ಕೊರೋನಾದಿಂದ ಪತಿ ಸಾವು: ಹೃದಯಾಘಾತದಿಂದ ಕೆಂಗೇರಿ ಮಹಿಳಾ ಸಂಚಾರಿ ಪೊಲೀಸ್ ಸಾವು; ಅನಾಥವಾದ ಮಗು

ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರಿಯಾಂಕಾ ಮೃತ ದುರ್ದೈವಿ. ಭಾನುವಾರ ರಾತ್ರಿ 11.30ರ ಸುಮಾರಿಗೆ ಹೃದಯಾಘಾತದಿಂದ ಪ್ರಿಯಾಂಕಾ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪ್ರಿಯಾಂಕಾ ಮೃತ ದುರ್ದೈವಿ. ಭಾನುವಾರ ರಾತ್ರಿ 11.30ರ ಸುಮಾರಿಗೆ ಹೃದಯಾಘಾತದಿಂದ ಪ್ರಿಯಾಂಕಾ ಮೃತಪಟ್ಟಿದ್ದಾರೆ.

ಪ್ರಿಯಾಂಕಾ 2018ರಲ್ಲಿ ಮದುವೆಯಾಗಿದ್ದರು. ಆದರೆ 2021ರ ಕೊರೊನಾ ಸಮಯದಲ್ಲಿ ಪ್ರಿಯಾಂಕಾ ಪತಿ ಮೃತಪಟ್ಟಿದ್ದರು. ಪತಿ ಸಾವಿನ ವೇಳೆ ಪ್ರಿಯಾಂಕಾ ಒಂದು ತಿಂಗಳ ಗರ್ಭಿಣಿಯಾಗಿದ್ದರು.

ಇದೀಗ ವಿಧಿಯಾಟಕ್ಕೆ ಪ್ರಿಯಾಂಕ ಹೃದಯಾಘಾತದಿಂದ ಮೃತಪಟ್ಟಿದ್ದು, ಆಕೆಯ ಮಗು ಅನಾಥವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com