ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳಿಗೆ ನಾಯಿ ಕಡಿತ

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗತೊಡಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳಿಗೆ ಸಾಕುನಾಯಿಗಳು ಕಚ್ಚಿರುವ ಘಟನೆ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗತೊಡಗಿದೆ. ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಕ್ಕಳಿಗೆ ಸಾಕುನಾಯಿಗಳು ಕಚ್ಚಿರುವ ಘಟನೆ ವರದಿಯಾಗಿದೆ.

ಕಾಡುಗೋಡಿಯಲ್ಲಿ 9 ವರ್ಷದ ಬಾಲಕಿಗೆ ಹಾಗೂ ಜಯನಗರದಲ್ಲಿ 11 ವರ್ಷಗ ಬಾಲಕನಿಗೆ ನಾಯಿ ಕಚ್ಚಿರುವ ಘಟನೆ ವರದಿಯಾಗಿದ್ದು, ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಶಾಪಿಂಗ್ ಗೆಂದು ತನ್ನ ಪೋಷಕರೊಂದಿಗೆ ಬಾಲಕ ಜಯನಗರ ಕಾಂಪ್ಲೆಕ್ಸ್ ಗೆ ಹೋಗಿದ್ದ. ಈ ವೇಳೆ ಕಾಂಪ್ಲೆಕ್ಸ್ ನಲ್ಲಿರುವ ಲಕ್ಷ್ಮೀ ನರಸಿಂಹ ಬಟ್ಟೆ ಅಂಗಡಿಯ ಮಾಲೀಕ ಸಾಕಿದ್ದ ನಾಯಿ ಬಾಲಕನಿಗೆ ಕಚ್ಚಿದೆ.

ಮಾಲೀಕ ಕುಡಿದ ಅಮಲಿನಲ್ಲಿದ್ದು, ನಾಯಿಯನ್ನು ಹೊಡೆದಿರಬೇಕು. ಹೀಗಾಗಿ ಕೋಪಗೊಂಡು ಅದು ಕಚ್ಚಿದೆ ಎಂದು ವಾದಿಸಿದ್ದಾನೆ. ಮಾತಿನ ಚಕಮಕಿ ಬಳಿಕ ಬಾಲಕನ ತಾಯಿ ಸೀಮಾ ದಿನೇಶ್ ಪತ್ತರ್ ಅವರು, ಮಗನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಈ ಸಂಬಂಧ ಮಹೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ವೈಟ್‌ಫೀಲ್ಡ್ ಬಳಿಯ ಬಿಡಿಎ ಅಪಾರ್ಟ್‌ಮೆಂಟ್‌ನ ಲಿಫ್ಟ್‌ನಲ್ಲಿ ಸುಧೀರ್ ಮಾಲೀಕತ್ವದ ನಾಯಿಯೊಂದು ಬಾಲಕಿಯೊಬ್ಬಳಿಗೆ ಕಚ್ಚಿ ಗಾಯಗೊಳಿಸಿದೆ.

ಸಂಜೆ 7.30 ರ ಸುಮಾರಿಗೆ ಬಾಲಕಿ 11 ನೇ ಮಹಡಿಯಲ್ಲಿರುವ ತನ್ನ ಫ್ಲಾಟ್‌ಗೆ ಲಿಫ್ಟ್ ನಲ್ಲಿ ಹೋಗುತ್ತಿದ್ದಳು. ಇದೇ ಲಿಫ್ಟ್ ನಲ್ಲಿ 16ನೇ ಮಹಡಿಯಲ್ಲಿದ್ದ ಮಹಿಳೆ ತನ್ನ ಸಾಕು ನಾಯಿಕೊಂದಿಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಬಾಲಕಿಗೆ ನಾಯಿ ಕಚ್ಚಿದೆ.

ಬಳಿಕ ಬಾಲಕಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಈ ವೇಳೆ ನಾಯಿ ಮಾಲೀಕರ ಫ್ಲ್ಯಾಟ್ ಬಳಿಗೆ ಹೋಗಾದ ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಿ ಮಾಲೀಕರು ಹಾಗೂ ಮಹಿಳೆ ವಿರುದ್ಧ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com