ಬೀದಿ ನಾಯಿಗಳಿಗೆ ಆಹಾರ ನೀಡಿದ ಮಹಿಳೆ ಮೇಲೆ ಐವರಿಂದ ಹಲ್ಲೆ: ಪ್ರಕರಣ ದಾಖಲು

ಬೀದಿನಾಯಿಗಳಿಗೆ ಆಹಾರ ನೀಡಿದ ಮಹಿಳೆಯೊಬ್ಬರ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ಚಾಲುಕ್ಯನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೀದಿನಾಯಿಗಳಿಗೆ ಆಹಾರ ನೀಡಿದ ಮಹಿಳೆಯೊಬ್ಬರ ಮೇಲೆ ಐವರು ಹಲ್ಲೆ ನಡೆಸಿರುವ ಘಟನೆ ಚಾಲುಕ್ಯನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಮುನಾ ಎನ್‌ಸಿ ಎಂಬ 57 ವರ್ಷದ ಮಹಿಳೆ ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

ಬೀದಿನಾಯಿಗಳಿಗೆ ಆಹಾರ ನೀಡುವುದನ್ನು ವಿರೋಧಿಸಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ನನ್ನ ಮೇಲೆ ಹಲ್ಲೆ ನಡೆಸಿ, ನಾನು ಧರಿಸಿದ್ದ ಬಟ್ಟೆ ಹರಿದು ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಭಾನುವಾರ ರಾತ್ರಿ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚಾಲುಕ್ಯನಗರ, 2ನೇ ಮೇನ್, ತೆಂಗಿನ ತೋಟದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಯಮುನಾ ಅವರು ಬಂದಿದ್ದಾರೆ. ಈ ವೇಳೆ ನಂದನ್ ಎಂಬ ವ್ಯಕ್ತಿ ಹಾಗೂ ನಾಲ್ವರು ಮಹಿಳೆಯರು ಯಮುನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರತೀ ನಿತ್ಯ ರಾತ್ರಿ ಸಮಯದಲ್ಲಿ 12 ನಾಯಿಗಳಿಗೆ ಆಹಾರ ನೀಡಲು ಹೋಗುತ್ತೇನೆ. ಸ್ಥಳೀಯರು ರಾತ್ರಿ ವೇಳೆ ನಾಯಿಗಳು ಬೊಗಳುತ್ತವೆ. ಆಹಾರ ನೀಡದಂತೆ ತಿಳಿಸಿದ್ದರು.

ಭಾನುವಾರ ನಾಯಿಗಳಿಗೆ ಆಹಾರ ನೀಡಲು ಹೋದಾಗ ನಂದನ್ ಹಾಗೂ ನಾಲ್ವರು ಮಹಿಳೆಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಬಳಿಕ ಹಲ್ಲೆ ನಡೆಸಿ, ನನ್ನ ಬಟ್ಟೆಯನ್ನು ಹರೆದು ಹಾಕಿದರು ಯಮುನಾ ಅವರು ಆರೋಪಿಸಿದ್ದಾರೆ.

ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ (SPCA) ಸದಸ್ಯ ಹರೀಶ್ ಕೆ ಬಿ ಅವರು ಘಟನೆಯನ್ನು ಖಂಡಿಸಿದ್ದು, ಪ್ರಾಣಿಪ್ರಿಯರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೆಲವು ನಿವಾಸಿಗಳು ಸರಿಯಾದ ಅನುಮತಿಯಿಲ್ಲದೆ ಬೀದಿ ನಾಯಿಗಳಿಗೆ ಆಹಾರ ನೀಡುವವರ ಮೇಲೆ ನಿಷೇಧ ಹೇರಿದ್ದಾರೆ. ಈ ಕ್ರಮವು ನಾಗರಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಉಲ್ಲಂಘಿಸಿದಂತೆ ಹಾಗೂ ಭಾರತ ಸರ್ಕಾರ ಮತ್ತು ಭಾರತದ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರ ನಾಯಿಗಳಿಗೆ ಆಹಾರ ನೀಡಲು ಹೋದಾಗ ನಂದನ್ ಹಾಗೂ ಇತರೆ ನಾಲ್ವರು ಮಹಿಳೆಯರು ನನ್ನ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿ ಬಟ್ಟೆ ಹರಿದಿದ್ದಾರೆ.-’’ ಎಂದು ಯಮುನಾ ಆರೋಪಿಸಿದ್ದಾರೆ.ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಸೊಸೈಟಿ (ಎಸ್‌ಪಿಸಿಎ) ಸದಸ್ಯ ಹರೀಶ್ ಕೆ ಬಿ ಖಂಡಿಸಿ ಬೀದಿ ನಾಯಿಗಳಿಗೆ ರಕ್ಷಣೆ ಕೋರಿದ್ದಾರೆ. ಫೀಡರ್ಸ್ -" ಕೆಲವು ನಿವಾಸಿಗಳು ಸರಿಯಾದ ಅನುಮತಿಯಿಲ್ಲದೆ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದ್ದಾರೆ. ಈ ಕ್ರಮವು ನಾಗರಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಉಲ್ಲಂಘಿಸುತ್ತದೆ ಆದರೆ ಭಾರತ ಸರ್ಕಾರ ಮತ್ತು ಭಾರತದ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶಗಳಿಗೆ ವಿರುದ್ಧವಾಗಿದೆ.-" ಹರೀಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com