ಹೆಸರಾಂತ ಸಂಸ್ಥೆಯ ಹೆಸರಲ್ಲಿ ನಕಲಿ ವೆಬ್ ಸೈಟ್: ಮೂವರ ಬಂಧನ

ಬೆಂಗಳೂರು ಮೂಲದ ಖ್ಯಾತನಾಮ ಸಂಸ್ಥೆಯ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರದು ವಂಚಿಸುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಮೂಲದ ಖ್ಯಾತನಾಮ ಸಂಸ್ಥೆಯ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರದು ವಂಚಿಸುತ್ತಿದ್ದ ಮೂವರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ವಿಆರ್ ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಎಂಬ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರು ಖದೀಮರನ್ನು ಈಶಾನ್ಯ ವಿಭಾಗದ ಸಿ.ಇ.ಎನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ಯಶವಂಪುರದ ಬ್ರಹ್ಮದೇವ್ ಯಾದವ್(25 ವರ್ಷ) ಮುಕೇಶ್ ಕುಮಾರ್ ಯಾದವ್( 20 ವರ್ಷ)ಹಾಗೂ ವಿಜಯ್ ಕುಮಾರ್ ಯಾದವ್ ( 22 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ನಗರದಿಂದ ಸಾಗರಕ್ಕೆ ಕಳುಹಿಸಲು ಗೂಗಲ್‌ಗೆ ಹೋಗಿ ಪ್ಯಾಕರ್ಸ್‌ಅಂಡ್ ಮೂವರ್ಸ್‌ಎಂದು ಕೀ ವರ್ಡ್ಸ್ ಟೈಪ್ ಮಾಡಿದ್ದು ವಿಆರ್ ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ದೊರಕಿದೆ. ಇದನ್ನು ಅಸಲಿ ವೆಬ್‌ಸೈಟ್ ಎಂದು ನಂಬಿ ಅದರಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದು ಆರೊಪಿಯು ಮೊದಲಿಗೆ ರೂ 1 ಸಾವಿರ ನೀಡಲು ತಿಳಿಸಿದ್ದಾರೆ. ಫಿರ್ಯಾದುದಾರರು ರೂ 1 ಸಾವಿರ ನೀಡಿದ ನಂತರ ಇಬ್ಬರೂ ವ್ಯಕ್ತಿಗಳು ದೂರುದಾರರ ಮನೆಗೆ ಬಂದು ದ್ವಿಚಕ್ರ ವಾಹನವನ್ನು ಪ್ಯಾಕ್ ಮಾಡಿ ಪಡೆದು ಹೋಗಿದ್ದರು. ಮರು ದಿನ ದೂರುದಾರರ ಮೊಬೈಲ್‌ಗೆ ವಾಟ್ಸ್ ಆಪ್ ಮುಖಾಂತರ ಆರೋಪಿಯು ಬಿಲ್ ಕಳುಹಿಸಿ 8 ಸಾವಿರ ನೀಡುವಂತೆ ಇಲ್ಲವಾದರೆ ವಾಹನವನ್ನು ನೀಡುವುದಿಲ್ಲ ಎಂದು ಸುಲಿಗೆ ಮಾಡಲು ಯತ್ನಿಸಿದ್ದಾರೆ. ಈ ಸಂಬಂಧಿಸಿದಂತೆ ಬಂದು ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಯಶವಂತಪುರ ಬಳಿ ಬಂಧಿಸಲಾಗಿದೆ. 

ಬೇರೆ ಬೇರೆ ಸಂಸ್ಥೆಗಳ ಹೆಸರಲ್ಲೂ ವೆಬ್ ಸೈಟ್
ವಿಚಾರಣೆ ವೇಳೆ ಆರೋಪಿಯು ವಿ ಆರ್ ಎಲ್ ಎಂಬ ಹೆಸರಿನಲ್ಲಿ ಅಲ್ಲದೇ ಬೇರೆ ಬೇರೆ ಪ್ಯಾಕರ್ಸ್ ಅಂಡ್ ಮೂವರ್ಸ್ ಎಂಬ ವೆಬ್ ಸೈಟ್ ಹೆಸರಿನಲ್ಲಿ ವೆಬ್‌ಸೈಟ್ ಸೃಷ್ಟಿಸಿ ಮೊದಲಿಗೆಕಡಿಮೆ ಹಣ ಹೇಳಿ ಒಮ್ಮೆಅವರ ಕೈಗೆ ವಸ್ತು ಬಂದ ಬಳಿಕ ಹೆಚ್ಚು ಹಣ ಕೇಳಿ ಸುಲಿಗೆ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಗಳಿಂದ 1 ದ್ವಿಚಕ್ರ ವಾಹನವನ್ನು ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿ.ಇ.ಎನ್ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ರಾಮ್ ಮತ್ತವರ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ಕೈಗೊಂಡಿದೆ.

ನಕಲಿ ವೆಬ್‌ಸೈಟ್ ರಚಿಸಿದ ನಂತರ, ಆರೋಪಿಗಳು ವೆಬ್‌ಸೈಟ್ ಲಿಂಕ್‌ಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಪೋರ್ಟಲ್‌ಗಳಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಶಿವಮೊಗ್ಗದ ಸಾಗರಕ್ಕೆ ಬೈಕ್ ತಲುಪಿಸಲು ಮುಂದಾಗಿದ್ದರು. ಸೇವೆಗಾಗಿ 1000 ರೂ. ನಿಗದಿ ಪಡಿಸಲಾಗಿತ್ತು. ಎರಡು ದಿನಗಳ ನಂತರ ಆರೋಪಿಗಳು ಆತನಿಗೆ ಕರೆ ಮಾಡಿ ಹಣ ಕೊಡಲು ನಿರಾಕರಿಸಿದರೆ ಬೈಕ್ ವಿಲೇವಾರಿ ಮಾಡುವುದಾಗಿ ಬೆದರಿಸಿ 8 ಸಾವಿರ ಸುಲಿಗೆಗೆ ಯತ್ನಿಸಿದ್ದಾರೆ. ಸಿಇಎನ್ ಪೊಲೀಸರಿಗೆ ದೂರು ನೀಡಲಾಗಿದೆ.

ಆರೋಪಿಗಳು ನಕಲಿ ವೆಬ್‌ಸೈಟ್ ನಡೆಸುತ್ತಿದ್ದ ಮನೆಯೊಂದರಿಂದ ಮತ್ತು ಸುಳ್ಳು ವಹಿವಾಟು ರಸೀದಿಗಳನ್ನು ನೀಡುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ಸುಲಭವಾಗಿ ಹಣ ಸಂಪಾದಿಸಲು ಜನರನ್ನು ವಂಚಿಸುತ್ತಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com