ದೋಷಪೂರಿತ ನಂಬರ್ ಪ್ಲೇಟ್‍: 1.12 ಕೋಟಿ ರೂ. ದಂಡ ಸಂಗ್ರಹಿಸಿದ ಪೊಲೀಸರು

ಅನಧಿಕೃತ ಹೆಸರುಗಳು, ಲಾಂಛನಗಳು, ಸಂಘಗಳ ಹೆಸರುಗಳು ಮತ್ತು ಇತರೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡಿದ್ದ ವಾಹನಗಳ ವಿರುದ್ಧ ಕರ್ನಾಟಕ ಸಾರಿಗೆ ಇಲಾಖೆಯು ಡಿಸೆಂಬರ್ 2019 ರಿಂದ ಡಿಸೆಂಬರ್ 2022 ರವರೆಗೆ ನಡೆಸಿರುವ ಕಾರ್ಯಾಚರಣೆಯಲ್ಲಿ ವಾಹನ ಮಾಲೀಕರಿಂದ 1.12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನಧಿಕೃತ ಹೆಸರುಗಳು, ಲಾಂಛನಗಳು, ಸಂಘಗಳ ಹೆಸರುಗಳು ಮತ್ತು ಇತರೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡಿದ್ದ ವಾಹನಗಳ ವಿರುದ್ಧ ಕರ್ನಾಟಕ ಸಾರಿಗೆ ಇಲಾಖೆಯು ಡಿಸೆಂಬರ್ 2019 ರಿಂದ ಡಿಸೆಂಬರ್ 2022 ರವರೆಗೆ ನಡೆಸಿರುವ ಕಾರ್ಯಾಚರಣೆಯಲ್ಲಿ ವಾಹನ ಮಾಲೀಕರಿಂದ 1.12 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ (ಜಾರಿ) ಮಲ್ಲಿಕಾರ್ಜುನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸೆಕ್ಷನ್ 3, 4 ಮತ್ತು 5 (ಅಸಮರ್ಪಕ ಬಳಕೆ ತಡೆಗಟ್ಟುವಿಕೆ) ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ 50, 51 ನಿಯಮಗಳ ಪ್ರಕಾರ, 1989, ವಾಹನಗಳ ಮೇಲೆ ಅನಧಿಕೃತ ಹೆಸರುಗಳು, ಲಾಂಛನಗಳು ಮತ್ತು ಚಿಹ್ನೆಗಳ ಪ್ರದರ್ಶನವು ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆಯು ಡಿಸೆಂಬರ್ 2019 ಮತ್ತು ಡಿಸೆಂಬರ್ 2022 ರ ನಡುವೆ 6.07 ಲಕ್ಷ ವಾಹನಗಳನ್ನು ತಪಾಸಣೆ ಮಾಡಿದ್ದು, ಇವುಗಳಲ್ಲಿ 14,620 ವಾಹನಗಳು ಕಾನೂನನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಈ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಧಿಕಾರಿಗಳು ನಿಯಮ ಉಲ್ಲಂಘಿಸಿದವರಿಂದ 1.12 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಈ ವಾಹನಗಳಲ್ಲಿ ರಾಜ್ಯದ ಲಾಂಛನ, ರಾಜ್ಯಾಧ್ಯಕ್ಷ, ಕಾರ್ಯದರ್ಶಿ ಹುದ್ದೆಗಳ ಹೆಸರು, ಸಂಘಗಳ ಹೆಸರು ಮತ್ತಿತರ ಕಾನೂನು ಉಲ್ಲಂಘಿಸಿರುವುದು ಕಂಡುಬಂದಿದೆ.

“ನಾವು ಸಾರ್ವಜನಿಕರಲ್ಲಿ ತಮ್ಮ ನಂಬರ್ ಪ್ಲೇಟ್‌ಗಳು ಮತ್ತು ವಾಹನಗಳ ಮೇಲೆ ಅನಧಿಕೃತ ಬರಹಗಳನ್ನು ಹಾಕದಿರುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ವಿಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಅಧಿಕಾರಿಗಳು ಕೂಡ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಎಲ್ಲಾ ವಿಭಾಗಗಳ ಪೈಕಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಉಲ್ಲಂಘನೆಗಳು ಕಂಡು ಬಂದಿದೆ. ನಗರದಲ್ಲಿ 4,765 ಪ್ರಕರಣಗಳು ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಬೆಳಗಾವಿಯಲ್ಲಿ 3,633 ಮತ್ತು ಶಿವಮೊಗ್ಗದಲ್ಲಿ 2,515 ಪ್ರಕರಣಗಳು ಕಂಡು ಬಂದಿದೆ. ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ 1.69 ಲಕ್ಷ ವಾಹನಗಳನ್ನು ತಪಾಸಣೆ ನಡೆಸಿದ್ದರೂ, ಕೇವಲ 1,139 ಮಾತ್ರ ಕಾನೂನು ಉಲ್ಲಂಘನೆ ಮಾಡಿರುವ ಪ್ರಕರಣಗಳು ಕಂಡುಬಂದಿದೆ ಎಂದಿದ್ದಾರೆ.

ಇದೇ ವೇಳೆ ದಂಡ ಪಾವತಿಸುವುದನ್ನು ತಪ್ಪಿಸಲು ದೋಷಪೂರಿತ ನಂಬರ್ ಪ್ಲೇಟ್ ಹಾಕಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ಈ ಕುರಿತ ಕಾರ್ಯಾಚರಣೆ ಇದೇ ರೀತಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com