ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಇಂಟರ್​ಪೋಲ್ ನೆರವು ಪಡೆಯಲು ಪೊಲೀಸರು ಮುಂದು!

ಬೆಂಗಳೂರು ಸುತ್ತಮುತ್ತಲಿನ 48 ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ನಗರದ ಪೊಲೀಸರು ಸಿಬಿಐನ ಇಂಟರ್‌ಪೋಲ್ ವಿಭಾಗದ ನೆರವು ಪಡೆಯಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಸುತ್ತಮುತ್ತಲಿನ 48 ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ನಗರದ ಪೊಲೀಸರು ಸಿಬಿಐನ ಇಂಟರ್‌ಪೋಲ್ ವಿಭಾಗದ ನೆರವು ಪಡೆಯಲು ನಿರ್ಧರಿಸಿದೆ.

ಬೆದರಿಕೆ ಇಮೇಲ್‌ಗಳನ್ನು ವಿದೇಶದಿಂದ ಕಳುಹಿಸಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ತಾಂತ್ರಿಕ ನೆರವು ಕೋರಿ ಸಿಬಿಐನ ಇಂಟರ್‌ಪೋಲ್ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.

ಬೆದರಿಕೆ ಮೇಲ್ ಗಳನ್ನು ಕಳುಹಿಸಿದ್ದವರು ಯಾರು, ಎಲ್ಲಿಂದ ಕಳುಹಿಸಿದ್ದಾರೆಂಬುದರ ಪತ್ತೆ ಮಾಡಲು ಪ್ರಯತ್ನಗಳ ನಡೆಸಲಾಗುತ್ತಿದೆ. ಈಗಾಗಲೇ ಇಂಟರ್‌ಪೋಲ್ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಅವರೊಂದಿಗೆ ಸಂಪರ್ಕದಲ್ಲಿರಲಾಗಿದೆ. ತನಿಖೆ ಕುರಿತು ವಿಸ್ತೃತ ಸಭೆಯನ್ನು ಸೋಮವಾರ ನಡೆಸಲಾಗುವುದು. ಇದೇ ವೇಲೆ ಕಳೆದ ವರ್ಷ ದಾಖಲಾಗಿರುವ ಕೆಲವು ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದೇಶಗಳಲ್ಲಿಯೂ ಇಂತಹ ಬೆದರಿಕೆ ಪತ್ರಗಳು ಪತ್ತೆಯಾಗಿವೆ. ಆದರೆ, ಇಲ್ಲಿನ ಶಾಲೆಗಳಿಗೆ ಬಂದಿರುವ ಬೆದರಿಕೆ ಇಮೇಲ್, ವಿದೇಶದಲ್ಲಿ ಬಂದಿರುವ ಬೆದರಿಕೆಗಳ ಇಮೇಲ್ ಗಳ ಐಡಿಗಳಲ್ಲಿ ವ್ಯತ್ಯಾಸವಿದೆ. ಆರೋಪಿಗಳು ವಿಪಿಎನ್ ಹಾಗೂ ಪ್ರಾಕ್ಸಿ ಸರ್ವರ್ ಗಳನ್ನು ಬಳಸಿದ್ದು, ಮೂಲ ಪತ್ತೆ ಮಾಡಲು ತಾಂತ್ರಿಕ ಸವಾಲುಗಳು ಎದುರಾಗಿವೆ. ಅಗತ್ಯಬಿದ್ದರೆ ಮೂಲ ಪತ್ತೆಗೆ ವಿದೇಶಗಳನ್ನೂ ಸಂಪರ್ಕಿಸಲಾಗುವುದು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಹೇಳಿದ್ದಾರೆ.

ಡಿಸೆಂಬರ್ 1 ರಂದು ಬೆಂಗಳೂರಿನ 48 ಶಾಲೆಗಳು ಮತ್ತು ನೆರೆಯ ತಾಲೂಕುಗಳ 20 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಪೊಲೀಸರು ತಪಾಸಣೆ ನಡೆಸಿದಾಗ ಯಾವುದೇ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಆರೋಪಿಗಳು beeble.com ನ ವಿವಿಧ ಇಮೇಲ್ ಐಡಿಗಳಿಂದ ಬೆದರಿಕೆ ರವಾನಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com