ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಸಿಪಿಐ ಶ್ರೀಮಂತ ಇಲ್ಲಾಳ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಶಿಫ್ಟ್
ಕಲಬುರಗಿ ಖಾಸಗಿ ಆಸ್ಪತ್ರೆ ಯಿಂದ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಏರ್ ಲಿಪ್ಟ್ ಮಾಡಲಾಗಿದ್ದು, ಏರ್ ಆಂಬುಲೆನ್ಸ್ ನಲ್ಲಿ ಕುಟುಂಬದ ಇಬ್ಬರು ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ್ದಾರೆ.
Published: 27th September 2022 08:43 AM | Last Updated: 27th September 2022 02:00 PM | A+A A-

ಆ್ಯಂಬುಲೆನ್ಸ್ ನಲ್ಲಿ ಶ್ರೀಮಂತ ಇಲ್ಲಾಳ್ ರವಾನೆ
ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಇಲ್ಲಿನ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಪಿಐ ಶ್ರೀಮಂತ ಇಲ್ಲಾಳ್ ಅವರನ್ನು ಕಲಬುರಗಿ ವಿಮಾನ ನಿಲ್ದಾಣದಿಂದ ಏರ್ ಲಿಫ್ಟ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಯಿತು.
ಕಲಬುರಗಿ ಖಾಸಗಿ ಆಸ್ಪತ್ರೆ ಯಿಂದ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಏರ್ ಲಿಪ್ಟ್ ಮಾಡಲಾಗಿದ್ದು, ಏರ್ ಆಂಬುಲೆನ್ಸ್ ನಲ್ಲಿ ಕುಟುಂಬದ ಇಬ್ಬರು ಮತ್ತು ವೈದ್ಯಕೀಯ ಸಿಬ್ಬಂದಿ ತೆರಳಿದ್ದಾರೆ.
ಭಾನುವಾರ ಸಂಜೆ ಏರ್ ಆಂಬುಲೆನ್ಸ್ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಪ್ಲಾನ್ ಪ್ರಕಾರ, ವೈದ್ಯರು ಸೋಮವಾರ ಬೆಳಿಗ್ಗೆ ಅವರ ಏರ್‌ಲಿಫ್ಟಿಂಗ್ ಅನ್ನು ಸರಿಮಾಡುವ ಮೊದಲು ಅವರ ಆರೋಗ್ಯವನ್ನು ಮತ್ತೊಮ್ಮೆ ಪರಿಶೀಲಿಸಿದರು. ಆಂಬ್ಯುಲೆನ್ಸ್‌ನಲ್ಲಿ ಇಲ್ಲಾಳ್ ಅವರನ್ನು ಬೆಳಗ್ಗೆ 9.30ಕ್ಕೆ ಜೀರೋ ಟ್ರಾಫಿಕ್ ನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ಕಲಬುರಗಿ: ಗಾಂಜಾ ದಂಧೆಕೋರರಿಂದ ಸಿಪಿಐ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಶ್ರೀಮಂತ್ ಇಲ್ಲಾಳ್ ಪರಿಸ್ಥಿತಿ ಗಂಭೀರ!
ಕಲಬುರಗಿ ವಿಮಾನ ನಿಲ್ದಾಣದಿಂದ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರು ಮಣಿಪಾಲ ಆಸ್ಪತ್ರೆಗೆ ಏರ್ ಲಿಪ್ಟ್ ಆಗಲಿದೆ. ಏರ್ ಲಿಫ್ಟ್ ಸಂದರ್ಭದಲ್ಲಿ ಸಂಸದ ಡಾ. ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ಎಸ್.ಪಿ. ಇಶಾ ಪಂತ್ ಸೇರಿದಂತೆ ಮುಂತಾದವರಿದ್ದರು.
ಗಾಂಜಾ ದಂಧೆಕೋರರೊಬ್ಬರು ತುರೂರಿ ವಾಡಿ ಗ್ರಾಮದಿಂದ ಕಳ್ಳಸಾಗಣೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ (ಗ್ರಾಮೀಣ) ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ ಮಹಾಗಾಂವ ಪೊಲೀಸರ ತಂಡ ಶುಕ್ರವಾರ ರಾತ್ರಿ ಆರೋಪಿಯನ್ನು ಹಿಡಿಯಲು ತುರೂರಿ ವಾಡಿಗೆ ತೆರಳಿದ್ದರು. ಆದರೆ, ಸುಮಾರು 40-50 ಮಂದಿ ದುಷ್ಕರ್ಮಿಗಳು ಇಲ್ಲಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀಮಂತ್ ಇಲ್ಲಾಳ್ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.