ನಗರದಲ್ಲಿ ಡೆಂಗ್ಯೂ ಉಲ್ಭಣ: ಬಿಬಿಎಂಪಿಯಿಂದ ಸಮೀಕ್ಷೆ, ಜಾಗೃತಿ ಕಾರ್ಯಕ್ರಮಗಳು ಆರಂಭ

ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆರೋಗ್ಯ ಇಲಾಖೆ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಚುರುಕುಗೊಳಿಸಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆರೋಗ್ಯ ಇಲಾಖೆ ಸಮೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಚುರುಕುಗೊಳಿಸಲು ಮುಂದಾಗಿದೆ.

ಪಾಲಿಕೆ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳ ಮಾಹಿತಿ ಸಂಗ್ರಹಿಸಲು ಸಮೀಕ್ಷೆಗಳ ನಡೆಸುತ್ತಿದ್ದು, ನಗರದಲ್ಲಿ ಡೆಂಗ್ಯೂ ಹರಡದಂತೆ ಮಾಡಲು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾತನಾಡಿ, ಜುಲೈ ತಿಂಗಳಿನಲ್ಲಿ ಮಳೆಯಾದ್ದರಿಂದ ಹಾಗೂ ಹಳ್ಳಗಳಲ್ಲಿ ನೀರು ನಿಂತಿದ್ದರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ, ಜುಲೈ ತಿಂಗಳಿನಿಂದ ನಗರದಲ್ಲಿ 2,246 ಪ್ರಕರಣಗಳು ವರದಿಯಾಗಿದ್ದು, ಜೂನ್ 18 ರಂದು ಸರ್ಜಾಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಜಾನ್ ಜೇಕಬ್ (75) ಎಂಬವವವರು ಡೆಂಗ್ಯೂ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಬಿಬಿಎಂಪಿ ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಅವರ ನಿರ್ದೇಶನದ ಮೇರೆಗೆ ಪಾಲಿಕೆ ವ್ಯಾಪ್ತಿಯಲ್ಲಿನ ಡೆಂಗ್ಯೂ ಪ್ರಕರಣಗಳನ್ನು ಗುರುತಿಸಲು, ರೋಗಿಗಳನ್ನು ಪರೀಕ್ಷಿಸಲು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲು ದುರ್ಬಲ ಪ್ರದೇಶಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಇದಲ್ಲದೆ, ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕ ಶುಶ್ರೂಷಕಿಯರು ಡೆಂಗ್ಯೂ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಡಾ ಬಾಲಸುಂದರ್ ತಿಳಿಸಿದ್ದಾರೆ.

ಡೆಂಗ್ಯೂ ಹರಡುವುದನ್ನು ತಡೆಯಲು ನೀರಿನ ಟ್ಯಾಂಕ್‌ಗಳ ಮುಚ್ಚಿಡುವಂತೆ, ಲಾರ್ವಿಸೈಡ್‌ಗಳನ್ನು ಸಿಂಪಡಿಸುವುದು, ಸ್ವಚ್ಛತೆ ಕಾಪಾಡುವಂತೆ ತಿಳಿಸಲಾಗುತ್ತಿದೆ. ಸರಿಯಾದ ಬಟ್ಟೆಗಳನ್ನು ಧರಿಸುವಂತೆ, ಸೊಳ್ಳೆ ನಿವಾರಕಗಳನ್ನು ಬಳಸುವಂತ ಹಾಗೂ ಹೂವಿನ ಕುಂಡಗಳು ಮತ್ತು ನೀರಿನ ತೊಟ್ಟಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

 ಜ್ವರ, ವಾಂತಿ ಮತ್ತು ದೇಹ ನೋವಿನ ಲಕ್ಷಣಗಳಿರುವವರು ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಡೆಂಗ್ಯೂ ಪಾಸಿಟಿವ್ ಎಂದು ಕಂಡುಬಂದರೆ ವೈದ್ಯರು ಸೂಚಿಸಿದ ಔಷಧಿ ಹಾಗೂ ಆಹಾರ ಕ್ರಮಗಳ ಅನುಸರಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ನಗರದ ಪೂರ್ವ ವಲಯದಲ್ಲಿ ಜುಲೈನಲ್ಲಿ 443 ಮತ್ತು ಆಗಸ್ಟ್ 9 ರವರೆಗೆ 181 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ದಕ್ಷಿಣ ವಲಯದಲ್ಲಿ ಜುಲೈನಲ್ಲಿ 348 ಮತ್ತು ಆಗಸ್ಟ್ 9 ರವರೆಗೆ 107 ಪ್ರಕರಣಗಳು ವರದಿಯಾಗಿದ್ದು, ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com