ಬಿಬಿಎಂಪಿ ಯತ್ನ ಸಫಲ: 92 ಕೋಟಿ ರೂ. ತೆರಿಗೆ ಬಾಕಿ ಕಟ್ಟಿದ ಹೆಚ್ಎಎಲ್; ವಾರ್ಷಿಕ 5 ಕೋಟಿ ರೂ ಪಾವತಿಸಲು ಒಪ್ಪಿಗೆ

ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಯಶಸ್ವಿಯಾಗಿದ್ದು, ವಾರ್ಷಿಕ 5 ಕೋಟಿ ರೂ ಪಾವತಿಸಲು ಒಪ್ಪಿಗೆ ನೀಡಿರುವ ಹೆಚ್ಎಎಲ್, 92 ಕೋಟಿ ರೂ. ತೆರಿಗೆ ಬಾಕಿಯನ್ನು ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಯಶಸ್ವಿಯಾಗಿದ್ದು, ವಾರ್ಷಿಕ 5 ಕೋಟಿ ರೂ ಪಾವತಿಸಲು ಒಪ್ಪಿಗೆ ನೀಡಿರುವ ಹೆಚ್ಎಎಲ್, 92 ಕೋಟಿ ರೂ. ತೆರಿಗೆ ಬಾಕಿಯನ್ನು ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಕಂದಾಯ ಆಯುಕ್ತ ಆರ್.ಎಲ್.ದೀಪಕ್ ಅವರು ಮಾತನಾಡಿ, ಈ ಹಿಂದೆ ಎಚ್‌ಎಎಲ್ ಸುಮಾರು 35 ಲಕ್ಷ ರೂಪಾಯಿ ಆಸ್ತಿ ತೆರಿಗೆ ಪಾವತಿಸುತ್ತಿತ್ತು. ಹೀಗಾಗಿ ಹೆಚ್ಎಎಲ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ, ಕಾನೂನು ನಿಯಮಗಳನ್ನು ವಿವರಿಸಲಾಗಿತ್ತು. ಇದರಂತೆ ವಾರ್ಷಿಕವಾಗಿ 5 ಕೋಟಿ ರುಪಾಯಿಗಳನ್ನು ಆಸ್ತಿ ತೆರಿಗೆಯಾಗಿ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಎಚ್‌ಎಎಲ್ ಆಸ್ತಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಶಾಲಾ ಆವರಣ, ಎಚ್‌ಎಎಲ್ ಆಸ್ಪತ್ರೆ, ಬ್ಯಾಂಕ್‌ಗಳಿಗೆ ಬಾಡಿಗೆ ನೀಡಿರುವ ಸ್ಥಳಗಳು ಸೇರಿದಂತೆ ಇತರೆ ಆಸ್ತಿಗಳ ವೈಜ್ಞಾನಿಕ ಮೌಲ್ಯಮಾಪನವನ್ನು ಕೈಗೊಳ್ಳಲಾಯಿತು. ಮಹದೇವಪುರ ವಲಯದ ಸಹಾಯಕ ಕಂದಾಯ ಅಧಿಕಾರಿಗಳು ಲೆಕ್ಕಾಚಾರ ನಡೆಸಿದ್ದು, ಮತ್ತೊಂದೆಡೆ ಎಚ್‌ಎಎಲ್ ಮತ್ತು ಬಿಬಿಎಂಪಿ ಕೂಡ ತಮ್ಮ ಕಾನೂನು ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಅಂತಿಮ ಮೌಲ್ಯಮಾಪನದ ನಂತರ, ಎಚ್‌ಎಎಲ್‌ಗೆ ಮನವರಿಕೆಯಾಯಿತುಯಯ ಅದರ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರು ಮಾರ್ಚ್ 31 ರಂದು ಆರ್‌ಟಿಜಿಎಸ್ ಮೂಲಕ 92.57 ಕೋಟಿ ರೂ.ಗಳನ್ನು ಪಾವತಿಸಲು ಒಪ್ಪಿಗೆ ನೀಡಿದ್ದಾರೆಂದು ತಿಳಿಸಿದರು.

ಈ ಕ್ರಮವು ಪ್ರಕರಣಗಳನ್ನು ತಪ್ಪಿಸುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯಮಗಳ ಬಾಕಿ ತೆರಿಗೆಗಳನ್ನು ತೆರವುಗೊಳಿಸಲು ಇದು ಪ್ರೋತ್ಸಾಹಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com