ಗಗನಕ್ಕೇರಿದ ಹಣ್ಣು, ತರಕಾರಿಗಳ ಬೆಲೆ: ಗ್ರಾಹಕರು ಹೈರಾಣ

ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮವರ್ಗದ ಜನರು ತತ್ತರಿಸಿ ಹೋಗುತ್ತಿದ್ದು, ಇದೀಗ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಜನತೆ ಕಂಗಾಲಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಈಗಾಗಲೇ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮವರ್ಗದ ಜನರು ತತ್ತರಿಸಿ ಹೋಗುತ್ತಿದ್ದು, ಇದೀಗ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಜನತೆ ಕಂಗಾಲಾಗುವಂತೆ ಮಾಡಿದೆ.

ಮೇ ತಿಂಗಳಿಗೆ ಹೋಲಿಕೆ ಮಾಡಿದರೆ ಅತ್ಯಗತ್ಯ ತರಕಾರಿಗಳಾದ ಟೊಮ್ಯಾಟೋ, ಈರುಳ್ಳು, ಬೆಳ್ಳುಳ್ಳಿ ಬೆಲೆಗಳು ಮೂರು ಹೆಚ್ಚಾಗಿದೆ.

ಈ ಹಿಂದೆ ಪ್ರತೀ ಕೆಜಿ ರೂ.15 ಇದ್ದ ಟೊಮ್ಯಾಟೋ ಬೆಲೆ ಇದೀಗ ರೂ.60ಕ್ಕೆ ಏರಿಕೆಯಾಗಿದೆ. ರೂ.45 ಇದ್ದ ಬೀನ್ಸ್ ಬೆಲೆ ರೂ.80ಕ್ಕೆ ಏರಿಕೆಯಾಗಿದೆ. ಹಾಪ್ ಕಾಮ್ಸ್'ಗಳಲ್ಲಿ ರೂ.115ರಷ್ಟಿದೆ.

ಕೇವಲ ಟೊಮ್ಯಾಟೋ, ಬೀನ್ಸ್ ಅಷ್ಟೇ ಅಲ್ಲದೆ, ಈರುಳ್ಳಿ ಬೆಲೆ ಕೂಡ ಗಮನಕ್ಕೇರಿದೆ. ಇನ್ನು ರೂ.24 ಇದ್ದ ಆಲೂಗಡ್ಡೆ ಬೆಲೆಯು ರೂ.40ಕ್ಕೆ ಏರಿಕೆಯಾಗಿದೆ.

ಇನ್ನು ಹಣ್ಣುಗಳ ವಿಚಾರಕ್ಕೆ ಬಂದರೆ ಮಾವಿನ ಹಣ್ಣುಗಳ ಬೆಲೆ ಗಗನಕ್ಕೇರಿದೆ. ರೂ.100 ಇದ್ದ ಅಲ್ಫಾನ್ಸೋ ಮಾವಿನ ಹಣ್ಣುಗಳ ಬೆಲೆ ರೂ.145ಕ್ಕೆ ಏರಿಕೆಯಾಗಿದೆ. ಕೆಜಿಗೆ ರೂ.120 ಇದ್ದ ಆರೆಂಜ್ ಬೆಲೆ ರೂ.137ಕ್ಕೆ ಏರಿಕೆಯಾಗಿದೆ. ಹಾಪ್ ಕಾಮ್ಸ್ ಗಳಲ್ಲಿ ರೂ.245ಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಸೇಬುಗಳ ಬೆಲೆ ಪ್ರತಿ ಕೆಜಿಗೆ ರೂ.245ಕ್ಕೆ ಏರಿಕೆಯಾಗಿದೆ. ಮೂಸಂಬಿ ಬೆಲೆ ರೂ.110ಕ್ಕೆ ಏರಿಕೆಯಾಗಿದೆ.

