20 ಪ್ರಾಥಮಿಕ, 11 ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಘೋಷಣೆ

ಕರ್ನಾಟಕ ಶಿಕ್ಷಣ ಇಲಾಖೆ ಶುಕ್ರವಾರ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಘೋಷಣೆ ಮಾಡಿದ್ದು, 20 ಪ್ರಾಥಮಿಕ ಮತ್ತು 11 ಪ್ರೌಢಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕರ್ನಾಟಕ ಶಿಕ್ಷಣ ಇಲಾಖೆ ಶುಕ್ರವಾರ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಘೋಷಣೆ ಮಾಡಿದ್ದು, 20 ಪ್ರಾಥಮಿಕ ಮತ್ತು 11 ಪ್ರೌಢಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಶಿಕ್ಷಣ ಇಲಾಖೆಯು 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, 20 ಪ್ರಾಥಮಿಕ ಮತ್ತು 11 ಪ್ರೌಢಶಾಲಾ ಶಿಕ್ಷಕರನ್ನು ಆಯ್ಕೆ ಮಾಡಿದೆ. ಮಹಿಳಾ ಶಿಕ್ಷಕಿಯರಿಗೆ ಅಕ್ಷರ ಮಾತೆ “ಸಾವಿತ್ರಿಬಾಯಿ ಫ‌ುಲೆ" ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಸೆ.5ರಂದು ಶಿಕ್ಷಣ ಇಲಾಖೆ ನಡೆಸಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪ್ರದಾನ ಮಾಡಲಿದ್ದಾರೆ. ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಮುಖ್ಯ ಶಿಕ್ಷಕ ಹಾಗೂ ವಿಶೇಷ ಶಿಕ್ಷಕರಿಗೆ ತಲಾ 10 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್‌.ಎಸ್‌. ಶಿವಕುಮಾರ್‌ ಅಧಿಸೂಚನೆ ಹೊರಡಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ
ಪ್ರಾಥಮಿಕ ಶಾಲೆ ಶಿಕ್ಷಕರು

ಮಂಜುನಾಥ ಶಂಕರಪ್ಪ ಮಂಗೂಣಿ- ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆನ್ನೂರ, ನವಲಗುಂದ ಧಾರವಾಡ
ಅಮಿತಾನಂದ ಹೆಗ್ಡೆ- ಶಿಕ್ಷಕ, ಸಹಿಪ್ರಾ ಶಾಲೆ, ಬಂಗಾಡಿ, ಬೆಳ್ತಂಗಡಿ ತಾ. ದಕ್ಷಿಣ ಕನ್ನಡ
ಚಂದ್ರಶೇಖರ ಎಚ್‌.ಎಲ್‌.-ಶಿಕ್ಷಕ, ಸಕಿಪ್ರಾ ಶಾಲೆ, ರಾಗಿಮಾಕಲಹಳ್ಳಿ, ಚಿಕ್ಕಬಳ್ಳಾಪುರ
ಅಪ್ಪಸಾಹೇಬ ವಸಂತಪ್ಪ ಗಿರೆಣ್ಣವರ-ಮುಖ್ಯ ಶಿಕ್ಷಕ, ಕನ್ನಡ ಸಹಿಪ್ರಾ ಶಾಲೆ, ತುಕ್ಕಾನಟ್ಟಿ, ಮೂಡಲಗಿ ತಾ. ಚಿಕ್ಕೋಡಿ
