ಬೆಂಗಳೂರು: 8 ಗಂಟೆ ತಡವಾಗಿ ಬಂದ ಇಂಡಿಗೋ ವಿಮಾನ; ಕಾದು ಕಾದು ಪ್ರಯಾಣಿಕರು ಹೈರಾಣ!

ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ತಡವಾಗಿ ಬಂದಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕಾದು ಹೈರಾಣಾದ ಘಟನೆ ಗುರುವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ತಡವಾಗಿ ಬಂದಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕಾದು ಹೈರಾಣಾದ ಘಟನೆ ಗುರುವಾರ ನಡೆದಿದೆ.

ಬಂದಿದ್ದಷ್ಟೇ ಅಲ್ಲದೆ, ವಿಮಾನ ಹತ್ತಿದ ಬಳಿಕವೂ ಪ್ರಯಾಣಿಕರು 90 ನಿಮಿಷಗಳ ಕಾದು ಕುಳಿತಿದ್ದು, ಈ ಬೆಳವಣಿಗೆಗೆ ವಿಮಾನಯಾನ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

6E 6622 ವಿಮಾನ ಬುಧವಾರ ದೆಹಲಿಯಿಂದ ರಾತ್ರಿ 7.10 ಕ್ಕೆ ಟೇಕ್ ಆಫ್ ಆಗಿ ರಾತ್ರಿ 9.50 ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ, ಗುರುವಾರ ಬೆಳಗಿನ ಜಾವ 2.57ಕ್ಕೆ ಟೇಕಾಫ್ ಆಗಿ, 5.45ಕ್ಕೆ ಬೆಂಗಳೂರಿಗೆ ಬಂದಿತ್ತು.

ಎಂಎನ್'ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹೆಬ್ಬಾಳ ನಿವಾಸಿ ವಂದನಾ ಮಾಥರೂ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು.

ವಿಮಾನದಲ್ಲಿ ತಾವು ಎದುರಿಸಿದ ಪರಿಸ್ಥಿತಿಯನ್ನು ವಂದನಾ ಅವರು ವಿವರಿಸಿದ್ದಾರೆ. ವಿಮಾನವು ರಾತ್ರಿ 8.15ಕ್ಕೆ ಹೊರಡುವ ಕೆಲವು ಗಂಟೆಗಳ ಮೊದಲು ನಮಗೆ ಸಂದೇಶ ಬಂದಿತ್ತು. ಆದರೆ, 8 ಗಂಟೆಯಾದರೂ ವಿಮಾನದೊಳಗೆ ಹೋಗಿರಲಿಲ್ಲ. ಕೌಂಟರ್ ನಲ್ಲಿ ಪರಿಶೀಲಿಸಿದಾಗ, ಇನ್ನು ಕೆಲವೇ ಸಮಯಗಲ್ಲಿ ವಿಮಾನ ಬರಲಿದೆ ಎಂದು ಹೇಳಿದ್ದರು. ರಾತ್ರಿ 9.30ಕ್ಕೆ ಮತ್ತೆ ಪರಿಶೀಲಿಸಿದಾಗ ವಿಮಾನ ಜೈಪುರಕ್ಕೆ ಹೊರಟಿರುವುದಾಗಿ ತಿಳಿಸಲಾಯಿತು, 100 ಮಂದಿಯನ್ನು ನಿರ್ವಹಿಸಲು ಕೌಂಟರ್ ನಲ್ಲಿ ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮಾತ್ರವೇ ಇದ್ದರು. ಪದೇ ಪದೇ ಇನ್ನು ಕೆಲವೇ ನಿಮಿಷಗಳಲ್ಲಿ ಎಂದು ಹೇಳುತ್ತಲೇ ಇದ್ದರು. ಆದರೆ. ಮಧ್ಯರಾತ್ರಿ 2.57ಕ್ಕೆ ವಿಮಾನ ಟೇಕ್ ಆಫ್ ಆಗಿತ್ತು.

ಕೆಲ ಕಾರ್ಯಾಚರಣೆಯ ಕಾರಣಗಳಿಂದಾಗಿ ಡಿ.27ರಂದು ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ 6E 6622 ಇಂಡಿಗೋ ವಿಮಾನ ತಡವಾಗಿತ್ತು. ವಿಮಾನ ವಿಳಂಬವಾಗಿ ಬರುವಿಕೆಯನ್ನು ಪ್ರಯಾಣಿಕರಿಗೆ ತಿಳಿಸಲಾಗಿತ್ತು. ಉಪಾಹಾರಗಳನ್ನು ನೀಡಲಾಗಿತ್ತು. ಪ್ರಯಾಣಿಕರಿಗಾದ ಅನಾನುಕೂಲತೆ ಬಗ್ಗೆ ವಿಷಾದಿಸುತ್ತೇವೆಂದು ಇಂಡಿಗೋ ವಿಮಾನದ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com