ಹೆಚ್ಚುತ್ತಿರುವ ತಾಪಮಾನ: ಅರಣ್ಯ, ಒಣ ಭೂಮಿ ಮೇಲೆ ಗಂಭೀರ ಪರಿಣಾಮ; ಕಾಡ್ಗಿಚ್ಚು ಹೆಚ್ಚುವ ಭೀತಿ!

ದಿನ ಕಳೆಯುತ್ತಿದ್ದಂತೆ ರಾಜ್ಯದಲ್ಲಿ ತಾಪಮಾನ ಏರುತ್ತಲೇ ಇದ್ದು, ಇದು ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ, ಅರಣ್ಯ ಹಾಗೂ ಒಣ ಭೂಮಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದಿನ ಕಳೆಯುತ್ತಿದ್ದಂತೆ ರಾಜ್ಯದಲ್ಲಿ ತಾಪಮಾನ ಏರುತ್ತಲೇ ಇದ್ದು, ಇದು ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ, ಅರಣ್ಯ ಹಾಗೂ ಒಣ ಭೂಮಿ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಹವಾಮಾನ ಮತ್ತು ಸಸ್ಯವರ್ಗದ ಮಾದರಿಗಳನ್ನು ಗಮನಿಸಿದರೆ, ಪ್ರಸ್ತುತ ಏರುತ್ತಿರುವ ತಾಪಮಾನವು ಇತರ ಅರಣ್ಯ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಒಣ ಕಾಡುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹಾಗೂ ಅಧಿಕಾರಿಗಳು ಹೇಳಿದ್ದಾರೆ.

ತಾಪಮಾನ ಏರಿಕೆಯಿಂದಾಗಿ ಅರಣ್ಯ ಪ್ರದೇಶಗಳು ಹೆಚ್ಚು ಒಣಗುತ್ತವೆ. ಅಲ್ಲದೆ, ಒಣ ಭೂಮಿಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಅರಣ್ಯ ಒಣಗುವುದರಿಂದ ಕಾಡ್ಗಿಚ್ಚು ಸಮಸ್ಯೆ ಕೂಡ ತಲೆದೋರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹವಾಮಾನ ಪರಿಸ್ಥಿತಿಯ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಪ್ರಸ್ತುತ ಪರಿಸ್ಥಿತಿ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ, ರಾಜಸ್ಥಾನದ ನಂತರ ದೇಶದಲ್ಲಿ ಅತೀ ಹೆಚ್ಚು ಒಣ ಭೂಮಿಯನ್ನು ಹೊಂದಿರುವ ರಾಜ್ಯ ಕರ್ನಾಟಕವಾಗಿದೆ. ಹೀಗಾಗಿ ಪರಿಸ್ಥಿತಿ ಎದುರಿಸಲು ತಂತ್ರಗಳನ್ನು ರೂಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ಟನ ಡೈರೆಕ್ಟರ್ ಜನರಲ್ ಜಗಮೋಹನ್ ಶರ್ಮಾ ಅವರು ಮಾತನಾಡಿ, 2035-2085 ವರ್ಷಗಳಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ದೀರ್ಘಾವಧಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತದ ಸರ್ಕಾರಗಳು ಯೋಜನೆಗಳ ಮೇಲಿನ ಹೂಡಿಕೆಯ ಮೇಲೆ ಕೆಲಸ ಮಾಡುತ್ತಿವೆಯೇ ಹೊರದು, ಭೂಮಿ ಹಾಗೂ ಮಣ್ಣಿನ ಸಂರಕ್ಷಣೆಯ ಹೂಡಿಕೆಗೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂದು ಗಮನ ಸೆಳೆದಿದ್ದಾರೆ.

ಮಳೆ ಹಾಗೂ ಬೆಳೆಯ ಪರಿಣಾಮಗಳು ಈಗಾಗಲೇ ಗೋಚರಿಸುತ್ತಿವೆ. ಇದು ಅರಣ್ಯ ಪ್ರದೇಶಗಳು ಮತ್ತು ಜೀವವೈವಿಧ್ಯತೆಯ ಮೇಲೂ ಪರಿಣಾಮ ಬೀರುತ್ತಿದೆ. ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಎಲೆ ಉದುರುವ ಕಾಡುಗಳ ಮೇಲಿನ ಪರಿಣಾಮಗಳನ್ನು ತಿಳಿಯಲು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಮೇಲೆ ಅನೇಕ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ. ತಾಪಮಾನ ಏರಿಕೆಗೆ ಅರಣ್ಯ ನಾಶ ಪ್ರಮುಖ ಕಾರಣವಾಗಿದೆ. ಅರಣ್ಯದಲ್ಲಿನ ನಿರ್ಮಾಣ ಹಾಗೂ ನಾಗರೀಕ ಕಾಮಗಾರಿಗಳು ಇತರ ಪರಿಣಾಣವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.

ಇಂದು ವಿಶ್ವ ಭೂಮಿ ದಿನವಾಗಿದ್ದು, ಈ ದಿನವನ್ನು ಪ್ರತಿ ವರ್ಷ ಏಪ್ರಿಲ್‌ 22 ರಂದು ಆಚರಿಸಲಾಗುತ್ತದೆ. ಪರಿಸರ ಕಾಳಜಿ ಹಾಗೂ ಭೂಮಿಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಈ ದಿನದ ಉದ್ದೇಶವಾಗಿದೆ. ವಿಶ್ವದ 193 ದೇಶಗಳು ಈ ದಿನವನ್ನು ಆಚರಿಸುತ್ತವೆ. ಭೂಮಿಯ ದಿನದ 2023 ರ ಥೀಮ್ "ನಮ್ಮ ಭೂಮಿಯಲ್ಲಿ ಹೂಡಿಕೆ ಮಾಡಿ" ಎನ್ನುವುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com