

ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಚಾಲಕರನ್ನು ದರೋಡೆ ಮಾಡುತ್ತಿದ್ದ 23 ವರ್ಷದ ಯುವಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಎಚ್‌ಎಎಲ್‌ನ ರೆಡ್ಡಿ ಪಾಳ್ಯದ ನಿವಾಸಿ ವಿನಯ್ ಎನ್ ಎಂದು ಗುರುತಿಸಲಾಗಿದೆ. ಜೂನ್.9 ರ ಬೆಳಗಿನ ಜಾನ 4 ಗಂಟೆಗೆ ವೈಟ್ ಫೀಲ್ಡ್ ನಿಂದ 4 ಗಂಟೆಗಳ ಕಾಲದವರೆಗೆ ಕ್ಯಾಬ್ ವೊಂದನ್ನು ಬುಕ್ ಮಾಡಿದ್ದಾನೆ.
ಕ್ಯಾಬ್ ಹತ್ತಿದ ಬಳಿಕ ಚಾಲಕನನ್ನು ಬೆದರಿಸಿ, ರೂ.15,000 ನಗದು, ಡೆಬಿಟ್ ಕಾರ್ಡ್ ಪಡೆದು ಪರಾರಿಯಾಗಿದ್ದಾನೆ. ಈ ಸಂಬಂಧ ಚಾಲಕ ನೀಡಿದ ದೂರನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತನಿಂದ ರೂ.10,700 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿ ಇದೇ ರೀತಿ 4 ದರೋಡೆಗಳನ್ನು ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.