ರಾಜ್ಯ

ಕಲಬುರಗಿಯಲ್ಲಿ ಹಿಟ್ ಆ್ಯಂಡ್​ ರನ್ ಪ್ರಕರಣ: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ಎಂಎಲ್​ಸಿ ತಾಯಿ ಸಾವು

ಕಲಬುರಗಿಯಲ್ಲಿ ಹಿಟ್ ಆ್ಯಂಡ್​ ರನ್ ಪ್ರಕರಣ: ಬೈಕ್ ಡಿಕ್ಕಿಯಾಗಿ ಕಾಂಗ್ರೆಸ್ ಎಂಎಲ್​ಸಿ ತಾಯಿ ಸಾವು
ಸುಮಿತ್ರಾಬಾಯಿ
Published On :

ಕಲಬುರಗಿ: ಕಲಬುರಗಿಯ ಸೇಡಂ ರಿಂಗ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ್ ಅರಳಿ ಅವರ ತಾಯಿ ಬಲಿಯಾಗಿದ್ದಾರೆ. 

ಇಂದು ಸೇಡಂ ರಿಂಗ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಬಳಿ ಈ ಅಪಘಾತ ಸಂಭವಿಸಿದ್ದು, ಅರವಿಂದ ಅರಳಿ ಅವರ ತಾಯಿ ಸುಮಿತ್ರಾಬಾಯಿ ಅವರು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. 

ಬೈಕ್​ ಗುದ್ದಿದ ರಭಸಕ್ಕೆ ಸುಮೀತ್ರಾಬಾಯಿ(75) ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸುಮಿತ್ರಾಬಾಯಿ ಅವರು ಬೀದರ್ ನಿಂದ ಕಲಬುರಗಿಯ ಬಿದ್ದಾಪುರ ಕಾಲೋನಿಯಲ್ಲಿರುವ ಅಳಿಯನ ಮನೆಗೆ ಆಗಮಿಸಿದ್ದ ವೇಳೆ ಅಪಘಾತ ನಡೆದಿದೆ. 

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್‌ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.