ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ವ್ಯಕ್ತಿ ದುರ್ಮರಣ, ಇಬ್ಬರು ಸಿಬ್ಬಂದಿಗಳಿಗೆ ಗಾಯ

ನಗರದ ಹೋಟೆಲ್ ವೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡು ವ್ಯಕ್ತಿಯೋರ್ವ ಮೃತಪಟ್ಟು, ಇಬ್ಬರಿಗೆ ಗಾಯವಾಗಿರುವ ಘಟನೆಯೊಂದು ನಡೆದಿದೆ ಡೈರಿ ಸರ್ಕಲ್ ಬಳಿ ಗುರುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಹೋಟೆಲ್ ವೊಂದರಲ್ಲಿ ಸಿಲಿಂಡರ್​ ಸ್ಫೋಟಗೊಂಡು ವ್ಯಕ್ತಿಯೋರ್ವ ಮೃತಪಟ್ಟು, ಇಬ್ಬರಿಗೆ ಗಾಯವಾಗಿರುವ ಘಟನೆಯೊಂದು ನಡೆದಿದೆ ಡೈರಿ ಸರ್ಕಲ್ ಬಳಿ ಗುರುವಾರ ನಡೆದಿದೆ.

 ಡೈರಿ ಸರ್ಕಲ್ ನ ಮಹಾಲಿಂಗೇಶ್ ಬಡಾವಣೆಯ ಪೋಲಮಸ್​​​ ಹೋಟೆಲ್​​ನಲ್ಲಿ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿದೆ.

ಸ್ಫೋಟದ ರಭಸಕ್ಕೆ ಹೋಟೆಲ್ ಶೆಟರ್​​​ ಮುಂದೆ ಮಲಗಿದ್ದ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಹೋಟೆಲ್​ನಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಪೋಲಮಸ್ ಹೋಟೆಲ್​ನಲ್ಲಿದ್ದ ಕಮರ್ಷಿಯಲ್ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಅಗ್ನಿಶಾಮಕ ದಳ ಭೇಟಿ ನೀಡಿದ್ದು, ಹೋಟೆಲ್​​ನಲ್ಲಿ ಬೆಂಕಿ ನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com