ಬನ್ನೇರುಘಟ್ಟ: ತಾಯಿ ಕಾಲ್ತುಳಿತಕ್ಕೆ ಸಿಲುಕಿ ಮರಿ ನೀರಾನೆ ಸಾವು

ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಾಯಿಯ ಕಾಲ್ತುಳಿತಕ್ಕೆ ಸಿಲುಕಿದ ಮರಿ ನಿರಾನೆ (ಹಿಪ್ಪೊಪೊಟಮಸ್‌)ಯೊಂದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಬುಧವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹುಟ್ಟಿದ ಕೆಲವೇ ಗಂಟೆಗಳಲ್ಲಿ ತಾಯಿಯ ಕಾಲ್ತುಳಿತಕ್ಕೆ ಸಿಲುಕಿದ ಮರಿ ನಿರಾನೆ (ಹಿಪ್ಪೊಪೊಟಮಸ್‌)ಯೊಂದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಬುಧವಾರ ನಡೆದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದ್ದ ಹೆಣ್ಣು ನೀರಾನೆ ಬುಧವಾರ ಬೆಳಗಿನ ಜಾವ ಮರಿಗೆ ಜನ್ಮ ನೀಡಿದೆ. ಈ ಸಂದರ್ಭದಲ್ಲಿ ತಾಯಿಯ ಕಾಲ್ತುಳಿತಕ್ಕೆ ಸಿಲುಕಿ ಮರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಡಿನಲ್ಲಿ ಜನ್ಮ ನೀಡುವ ಹೆಣ್ಣು ನೀರಾನೆಗಳು ಪ್ರಸವದ ಸಂದರ್ಧಲ್ಲಿ ಮರಿಗಳ ರಕ್ಷಣೆ ಮಾಡಲು ಪ್ರತ್ಯೇಕ ಸ್ಥಳಕ್ಕೆ ತೆರಳುತ್ತವೆ. ಆದರೆ, ಮೃಗಾಲಯದಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಪ್ರತ್ಯೇಕ ಸ್ಥಳದಲ್ಲಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಿಬ್ಬಂದಿಗಳೇ ಅವುಗಳನ್ನು ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಈ ಪ್ರಕರಣದಲ್ಲಿ ನೀರಾನೆ ದಶ್ಯಾ 7.5 ತಿಂಗಳಿನಲ್ಲಿ ಮರಿಗೆ ಜನ್ಮ ನೀಡಿದ್ದರಿಂದಾಗಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ, ನೀರಾನೆ ಎಂಟನೇ ತಿಂಗಳಲ್ಲಿ ಮಾತ್ರ ಜನ್ಮ ನೀಡುತ್ತಾದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದಶ್ಯಾಗೆ ಹೆರಿಗೆಯಾಗಿದೆ. ಪರೀಕ್ಷೆ ವೇಳೆ ಗಂಡು ಮರಿ ಸಾವನ್ನಪ್ಪಿರುವುದು ತಿಳಿದುಬಂದಿತ್ತು ಎಂದು ಬಿಬಿಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಹಿಂದೆಯೂ ದಶ್ಯಾ ಮೂರು ಮರಿಗಳನ್ನು ಇದೇ ರೀತಿ ಕಳೆದುಕೊಂಡಿತ್ತು. ದಶ್ಯಾ ಜನ್ಮ ನೀಡಿದ್ದ ಅಲೋಕ್ ಮತ್ತು ಸನ್ನಿ ನಿರಾನೆಗಳಿಗೆ ಕ್ರಮವಾಗಿ 3 ಮತ್ತು 2 ವರ್ಷಗಳಾಗಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com