ಬೆಂಗಳೂರು: ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ 29 ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ

ಬಿಬಿಎಂಪಿಯ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ 61 ಆಸ್ತಿ ಮಾಲೀಕರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋದ ನಂತರ, ಕೇವಿಯಟ್ ಸಲ್ಲಿಸುವಂತೆ ಬಿಬಿಎಂಪಿಗೆ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಗ್ರೀನ್‌ವುಡ್ ರೀಜೆನ್ಸಿಯಲ್ಲಿ ಗರ್ಜಿಸಿದ ಬಿಬಿಎಂಪಿ ಬುಲ್ಡೋಜರ್‌ಗಳು
ಗ್ರೀನ್‌ವುಡ್ ರೀಜೆನ್ಸಿಯಲ್ಲಿ ಗರ್ಜಿಸಿದ ಬಿಬಿಎಂಪಿ ಬುಲ್ಡೋಜರ್‌ಗಳು

ಬೆಂಗಳೂರು: ಬಿಬಿಎಂಪಿಯ ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ 61 ಆಸ್ತಿ ಮಾಲೀಕರು ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋದ ನಂತರ, ಕೇವಿಯಟ್ ಸಲ್ಲಿಸುವಂತೆ ಬಿಬಿಎಂಪಿಗೆ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.

ಎಸ್‌ಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಲೋಕೇಶ್ ಮಾತನಾಡಿ, ನಡಾವಳಿ ಅನುಸರಿಸಿ ಮತ್ತು ಕೇವಿಯಟ್ ಸಲ್ಲಿಸುವ ಮೂಲಕ, ಬೆಂಗಳೂರು ಪೂರ್ವ ತಹಶೀಲ್ದಾರ್ ವ್ಯಾಪ್ತಿಯ 29 ಆಸ್ತಿಗಳ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ (ಕೆಎಲ್ಆರ್ ಕಾಯ್ದೆ) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 104 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸೂಚನೆ ದೊರೆತಿದ್ದು, ಒತ್ತುವರಿ ತೆರವು ಮಾಡಲು ಶೀಘ್ರದಲ್ಲೇ ಜೆಸಿಬಿಗಳು ಘರ್ಜಿಸುವ ಸಾಧ್ಯತೆಯಿದೆ. ಈ ಹೆಚ್ಚಿನ ಆಸ್ತಿಗಳು ಮುನ್ನೇಕೊಳಲು ಗ್ರಾಮ ಮತ್ತು ವರ್ತೂರು ಹೋಬಳಿ ಅಮಾನಿ ಬೆಳಂದೂರು ಖಾನೆ ಗ್ರಾಮದಲ್ಲಿವೆ.

31 ಮಾಲೀಕರಿಗೆ ಕೆಎಲ್‌ಆರ್ ಕಾಯ್ದೆಯ ಸೆಕ್ಷನ್ 104 ರ ಅಡಿಯಲ್ಲಿ ಕಂದಾಯ ಇಲಾಖೆ ನೋಟಿಸ್ ನೀಡಿದ್ದು, ಅತಿಕ್ರಮಣಗಳನ್ನು ಅವರೇ ತೆರವುಗೊಳಿಸುವಂತೆ ಸೂಚಿಸಿದೆ. ಮಾಲೀಕರು ಕ್ರಮಕೈಗೊಳ್ಳಲು ವಿಫಲವಾದ ಪ್ರಕರಣಗಳಲ್ಲಿ, ಮಧ್ಯಪ್ರವೇಶಿಸುವಂತೆ ಕಂದಾಯ ಇಲಾಖೆಯು ಬಿಬಿಎಂಪಿಗೆ ಆದೇಶಿಸಿದೆ. 31 ಮಾಲೀಕರ ಪೈಕಿ ಪಾಲಿಕೆಯು ಇಬ್ಬರನ್ನು ಹೊರಗಿಡಬೇಕು ಮತ್ತು ಹೈಕೋರ್ಟ್‌ನಲ್ಲಿ ಸಲ್ಲಿಸಿರು ರಿಟ್ ಅರ್ಜಿಯ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

ಬೆಂಗಳೂರು ಪೂರ್ವ ತಹಶೀಲ್ದಾರ್ ಅವರ ಆದೇಶದ ಪ್ರಕಾರ, 'ಕೆಎಲ್‌ಆರ್ ಕಾಯ್ದೆಯ ಸೆಕ್ಷನ್ 104 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಒತ್ತುವರಿ ತೆರವುಗೊಳಿಸಲು ನಾನು ಪ್ರತಿವಾದಿಗಳಿಗೆ ನಿರ್ದೇಶಿಸುತ್ತೇನೆ. ಎಡಿಎಲ್‌ಆರ್ (ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್) ನ 2 ಸರ್ವೆಯ ಪ್ರಕಾರ ಒತ್ತುವರಿಯಾಗಿರುವ ಸರ್ವೇ ನಂಬರ್‌ಗಳಲ್ಲಿನ ಒತ್ತುವರಿಯನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ತಿಳಿಸಿದ್ದಾರೆ.

ತಪ್ಪಿದಲ್ಲಿ ಬಿಬಿಎಂಪಿಯ ಮಳೆನೀರು ಹೋಗುವ ಚರಂಡಿ ವಿಭಾಗದ ಅಧಿಕಾರಿಗಳು ಸಂಬಂಧಪಟ್ಟ ಸರ್ವೇಯರ್ ನೆರವಿನೊಂದಿಗೆ, ಬಿಬಿಎಂಪಿಯ ಸಂಬಂಧಪಟ್ಟ ಕಂದಾಯ ಅಧಿಕಾರಿ ಮತ್ತು ಉಪ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಭೂಮಾಪಕರು ಭೌತಿಕವಾಗಿ ಗುರುತಿಸಿರುವಂತೆ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್‌ನಲ್ಲಿನ ರಿಟ್ ಅರ್ಜಿ ಸಂಖ್ಯೆ 18842/2022 ಮತ್ತು 18828/2022 ರ ಅಡಿಯಲ್ಲಿನ ಆಸ್ತಿಗಳನ್ನು ಹೊರತುಪಡಿಸಿ ಒತ್ತುವರಿ ತೆರವು ಮಾಡಬೇಕು. ರಿಟ್ ಅರ್ಜಿಯ ಫಲಿತಾಂಶವನ್ನು ಗಮನಿಸಿ, ಸಂದೀಪ್ ಕುಮಾರ್ ಭಟ್ಟಾಚಾರ್ಯ ಮತ್ತು ರಂಜಿತ್ ಕುಮಾರ್ ಮಂಡಲ್ ಅವರ ಎರಡು ಆಸ್ತಿಗಳ ಮೇಲೆ ಬಿಬಿಎಂಪಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com