ಬಿಲ್ಡರ್ ಗಳಿಂದ ನಿಯಮ ಉಲ್ಲಂಘನೆ: ಸ್ವಾಧೀನಪತ್ರ ಕಳೆದುಕೊಂಡ 160 ಫ್ಲ್ಯಾಟ್ ಮಾಲೀಕರು!

ಬಿಲ್ಡರ್ ಗಳು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಐಷಾರಾಮಿ ವಸತಿ ಯೋಜನೆಯಡಿಯಲ್ಲಿ ಯಹಲಂಕದ 160 ಫ್ಲಾಟ್‌ಗಳಿಗೆ ನೀಡಲಾಗಿದ್ದ ಆಕ್ಯುಪೆನ್ಸಿ (ಸ್ವಾಧೀನಪತ್ರ) ಪ್ರಮಾಣಪತ್ರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಿಂಪಡೆದುಕೊಂಡಿದೆ.
ಕಾಸಾ ಗ್ರಾಂಡೆ ಲೊರೆಂಜಾ ಅಪಾರ್ಟ್ ಮೆಂಟ್.
ಕಾಸಾ ಗ್ರಾಂಡೆ ಲೊರೆಂಜಾ ಅಪಾರ್ಟ್ ಮೆಂಟ್.
Updated on

ಬೆಂಗಳೂರು: ಬಿಲ್ಡರ್ ಗಳು ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಐಷಾರಾಮಿ ವಸತಿ ಯೋಜನೆಯಡಿಯಲ್ಲಿ ಯಹಲಂಕದ 160 ಫ್ಲಾಟ್‌ಗಳಿಗೆ ನೀಡಲಾಗಿದ್ದ ಆಕ್ಯುಪೆನ್ಸಿ (ಸ್ವಾಧೀನಪತ್ರ) ಪ್ರಮಾಣಪತ್ರವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಿಂಪಡೆದುಕೊಂಡಿದೆ.

ಈ ಕುರಿತು ಜುಲೈ 1 ರಂದು ಬಿಬಿಎಂಪಿ (ಟೌನ್ ಪ್ಲಾನಿಂಗ್) ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆಂದು ತಿಳಿದುಬಂದಿದೆ.

ಬೆಳ್ಳಹಳ್ಳಿಯ ಕೋಗಿಲು ಮುಖ್ಯರಸ್ತೆಯಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಮನೆಗಳನ್ನು ಒಳಗೊಂಡಿರುವ 'ಕಾಸಾ ಗ್ರಾಂಡೆ ಲೊರೆಂಜಾ' ಐಷಾರಾಮಿ ಅಪಾರ್ಟ್‌ಮೆಂಟ್'ನಲ್ಲಿ ಸುಮಾರು 100ಕ್ಕೂ ಕುಟುಂಬಗಳು ವಾಸವಿದೆ.

ಈ ಫ್ಲ್ಯಾಟ್ ಗಳ ಮಾಲೀಕರಲ್ಲಿ ಒಬ್ಬರಾಗಿರುವ ಶಶಿಧರ್ ಎಂಬುವವರು ಈ ಹಿಂದೆ ಬಿಲ್ಡರ್ ಗಳು ನಿಯಮಗಳ ಉಲ್ಲಂಘನೆ ಮಾಡಿದ್ದಾರೆಂದು ಬಿಬಿಎಂಪಿಗೆ ದೂರು ನೀಡಿದ್ದರು.

ಕಾಸಾ ಗ್ರಾಂಡೆ ಗಾರ್ಡನ್ ಸಿಟಿ ಬಿಲ್ಡರ್ ಪ್ರೈವೇಟ್ ಲಿಮಿಟೆಡ್'ನ ಬಿಲ್ಡರ್ ಗಳು ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಕಳೆದ ವರ್ಷ ದೂರು ನೀಡಿದ್ದರು.

2019ರಲ್ಲಿ ರೂ.1.3 ಕೋಟಿ ನೀಡಿ 2BHK ಮತ್ತು 3BHKಯ 2 ಫ್ಲ್ಯಾಟ್ ಗಳನ್ನು ಖರೀದಿ ಮಾಡಿದ್ದೆ. 2017-2018 ರಲ್ಲಿ ಪ್ರಾರಂಭವಾದ ಕಾಮಗಾರಿ ಕೆಲಸಗಳು ಅಕ್ಟೋಬರ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ, 2022 ಜನವರಿ 28 ರಂದು ಪೂರ್ಣಗೊಂಡಿತ್ತು. ಇದಕ್ಕೆ ಬಿಬಿಎಂಟಿಯಿಂದ ಸ್ವಾಧೀನಪತ್ರ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಆದರೆ, ಕಟ್ಟಡ ನಿರ್ಮಾಣ ಕೆಲಸದಲ್ಲಿ ಸಾಕಷ್ಟು ಉಲ್ಲಂಘನೆಗಳನ್ನು ಮಾಡಲಾಗಿದೆ. ಕಟ್ಟಡ ನೆಲಮಹಡಿಯಲ್ಲಿರುವ ಪ್ರದೇಶವನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಅಗ್ನಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿಲ್ಲ. ಸೋಲಾರ್ ವಾಟರ್ ಹೀಟರ್ ಗಳ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‌ಒಸಿ ಪಡೆದಿಲ್ಲ. ಒಳಚರಂಡಿ ಸಂಸ್ಕರಣಾ ಘಟಕಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಮಳೆನೀರು ಕೊಯ್ಲು ವ್ಯವಸ್ಥೆಗಳನ್ನೇ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಸ್ಥಳದಲ್ಲಿ ವಾಸವಿರುವುದು ನಿಜಕ್ಕೂ ಅಪಾಯಕಾರಿಯಾಗಿದೆ. ಹೀಗಾಗಿ ಬಿಬಿಎಂಪಿಗೆ ದೂರು ನೀಡಿದ್ದೆ ಎಂದು ಶಶಿಧರ್ ಅವರು ಹೇಳಿದ್ದಾರೆ.

ನಿಯಮ ಉಲ್ಲಂಘನೆ ಹಾಗೂ ದೂರು ಹಿನ್ನೆಲೆಯಲ್ಲಿ ಬಿಲ್ಡರ್ ಗಳಿಗೆ ಬಿಬಿಎಂಪಿ ಜನವರಿ ತಿಂಗಳಿನಲ್ಲಿ ನೋಟಿಸ್ ಜಾರಿ ಮಾಡಿತ್ತು. ಆದರೆ, ಬಿಲ್ಟರ್ ಗಳಿಂದ ಸಮಾಧಾನಕರ ಪ್ರತಿಕ್ರಿಯೆಗಳು ಬಂದಿಲ್ಲ. ಹೀಗಾಗಿ ಫ್ಲ್ಯಾಟ್ ಗಳಿಗೆ ನೀಡಲಾಗಿದ್ದ ಸ್ವಾಧೀನಪತ್ರಗಳನ್ನು ಹಿಂಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com