ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಏರೋ ಇಂಡಿಯಾ 2023: 1.40 ಕೋಟಿ ರೂ. ವೆಚ್ಚದಲ್ಲಿ ನಾಗರೀಕ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮುಂದು

ಏರೋ ಇಂಡಿಯಾ 2023 ಫೆಬ್ರವರಿ 13 ರಂದು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ರೂ.1.40 ಕೋಟಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಕಲ್ಪಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿದೆ.
Published on

ಬೆಂಗಳೂರು: ಏರೋ ಇಂಡಿಯಾ 2023 ಫೆಬ್ರವರಿ 13 ರಂದು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ರೂ.1.40 ಕೋಟಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳ ಕಲ್ಪಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿದೆ.

ಸಿದ್ಧತೆಯ ಭಾಗವಾಗಿ ಬಿಬಿಎಂಪಿಯು ನೀರಿನ ಟ್ಯಾಂಕರ್‌ಗಳು, ತಾತ್ಕಾಲಿಕ ಶೌಚಾಲಯಗಳು, ಆಟೋ ಟಿಪ್ಪರ್ ಕಾಂಪ್ಯಾಕ್ಟರ್‌ಗಳು, ಕಸದ ತೊಟ್ಟಿಗಳು ಮತ್ತು ಸೈನ್‌ಬೋರ್ಡ್‌ಗಳ ಸ್ಥಾಪನೆಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ ಟೆಂಡರ್‌ಗಳನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.

ಬಿಬಿಎಂಪಿ ಎಂಜಿನಿಯರ್‌ಗಳು ಮಾಹಿತಿ ನೀಡಿ, ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾಕ್ಕಾಗಿ 1.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ, ತಾತ್ಕಾಲಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು, ಸಾರ್ವಜನಿಕ ಪಾರ್ಕಿಂಗ್ ಮತ್ತು ಮುಂಗಡ ಪಾರ್ಕಿಂಗ್‌ ವ್ಯವಸ್ಥೆಗಳ ಕಲ್ಪಿಸಲಾಗುತ್ತಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯಾಗಿದ್ದು, ಇದಕ್ಕಾಗಿ ಸಕಲ ಸಿದ್ಥತೆಗಳ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನೀರು, ನೈರ್ಮಲ್ಯ, ಕಸ ನಿರ್ವಹಣೆ ಮತ್ತು ಸೂಚನಾ ಫಲಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಹೇಳಿದ್ದಾರೆ.

ದಾಖಲೆಗಳ ಪ್ರಕಾರ, ಮೆಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿರುವೋ 500 ಮೊಬೈಲ್ ಶೌಚಾಲಯಗಳು, ನೀರಿನ ಸಂಪರ್ಕಗಳು ಮತ್ತು ಒಳಚರಂಡಿಗಾಗಿ ಪಿವಿಸಿ ಪೈಪ್‌ಗಳು, ಪಾಶ್ಚಾತ್ಯ ಶೈಲಿಯ ಕಮೋಡ್, ಫ್ಲಶ್ ಟ್ಯಾಂಕ್, 25 ಮೀಟರ್ ಎತ್ತರದಲ್ಲಿ ಓವರ್‌ಹೆಡ್ ವಾಟರ್ ಟ್ಯಾಂಕರ್‌ಗಳು, 36 ಆಟೋ ಟಿಪ್ಪರ್‌ಗಳು, ಆರು ಕಾಂಪ್ಯಾಕ್ಟರ್‌ಗಳು, 100 ಲೀಟರ್ ಸಾಮರ್ಥ್ಯದ 150 ಹಸಿರು ಮತ್ತು ನೀಲಿ ಕಸದ ತೊಟ್ಟಿಗಳು, 200 ಸೈನ್‌ಬೋರ್ಡ್‌ಗಳು ಮತ್ತು 180 ನೀರಿನ ಟ್ಯಾಂಕರ್‌ಗಳನ್ನು ಏರೋ ಇಂಡಿಯಾಗಾಗಿ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com