ಶಿವಾನಂದಪ್ಪ ಬಿ.-ಶಿಕ್ಷಕ, ಸಹಿಪ್ರಾ ಶಾಲೆ, ಹರಗುವಳ್ಳಿ, ಶಿಕಾರಿಪುರ ತಾ., ಶಿವಮೊಗ್ಗ
ಹುಸೇನಸಾಬ್‌-ಶಿಕ್ಷಕ, ಸಮಾಪ್ರಾ ಶಾಲೆ, ಬಸನಾಳ, ಕಲಬುರಗಿ ದಕ್ಷಿಣ ವಲಯ ಕಲಬುರಗಿ
ಸುದರ್ಶನ್‌ ಕೆ.ವಿ.-ಮುಖ್ಯಶಿಕ್ಷಕ, ಕನ್ನಡ ಮತ್ತು ತಮಿಳು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕ್ಲೀವ್‌ಲ್ಯಾಂಡ್‌ ಟೌನ್‌, ಬೆಂಗಳೂರು ಉತ್ತರ ವಲಯ-3, ಬೆಂಗಳೂರು ಉತ್ತರ
ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ-ಮುಖ್ಯ ಶಿಕ್ಷಕ, ಬಾಲಕರ ಕನ್ನಡ ಸಹಿಪ್ರಾ ಶಾಲೆ, ಹಂದಿಗನೂರು, ಹಾವೇರಿ
ಸಂಜೀವ ದೇವಾಡಿಗ-ಮುಖ್ಯ ಶಿಕ್ಷಕ, ಸಕಿಪ್ರಾ ಶಾಲೆ, ಮಿಯೂರು, ಬಂಗ್ಲೆಗುಡ್ಡೆ, ಕೆರ್ವಾಶೆ, ಕಾರ್ಕಳ, ಉಡುಪಿ
ಫಿರೆಂಗಪ್ಪ ಸಿದ್ಧಪ್ಪ ಕಟ್ಟಿಮನಿ-ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ, ತೊದಲಬಾಗಿ, ಜಮಖಂಡಿ ತಾ, ಬಾಗಲಕೋಟೆ
ಚಂದ್ರಕಲಾ-ಶಿಕ್ಷಕಿ, ಸಕಿಪ್ರಾ ಶಾಲೆ, ಹಾಲಭಾವಿ, ಶಹಾಪುರ ತಾ.ಯಾದಗಿರಿ
ನಿರಂಜನ ಪಿ.ಜೆ.-ಶಿಕ್ಷಕ, ಸಕಿಪ್ರಾ ಶಾಲೆ, 76 ವೆಂಕಟಾಪುರ ಕ್ಯಾಂಪ್‌ ಹೊಸಪೇಟೆ ತಾ.ವಿಜಯನಗರ
ಸುಶೀಲಬಾಯಿ ಲಕ್ಷ್ಮೀಕಾಂತ್‌ ಗುರುವ- ಶಿಕ್ಷಕಿ, ಕನ್ನಡ ಸಹಿಪ್ರಾ ಶಾಲೆ, ವಡಗಾವಿ, ಬೆಳಗಾವಿ
ವಿದ್ಯಾ ಕಂಪಾಪೂರ ಮಠ-ಶಿಕ್ಷಕಿ, ಸಹಿಪ್ರಾ ಶಾಲೆ, ನೆರೆಬೆಂಚೆ, ಕುಷ್ಟಗಿ, ಕೊಪ್ಪಳ
ಬಸವರಾಜ ಜಾಡರ-ಶಿಕ್ಷಕ, ಸಹಿಪ್ರಾ ಶಾಲೆ, ಮುಳ್ಳೂರು, ಸಿಂಧನೂರು ತಾ.ರಾಯಚೂರು
ಗಂಗಾಧರಪ್ಪ ಬಿ.ಆರ್‌.-ಮುಖ್ಯ ಶಿಕ್ಷಕ, ಸಮಾಹಿಪ್ರಾ ಶಾಲೆ, ಮೆಣಸೆ, ಶೃಂಗೇರಿ ತಾ. ಚಿಕ್ಕಮಗಳೂರು
ಚಂದ್ರಶೇಖರರೆಡ್ಡಿ- ಶಿಕ್ಷಕ, ಸಕಿಪ್ರಾ ಶಾಲೆ, ಕೆ.ರಾಂಪುರ, ಪಾವಗಡ ತಾ., ಮಧುಗಿರಿ
ಸುಧಾಕರ ಗಣಪತಿ ನಾಯಕ-ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ, ಕೆಂಚನಹಳ್ಳಿ ಯಲ್ಲಾಪುರ ತಾ. ಶಿರಸಿ
ಈಶ್ವರಪ್ಪ ಅಂದಾನಪ್ಪ ರೇವಡಿ- ಶಿಕ್ಷಕ, ಸಹಿಪ್ರಾ ಶಾಲೆ, ಹಿರೇಕೊಪ್ಪ, ರೋಣ, ಗದಗ
ಕವಿತ ಈ.- ಶಿಕ್ಷಕಿ, ಸಕಿಪ್ರಾ ಶಾಲೆ, ಬೋರಪ್ಪನಗುಡಿ, ಚಳ್ಳಕೆರೆ ತಾ. ಚಿತ್ರದುರ್ಗ.