2 ದಿನಗಳ ಹಿಂದೆ ರೂ.60 ಇದ್ದ ಮಾವಿನ ಹಣ್ಣುಗಳ ಬೆಲೆ ಇಂದು ರೂ.90ಕ್ಕೆ ಏರಿಕೆಯಾಗಿದೆ ಎಂದು ಹಾಪ್ ಕಾಮ್ಸ್'ನಲ್ಲಿ ಹಣ್ಣು ಖರೀದಿಗೆ ಬಂದ ಗ್ರಾಹಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬಾಳೆಹಣ್ಣುಗಳ ಬೆಲೆಯಲ್ಲಿ ಮಾತ್ರ ಕೊಂಚ ಇಳಿಕೆ ಕಂಡು ಬಂದಿದೆ. ಕೆಜಿಗೆ ರೂ.50 ಇದ್ದಾ ರೋಬಸ್ಟಾ ತಳಿಯ ಬಾಳೆಹಣ್ಣು ರೂ.40ಕ್ಕೆ ಇಳಿಕೆಯಾಗಿದೆ. ಕೆಜಿಗೆ ರೂ.80 ಇದ್ದ ಏಲಕ್ಕಿ ಬಾಳೆಹಣ್ಣಿನ ಬೆಲೆ ರೂ.72ಕ್ಕೆ ಇಳಿಕೆಯಾಗಿದೆ.

ಸರಬರಾಜು ಮತ್ತು ಬೇಡಿಕೆಯ ಆಧಾರದ ಮೇಲೆ, ನಾವು ತರಕಾರಿಗಳು ಮತ್ತು ಹಣ್ಣುಗಳ ಬೆಲೆಗಳನ್ನು ನಿಯಮಿತವಾಗಿ ಬದಲಾಯಿಸುತ್ತೇವೆ" ಎಂದು ಲಾಲ್‌ಬಾಗ್‌ನ ಹಾಪ್‌ಕಾಮ್ಸ್‌ನ ಮಾರುಕಟ್ಟೆ ಮುಖ್ಯಸ್ಥ ಜಯಪ್ರಕಾಶ್ ಅವರು ಹೇಳಿದ್ದಾರೆ.

ಪಿಜಿಯಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ಖರೀದಿ ಕೈಗೆಟುಕುವ ರೀತಿಯಲ್ಲಿ ಇಲ್ಲ. ಬೆಳಗಿನ ಉಪಾಹಾರಕ್ಕಾಗಿ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಬೆಲೆ ಏರಿಕೆಯಾಗಿರುವುದು ಬೇಸರ ತರಿಸಿದೆ. ಮಾವು ಮತ್ತು ಸೇಬುಗಳಂತಹ ಹಣ್ಣುಗಳ ಬೆಲೆಗಳು ಬಹಳ ಹೆಚ್ಚಾಗಿದೆ. ದಿನನಿತ್ಯದ ಖರ್ಚುವೆಚ್ಚಗಳನ್ನು ನೋಡಿದರೆ ಹಣ್ಣುಗಳ ಖರೀದಿ ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರಿನ ಪಿಜಿಯಲ್ಲಿ ವಾಸಿಸುವ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಮೇ ಮತ್ತು ಜೂನ್ ತಿಂಗಳಿಗೆ ಹೋಲಿಕ ಮಾಡಿದರೆ ಹಣ್ಣು ಮತ್ತು ತರಕಾರಿಗಳ ಬೆಲೆ ಇಂತಿದೆ...

  • ಟೊಮೆಟೊ: 15 ರಿಂದ 60 ರೂ
  • ಈರುಳ್ಳಿ: 20 ರಿಂದ 30 ರೂ
  • ಆಲೂಗಡ್ಡೆ: 24 ರಿಂದ 30 ರೂ
  • ಬೀನ್ಸ್: 45 ರಿಂದ 85 ರೂ
  • ಸೌತೆಕಾಯಿ: 30 ರಿಂದ 40 ರೂ
  • ಬಾಳೆಹಣ್ಣು: 50 ರಿಂದ 40 ರೂ
  • ಅಲ್ಫೋನ್ಸೋ ಮಾವು: 100 ರಿಂದ 145 ರೂ
  • ಸೇಬು: 180 ರಿಂದ 220 ರೂ
  • ಮೋಸಂಬಿ: 90 ರಿಂದ 110 ರೂ
  • ಅನಾನಸ್: 50 ರಿಂದ 60 ರೂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com