ಹಳೇ ದ್ವೇಷಕ್ಕೆ ಮನೆಗಳ ಹೊರಗೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ: 3 ಕಿಡಿಗೇಡಿಗಳ ಬಂಧನ

ದ್ವೇಷದ ಹಿನ್ನೆಲೆಯಲ್ಲಿ ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯೊಂದು ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿ ಭಾನುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದ್ವೇಷದ ಹಿನ್ನೆಲೆಯಲ್ಲಿ ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯೊಂದು ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತನಗರದಲ್ಲಿ ಭಾನುವಾರ ನಡೆದಿದೆ.

ವಸಂತನಗರ ಮಾರಮ್ಮ ದೇವಸ್ಥಾನ ಬೀದಿಯ 8ನೇ ಕ್ರಾಸ್ ನಿವಾಸಿ ರಂಜಿತ್ ಮಂದನ್ ಮನೆ ಬಳಿ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಘಟನೆಯಲ್ಲಿ ರಂಜಿತ್ ಅವರಿಗೆ ಸೇರಿದ 2 ದ್ವಿಚಕ್ರ ವಾಹನಗಳು ಹಾಗೂ ಬಾಡಿಗೆದಾರರ ಮೂರು ಸೇರಿದಂತೆ ಒಟ್ಟು ಐದು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ.

ಮನೆಯ ಮಾಲೀಕ ರಂಜಿತ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ನೆರೆಮನೆಯ ವಿನೋದ್ ಕುಮಾರ್ ಹಾಗೂ ಈತನ ಸ್ನೇಹಿತರಾದ ರೋಹಿತ್ ನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

2 ತಿಂಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ವಿನೋದ್ ಕುಮಾರ್ ಹಾಗೂ ರಂಚಿತ್ ನಡುವೆ ಜಗಳವಾಗಿದೆ. ಆಗಿನಿಂದಲೂ ವಿನೋದ್ ದ್ವೇಷ ಸಾಧಿಸುತ್ತಿದ್ದ. ಭಾನುವಾರ ಮುಂಜಾನೆ ತನ್ನ ಸ್ನೇಹಿತರಾದ ಅರುಣ್ ಕುಮಾರ್ ಮತ್ತು ರೋಹಿತ್ ಸಹಾಯ ಪಡೆದು ಲೈಟರ್ ಬಳಸಿ, ರಂಜಿತ್ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com