ಪ್ರೌಢಶಾಲೆ ವಿಭಾಗ
ಮಹೇಶ್‌ ಕೆ.ಎನ್‌.-ವಿಜ್ಞಾನ ಶಿಕ್ಷಕ, ಶ್ರೀ ಆಂಜನೇಯ ಪ್ರೌಢಶಾಲೆ, ಕಡ್ಲೇಗುದ್ದು, ಚಿತ್ರದುರ್ಗ
ಇಬ್ರಾಹಿಂ ಎಸ್‌.ಎಂ.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ನೇರುಗಳಲೆ, ಸೋಮವಾರಪೇಟೆ, ಕೊಡಗು
ರಘು ಬಿ.ಎಂ.- ವಿಜ್ಞಾನ ಶಿಕ್ಷಕ, ರಾಷ್ಟ್ರೀಯ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ) ಶಿವಮೊಗ್ಗ
ಭೀಮಪ್ಪ- ವಿಜ್ಞಾನ ಶಿಕ್ಷಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಸ್ಕಿ, ಲಿಂಗಸುಗೂರು ವಲಯ, ರಾಯಚೂರು
ರಾಧಾಕೃಷ್ಣ ಟಿ.- ವಿಜ್ಞಾನ ಶಿಕ್ಷಕ, ಸರ್ಕಾರಿ ಪಿಯು ಕಾಲೇಜು, ಕೊಯ್ಯೂರು, ಬೆಳ್ತಂಗಡಿ ತಾ., ದಕ್ಷಿಣ ಕನ್ನಡ
ನಾರಾಯಣ ಪರಮೇಶ್ವರ ಭಾಗ್ವತ- ಕನ್ನಡ ಶಿಕ್ಷಕ, ಶ್ರೀ ಮಾರಿಕಾಂಬಾ ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ) ಶಿರಸಿ
ಅರುಣಾ ಜೂಡಿ-ಹಿಂದಿ ಶಿಕ್ಷಕಿ, ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ), ಕಿನ್ನಾಳ, ಕೊಪ್ಪಳ
ಸುನೀಲ ಪರೀಟ- ಹಿಂದಿ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಲಕ್ಕುಂಡಿ, ಬೈಲಹೊಂಗಲ ತಾ. ಬೆಳಗಾವಿ
ಬಾಲಸುಬ್ರಮಣ್ಯ ಎಸ್‌.ಟಿ.- ದೈಹಿಕ ಶಿಕ್ಷಣ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಕೊಕ್ಕರೆ ಬೆಳ್ಳೂರು, ಮದ್ದೂರು ತಾ.ಮಂಡ್ಯ
ಡಾ. ಚೇತನ ಬಣಕಾರ-ಹಿಂದಿ ಶಿಕ್ಷಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಹರಪನಹಳ್ಳಿ ತಾ.ವಿಜಯನಗರ
ಕೀರ್ತಿ ಬಸಪ್ಪ ಲಗಳಿ-ಸಂಗೀತ ಶಿಕ್ಷಕಿ, ಸರ್ಕಾರಿ ಪ್ರೌಢಶಾಲೆ, ಮಿಟ್ಟೇಮರಿ, ಬಾಗೇಪಲ್ಲಿ ತಾ. ಚಿಕ್ಕಬಳ್ಳಾಪುರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com