ಸುರಕ್ಷಿತ ಪಾದಚಾರಿ ಮಾರ್ಗ: ಬಿಬಿಎಂಪಿಯಿಂದ 2 ದಿನಗಳ 'ನಮ್ಮ ರಸ್ತೆ' ಎಕ್ಸಿಬಿಷನ್

ನಗರದ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಉದ್ದೇಶದಿಂದ ಬಿಬಿಎಂಪಿ ಎರಡು ದಿನಗಳ 'ನಮ್ಮ ರಸ್ತೆ' ಎಕ್ಸಿಬಿಷನ್' ನಡೆಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸಲು ಉದ್ದೇಶದಿಂದ ಬಿಬಿಎಂಪಿ ಎರಡು ದಿನಗಳ 'ನಮ್ಮ ರಸ್ತೆ' ಎಕ್ಸಿಬಿಷನ್' ನಡೆಸುತ್ತಿದೆ.

ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಪಾದಚಾರಿ ಮಾರ್ಗಗಳನ್ನು ಸುರಕ್ಷಿತವಾಗಿಸುವುದು ಇದರ ಉದ್ದೇಶವಾಗಿದೆ. ನಮ್ಮ ರಸ್ತೆ ಎಕ್ಸಿಬಿಷನ್'ನಲ್ಲಿ ಈ ಕುರಿತು ಚರ್ಚೆಗಳನ್ನು ನಡೆಸಲಾಗುತ್ತದೆ. ಇಲ್ಲಿ ಚರ್ಚಿಸಿ ಉತ್ತಮ ಸಲಹೆ ಹಾಗೂ ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

"ಪಾಲಿಕೆಯು ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) ಮತ್ತು ಇನ್ನೊಂದು ಖಾಸಗಿ ಏಜೆನ್ಸಿಯೊಂದಿಗೆ ಶುಕ್ರವಾರ ಮತ್ತು ಶನಿವಾರ ಬಿಬಿಎಂಪಿ ಪ್ರಧಾನ ಕಚೇರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ವಿಡಿಯೋ ಸಂದೇಶವನ್ನು ಹಂಚಿಕೊಂಡ ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿಎಸ್ ಪ್ರಹಲ್ಲಾದ್ ಅವರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸುರಕ್ಷಿತ ಪಾದಚಾರಿ ಮಾರ್ಗಳ ಯೋಜನೆಗಳ ಕುರಿತು ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು.

ವಾಹನ-ಬಳಕೆದಾರರಿಗಷ್ಟೇ ಸುರಕ್ಷಿತ ರಸ್ತೆಗಳನ್ನು ಮಾಡುವುದಲ್ಲ, ಪಾದಚಾರಿಗಳಿಗೂ ಮಾಡಬೇಕಿದೆ. ಆದ್ದರಿಂದ ಬೆಂಗಳೂರಿನ ಸುರಕ್ಷಿತ ಪಾದಚಾರಿ ಕುರಿತು ಎಕ್ಸಿಬಿಷನ್ ನಡೆಸಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com