ಟಿಕೆಟ್ ರಹಿತ ಪ್ರಯಾಣ: 7 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಬಿಎಂಟಿಸಿ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಳೆದ ತಿಂಗಳು ವಿವಿಧ ಉಲ್ಲಂಘನೆಗಳಿಗಾಗಿ 3,767 ಪ್ರಯಾಣಿಕರಿಗೆ ದಂಡ ವಿಧಿಸಿದೆ ಮತ್ತು 7 ಲಕ್ಷ ರೂ.ಗೂ ಹೆಚ್ಚು ದಂಡವನ್ನು ಸಂಗ್ರಹಿಸಿದೆ ಎಂದು ಮಂಗಳವಾರ ತಿಳಿಸಿದೆ.
ಪ್ರಯಾಣಿಕರ ಟಿಕೆಟ್ ರಹಿತ ಪ್ರಯಾಣವನ್ನು ಪತ್ತೆಹಚ್ಚಲು ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಬಸ್‌ಗಳ ತಪಾಸಣೆಯನ್ನು ತನ್ನ ಸಿಬ್ಬಂದಿ ತೀವ್ರಗೊಳಿಸಿದ್ದಾರೆ ಎಂದು ಬಿಟಿಎಂಸಿ ಹೇಳಿಕೆಯಲ್ಲಿ ತಿಳಿಸಿದೆ.
ನವೆಂಬರ್‌ನಲ್ಲಿ, ಸಿಬ್ಬಂದಿ 16,421 ಟ್ರಿಪ್‌ಗಳನ್ನು ಪರಿಶೀಲಿಸಿದ್ದು, 3,329 ಟಿಕೆಟ್‌ರಹಿತ ಪ್ರಯಾಣಿಕರನ್ನು ಗುರುತಿಸಿದ್ದಾರೆ. ಅವರಿಂದ 6,68,610 ರೂ. ದಂಡ ವಸೂಲಿ ಮಾಡಿದ್ದಾರೆ ಮತ್ತು ಕರ್ತವ್ಯಲೋಪಕ್ಕಾಗಿ ಕಂಡಕ್ಟರ್‌ಗಳ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಬಿಎಂಟಿಸಿಯ ತಪಾಸಣಾ ಸಿಬ್ಬಂದಿ ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಸೀಟುಗಳನ್ನು ಆಕ್ರಮಿಸಿಕೊಂಡ 438 ಪುರುಷ ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ ಮತ್ತು ಕರ್ನಾಟಕ ಮೋಟಾರು ವಾಹನಗಳ ನಿಯಮಗಳಿಗೆ ಅನುಗುಣವಾಗಿ 43,800 ರೂ. ದಂಡ ಸಂಗ್ರಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