ಚೀನಾದಲ್ಲಿ ನ್ಯುಮೋನಿಯಾ ಹಾವಳಿ: ನಗರದಲ್ಲಿ ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂದ ತಜ್ಞರು

ಇನ್‌ಫ್ಲುಯೆಂಜಾ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಎದುರಾಗುತ್ತಿರುವ ಪ್ರಕರಣಗಳು ಚೀನಾದಲ್ಲಿ ಆತಂಕ ಸಷ್ಟಿಸಿದ್ದು, ಈ ನಡುವಲ್ಲೇ ಅಂತಹ ಪ್ರರಿಸ್ಥಿತಿ ನಗರದಲ್ಲಿ ಎದುರಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇನ್‌ಫ್ಲುಯೆಂಜಾ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಎದುರಾಗುತ್ತಿರುವ ಪ್ರಕರಣಗಳು ಚೀನಾದಲ್ಲಿ ಆತಂಕ ಸಷ್ಟಿಸಿದ್ದು, ಈ ನಡುವಲ್ಲೇ ಅಂತಹ ಪ್ರರಿಸ್ಥಿತಿ ರಾಜ್ಯದಲ್ಲಿ ಎದುರಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆಂತರಿಕ ವೈದ್ಯಕೀಯ ವಿಭಾಗದ ಮುಖ್ಯಸ್ಥ ಮತ್ತು ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಅಧ್ಯಕ್ಷ ಡಾ ಕೆ ರವಿ ಮಾತನಾಡಿ, “ನ್ಯುಮೋನಿಯಾ ಪ್ರಕರಣಗಳು, ಇನ್ಫ್ಲುಯೆನ್ಸ ಅಥವಾ ತೀವ್ರವಾದ ಉಸಿರಾಟದ ಸೋಂಕು (SARI) ಪ್ರಕರಣಗಳಲ್ಲಿ ಯಾವುದೇ ಏರಿಕೆಗಳು ಕಂಡು ಬರುತ್ತಿಲ್ಲ. ಕೆಲವು ಆಸ್ಪತ್ರೆಯಲ್ಲಿ ನಿಯಮಿತವಾಗಿ ಇಂತಹ ಪ್ರಕರಣಗಳು ಕಂಡು ಬರುತ್ತಿದೆ. ಇದನ್ನು ಹೊರತುಪಡಿಸಿದರೆ, ಯಾವುದೇ ಆತಂಕಕಾರಿ ಪ್ರವೃತ್ತಿಗಳು ಕಂಡು ಬರುತ್ತಿಲ್ಲ ಎಂದು ಹೇಳಿದ್ದಾರೆ.

ಸೀಸನಲ್ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನುವಿಕೆಯ ಹನಿಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕು ಕಂಡುಬಂದ ವ್ಯಕ್ತಿಯಲ್ಲಿ ಶೀತ, ಒಣ ಕೆಮ್ಮು ಮತ್ತು ಜ್ವರದಿಂದ ಸಾಮಾನ್ಯವಾಗಿ 7-10 ದಿನಗಳವರೆಗೆ ಇರುತ್ತದೆ. ನ್ಯುಮೋನಿಯಾ ಎಲ್ಲಾ ನಾಗರಿಕರ ಮೇಲೆ ಪರಿಣಾಮ ಬೀರುತ್ತದೆಯಾದರೂ ಮಕ್ಕಳನ್ನು ಹೆಚ್ಚು ಬಾಧಿಸುತ್ತದೆ ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಕಂಡುಬರುವ ಮೈಕೋಪ್ಲಾಸ್ಮಾ ನ್ಯುಮೋನಿಯಾ ಪ್ರಕರಣಗಳು ಕೂಡ ಬ್ಯಾಕ್ಟೀರಿಯಾದಿಂದ ಬಂದಿರುವುದಾಗಿದೆ. ಈ ಸೋಂಕುಳ್ಳುವರಲ್ಲಿ ಉಸಿರಾಟ ಸಮಸ್ಯೆ, ಜ್ವರ, ಕೆಮ್ಮನ್ನು ಕಂಡು ಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಗಳು ತೀವ್ರತರ ಪರಿಣಾಮಗಳನ್ನು ಎದುರಿಸುವುದಿಲ್ಲ. ಆಸ್ಪತ್ರೆಗೆ ದಾಖಲಾಗುವುದು ಕೂಡ ಅಪರೂಪವಾಗಿರುತ್ತದೆ. ಈ ಸೋಂಕಿಗೊಳಗಾದವರು ವೈರಲ್ ನ್ಯುಮೋನಿಯಾಕ್ಕಿಂತಲೂ ಚೇತರಿಕೆಯ ಸಮಯ ಹೆಚ್ಚಾಗಿ ಬೇಕಾಗುತ್ತದೆ ಎಂದಿದ್ದಾರೆ.

ಕರ್ನಾಟಕದಲ್ಲಿ 2023 ರಲ್ಲಿ (ನವೆಂಬರ್ 26 ರವರೆಗೆ) 9,039 SARI ಪ್ರಕರಣಗಳು ಮತ್ತು 3,417 ಇನ್ಫ್ಲುಯೆನ್ಸ ಪ್ರಕರಣಗಳು ವರದಿಯಾಗಿವೆ, ಇವೆರಡೂ ಇಳಿಮುಖವಾಗುತ್ತಿರುವ ಪ್ರವೃತ್ತಿಗಳು ಕಂಡು ಬರುತ್ತಿವೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ಡಾ ರಜತ್ ಆತ್ರೇಯ ಅವರು ಮಾತನಾಡಿ, ಅಡೆನೊವೈರಸ್, ಉಸಿರಾಟದ ಸಿಂಕ್ಟಿಯಲ್ ವೈರಸ್ (ಆರ್‌ಎಸ್‌ವಿ) ಅಥವಾ ಫ್ಲೂ ರೀತಿಯ ಪ್ರಕರಣಗಳು ಕಳೆದ 6-8 ತಿಂಗಳುಗಳಿಂದ ಹೆಚ್ಚಾಗುತ್ತಿರುವುದು ಕಂಡು ಬಂದಿದೆ, ಆದರೆ, ಚೀನಾದಲ್ಲಿ ಎದುರಾಗಿರುವ ಪರಿಸ್ಥಿತಿ ಇಲ್ಲಿ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.

ಆಸ್ಪತ್ರೆಗಳಲ್ಲಿ SARI ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಆರೋಗ್ಯ ಇಲಾಖೆಯು ಯಾವುದೇ ಸೋಂಕುಗಳಿಂದ ಎದುರಾಗುವ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com