಅಧ್ಯಕ್ಷರೂ ಆಗಿರುವ ಟಿ ವಿ ಮೋಹನ್‌ದಾಸ್ ಪೈ ಹೇಳುತ್ತಾರೆ. ರಿಷಿ ಸುನಕ್ ಅತ್ಯಂತ ಶ್ರದ್ಧೆ, ಸೌಮ್ಯ ಮತ್ತು ಉತ್ಸಾಹಿ ಯುವಕನಾಗಿದ್ದರು, ಈಗಲೂ ಹಾಗೆಯೇ ಇದ್ದಾರೆ. ಅಕ್ಷತಾ ಅವರ ಮದುವೆಯ ಸಮಯದಲ್ಲಿ ಭೇಟಿ ಮಾಡಿದ್ದಾಗ ತುಂಬಾ ವಿಶ್ವಾಸ ಹೊಂದಿದ ಯುವಕ ಎಂದು ಅರಿತುಕೊಂಡೆ. ಬಹಳ ಸಾಧನೆ ಮಾಡಿದ ಹೊರತಾಗಿಯೂ, ಸರಳ-ಸೌಮ್ಯ ವ್ಯಕ್ತಿ. 

ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಕುಟುಂಬ ಭೇಟಿಯ ಸಂದರ್ಭದಲ್ಲಿ, ಸುನಕ್ ಅವರು ಬೆಂಗಳೂರಿನ ಅತ್ಯಂತ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಒಂದಾದ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ಸವಿದಿದ್ದರು. ರಿಷಿ ಅವರು 2019 ರಲ್ಲಿ ನಮ್ಮ ಹೊಟೇಲ್ ಗೆ ಅವರ ಮಕ್ಕಳು, ಪತ್ನಿ ಅಕ್ಷತಾ ಮತ್ತು ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಅವರೊಂದಿಗೆ ಬಂದು ಹೋಗಿದ್ದರು.

ಅನೇಕ ಸಂದರ್ಭಗಳಲ್ಲಿ ಅವರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದಾರೆ ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ ಹೇಳುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ಅವರು ತಮ್ಮ ಇಡೀ ಕುಟುಂಬದೊಂದಿಗೆ ರಿಷಿ ಸುನಕ್ ಅವರನ್ನು ಕರೆತಂದರು. ಸುನಕ್ ಮತ್ತು ಅಕ್ಷತಾ ಯುಕೆಯಿಂದ ಭೇಟಿಗಾಗಿ ಬಂದಿದ್ದರು. ಸಂಜೆ ಟಿಫಿನ್‌ಗೆ ನಮ್ಮ ಬಳಿಗೆ ಬಂದರು. ಆ ವೇಳೆ ರವಾ ವಡೆ, ಮಸಾಲೆ ದೋಸೆ ಮತ್ತು ಖಾರಾ ಬಾತ್ ಸವಿದಿದ್ದರು ಎನ್ನುತ್ತಾರೆ. 

ಸುನಕ್ ಅವರು ಈಗ ಬ್ರಿಟನ್ ಪ್ರಧಾನಿಯಾಗಿದ್ದು ಕಂಡು ಅಡಿಗ ಅವರಿಗೆ ಅಚ್ಚರಿಯಾಗುತ್ತದೆ.  ನಮ್ಮ ಹೊಟೇಲ್ ಗೆ ಭೇಟಿ ನೀಡಿದಾಗ ಅವರ ಬಗ್ಗೆ ಈ ಬಗ್ಗೆ ಸ್ವಲ್ಪವೂ ಕಲ್ಪನೆ ಹುಟ್ಟಿರಲಿಲ್ಲ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಸಮಯದಲ್ಲಿ ರಿಷಿ ಸುನಕ್ ಯಾರೆಂಬುದರ ಬಗ್ಗೆ ನಮಗೆ ಗೊತ್ತಿರಲಿಲ್ಲ. ಅವರು ಯುಕೆಯ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಬಿಡಿ. ಅವರು ಲಂಡನ್‌ನಲ್ಲಿ ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲಿದ್ದಾರೆ ಎಂದು ಸುಧಾ ಮೂರ್ತಿ ಹೇಳಿದರು ಎಂದು ಅರುಣ್ ಅಡಿಗ ಹೇಳುತ್ತಾರೆ. 

ಬೆಂಗಳೂರಿನ ಕಾರ್ಯಕರ್ತ ಮತ್ತು ರಾಜಕಾರಣಿ ಅನಿಲ್ ಶೆಟ್ಟಿ ಅವರು ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುನಕ್ ಅವರನ್ನು ವರ್ಷದ ಹಿಂದೆ ಭೇಟಿಯಾದ ಸಮಯದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದರ ಬಗ್ಗೆ ನೆನಪಿಸಿಕೊಳ್ಳುತ್ತಾರೆ. ನಾನು ಸುನಕ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಅವರು ಇನ್ನೂ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಕುಲಪತಿಯಾಗಿದ್ದರು. ಅದು ಲಂಡನ್‌ನಲ್ಲಿ ನಡೆದ ಅಧಿಕೃತ ಸಭೆಯ ಸಮಯದಲ್ಲಿ ಎಂದು ಲಂಡನ್‌ನಲ್ಲಿ ಈ ವರ್ಷದ ಆರಂಭದಲ್ಲಿ ಆಯೋಜಿಸಲಾದ ಇಂಡಿಯನ್ ಗ್ಲೋಬಲ್ ಫೋರಂನಲ್ಲಿ ಭಾರತೀಯ ನಿಯೋಗದ ಭಾಗವಾಗಿದ್ದ ಶೆಟ್ಟಿ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com